1008 ಮುತೈದೆಯರಿಗೆ ಉಡಿ – ತುಂಬುವ ಕಾರ್ಯಕ್ರಮ.
ಚಿತ್ತಾಪುರ ಜ.01

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ.ಎನ್ ಗ್ರಾಮದಲ್ಲಿ ಇದೇ ಜನೇವರಿ 3 ರಂದು ಶನಿವಾರ ದಿನ ದಂದು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ನೇತೃತ್ವದಲ್ಲಿ ಹಾಗೂ ಸುಪುತ್ರರಾದ ಅಭಿನವ ಡಾ, ಕುಮಾರ ಭೋಜರಾಜನ 30 ನೇ. ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಸಂಜೆ ೫ ಗಂಟೆಗೆ ‘1008’ ಸುಮಂಗಲಿಯರಿಗೆ ಉಡಿ ತುಂಬುವ ಹಾಗೂ ತುಲಾಭಾರ ಕಾರ್ಯಕ್ರಮ ನೇರವೇರಲಿದೆ ಎಂದು ಶ್ರೀ ಭೋಜಲಿಂಗೇಶ್ವರ ಮಠದ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರು ದಿವ್ಯ ಸಾನಿಧ್ಯ ವಹಿಸಲಿದ್ದು. ನಾಡಿನ ಹಲವು ಗಣ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಶ್ರೀ ಕುಮಾರ ಭೋಜರಾಜನ ಹಾಗೂ ಶ್ರಿ ಹಿರಗಪ್ಪ ತಾತನವರಿಗೆ ಹಂಪನಗೌಡ ಭಕ್ತರಿಂದ ತುಲಾಭಾರ, ಮತ್ತು ಸುಗೂರ.ಎನ್ ಭಕ್ತರಿಂದ ಕೇಕ್ ಸೇವೆ ಸೇರಿದಂತೆ ಹಲವು ದಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.ಇದೇ ಸಂಧರ್ಭದಲ್ಲಿ ಸಮಾಜ ಮುಖಿ ಕಾರ್ಯಗಳನ್ನು ಆಯೋಜನೆ ಮಾಡಲಾಗಿರುತ್ತದೆ. ಶ್ರೀ ಭೋಜಲಿಂಗೇಶ್ವರ ಮಠದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಂದ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಲಾಗುವುದು. ಹಾಗೇ ಕಲಬುರಗಿ ಜಿಲ್ಲೆಯ ಸ್ಟಾರ್ ಕೇರ್ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ, ಹಾಗೂ ಸ್ಟಾರ ಲೈಪ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ವೇದಾ ಕಣ್ಣಿನ ಆಸ್ಪತ್ರೆ ಯಾದಗಿರ ಅವರ ಕಡೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಭಿರ ಮತ್ತು ನವ ಜೀವನ ರಕ್ತದಾನ ಕೇಂದ್ರ ಕಲಬುರಗಿ ಈ ಆರೋಗ್ಯ ಶಿಬಿರ ಕಾರ್ಯಕ್ರಮ ಶ್ರೀ ಮಠದ ಆವರಣದಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿರುತ್ತದೆ.

ಇದೇ ಜನೇವರಿ-3 ರಂದು ಶನಿವಾರ ಬೆಳಿಗ್ಗೆ 10 ರಿಂದ ಸಂಜೆಯ ವರೆಗೂ ಈ ಆರೋಗ್ಯ ತಪಾಸಣೆ ಶಿಬಿರ ಇರುವುದರಿಂದ ಇದರ ಸದುಪಯೋಗ ಶ್ರೀ ಮಠದ ಸಂಧ್ಬಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸುಗೂರ.ಎನ್ ಗ್ರಾಮಸ್ಥರು ಸೇರಿದಂತೆ ತಾವು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳಿ ಬಿ.ಪಿ ಶುಗರ್ ಹಾಗೂ ಮೊಣಕಾಲಿನ ಕೀಲುಗಳ ನೋವು ಮತ್ತು ಯಾದಗಿರ ಜಿಲ್ಲೆಯ ವೇದಾ ಕಣ್ಣಿನ ಆಸ್ಪತ್ರೆಯವ ತಜ್ಞರು ಹಾಗೂ ಮಕ್ಕಳ ಡಾಕ್ಟರ್, ಗರ್ಭಿಣಿಯರಿಗೆ. ವಿವಿಧ ರೀತಿಯಲ್ಲಿ ಸೇವೆ ನಡೆಯಲಿದೆ. ತಾವೆಲ್ಲರೂ ಸಹ ಭಾಗವಹಿಸಿ ಈ ಸಮಾಜ ಮುಖಿ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ ಮಾಡಲಾಗುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಎಂದು ಊರಿನ ಪ್ರಮುಖರಾದ ಶರಣಗೌಡ ಬೆನಕನಹಳ್ಳಿ. ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್. ವಿಶ್ವನಾಥ ರೆಡ್ಡಿ ಪಾಟೀಲ್ ಸುಗೂರ.ಎನ್. ಈರಣ್ಣ ಬಲಕಲ್ LIC ಯಾದಗಿರ. ಶಿಕ್ಷರ ಶರಣಬಸಪ್ಪ ನಾಸಿ ಸರ ಹಾಗೂ ಸಿದ್ರಾಮರೆಡ್ಡಿ ಗೌಡ ಬೆನಕನಹಳ್ಳಿ ಸೇರಿದಂತೆ ಸಿದ್ದು ಗೌಡ ಕುರಾಳ. ಮತ್ತು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕೆಯಲ್ಲಿ ಪ್ರಕಟಣೆ ನೀಡಿದರು.

