“ಮುತ್ತಾಗಿ ಹೊಳೆದಾರ ಸಿದ್ದರಾಮಯ್ಯ”…..

ತಂದೆ ತಾಯಿನ ನೆನದಾರೋ ಮನದಾಗಸಿದ್ದರಾಮನ ಹುಂಡಿ ಗ್ರಾಮದಾಗ ಹುಟ್ಟ್ಯಾರೊಬಡವರಿಗೆ ಭಾಗ್ಯವ ತಂದವರುಸಂಕಷ್ಟಗಳ ಮಳೆಯಲಿ ನೆಂದಾರೋಮಾತಿನ ಚಕಮಕಿ ಸಿಡಿಲು ಹೊಡೆದಾಂಗ ||೧||
ಹಾಲು ಮತದಾಗ ಹುಟ್ಟೈತಿ ಈ ಜೀವ ಸಭಾದಾಗ ಕರಿಯ ಎತ್ತ ತೊಡವಿದಂಗಹಸ್ತದ ಗುರಿತಿಗೆ ಹೊನ್ನಾಗಿ ನಿಂತಾರೋಮೈತ್ರಿ ಕೂಟದಾಗ ಮುತ್ತಾಗಿ ಹೊಳೆದಾರ ||೨||
ಜನರ ಬೆಂಬಲ ಕಟ್ಯಾರ ಶಿಖರದ ಎತ್ತರಕ್ಕೆಕಂಬಳಿ ಹೊತ್ತಾರ; ಪೇಟವ ಸುತ್ಯಾರ ಕೈಮುಗದ ನಿಂತಾರರೈತರು ಮೆಚ್ಚ್ಯಾರ ಸಿದ್ದರಾಮಯ್ಯನವರ ಸರಕಾರಸರಕಾರದಾಗ ಸಜ್ಜನರ ಸಂಘ ಕಟ್ಟ್ಯಾರ |l೩||

ಸೆಳೆಯಿತೋ ಸಂಗೀತ ಸಾಹಿತ್ಯಕ್ಕೆ ಈ ಮನವರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದು ಆಳಿದರುಸಿದ್ದರಾಮೆಗೌಡ- ಬೋರಮ್ಮ ಅವರ ಮಗನಾಗಿ ೧೯೪೮ ರ ಅಗಸ್ಟ ೧೨ ರಂದು ಭಾರತ ಮಾತೆಯ ಮಡಿಲಿನಲ್ಲಿ ಜನಿಸಿದರು ||೪||
ಸಿ- ಸಕಲ ಕಾರ್ಯಗಳಿಗೆ ಸಿದ್ದದ್ದ- ದೇವರು ಒಲಿದಾನ ಧರ್ಮದ ಪಾಲಿಗೆರಾ- ರಾಮನ ಬಿಲ್ಲಿನಂತೆ ಗುರಿ, ರಾಜಕೀಯ ಇವರ ಆಸ್ತಿಮ- ಮಕ್ಕಳ ಭವಿಷ್ಯ ಕಟ್ಯಾರಯ್ಯ- ಯಾತ್ರೆ ಹುಡ್ಯಾರ ರೈತರ ಸಲುವಾಗಿ ll೫||
ಕವಯಿತ್ರಿ:ಶ್ರೀಮತಿ ಪ್ರತಿಭಾ.ಭೀಮೂ.ವಾಲೀಕಾರ
ಖಜಗಲ್

