ಕಬ್ಬು ಕಟಾವು ಮತ್ತು ಸಾಗಾಣಿಗಾನಿದಾರರ ಧರಣಿ ಸತ್ಯಾಗ್ರಹ ಸ್ಥಳಕ್ಕೆ – ಚುನ್ನಪ್ಪ ಪೂಜಾರಿ ಭೇಟಿ.
ಆಲಮೇಲ ನ.15
ಕಬ್ಬು ಕಟಾವು ಮತ್ತು ಸಾಗಾಣಿಕೆ ದಾರರ ಸಂಘ ಹಾಗೂ ರೈತರ ಸಂಘಟನೆಗಳು ತಾಲೂಕು ಸಮಿತಿ ಆಲಮೇಲ.ಕಬ್ಬು ಬೆಳೆಗಾರರ ಹೋರಾಟ ಮತ್ತು ಕಬ್ಬಿನ ದರ ನಿಗದಿ ಪಡಿಸದ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹೋರಾಟ ಹಾಗೂ ಶಾಲು ಜಿಕ್ಷೆ ಸಮಾರಂಭ. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಷ, ಬ್ರ ಚಂದ್ರಶೇಖರ್ ಶಿವಾಚಾರ್ಯರು ಗುರು ಸಂಸ್ಥಾನ ಹಿರೇಮಠ ಆಲಮೇಲ ಹಾಗೂ ಮಲ್ಲಿ ಬೊಮ್ಮಯ್ಯ ಮಹಾಸ್ವಾಮಿಗಳು ವಿರಕ್ತ ಮಠ ಆಲಮೇಲ ವಹಿಸಿ ಕೊಂಡಿದ್ದರು. ಚುನ್ನಪ್ಪ ಪೂಜಾರಿ ಹಸಿರು ಸೇನೆ ರಾಜ್ಯಾಧ್ಯಕ್ಷರು ಸಸಿಗೆ ನೀರು ಎರಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಮತ್ತು ಕಬ್ಬು ಕಟಾವು ಹಾಗೂ ಸಾಗಾಣಿಕೆದಾರರ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಎ.ಪಿ.ಎಂ.ಸಿಯ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷರು ಆಲಮೇಲ ಸಮಾರಂಭ ವೇದಿಕೆ ಮೇಲೆ ಉಪಸ್ಥಿತರಿದ್ದರು. ಚುನ್ನಪ್ಪ ಪೂಜಾರಿ ಹಸಿರು ಸೇನೆ ರಾಜ್ಯಾಧ್ಯಕ್ಷ ಮಾತನಾಡಿ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದು ಕಾರ್ಖಾನೆಯ ಮಾಲೀಕರು ಟ್ರ್ಯಾಕ್ಟರ್ ಮಾಲೀಕರಿಗೆ ಬಾಕಿ ಬರತಕ್ಕಂತ ಹಣವನ್ನು ಕೂಡಲೇ ನೀಡಬೇಕು ಹಾಗೂ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಭೂಮಿಯನ್ನು ನೀಡಿರುವ ರೈತರ ಮಕ್ಕಳಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಬೇಕು ಕಬ್ಬು ಬೆಳೆದ ರೈತರಿಗೆ ಪ್ರತಿ ಟನ್ ಗೆ 3160 ರೂಪಾಯಿ ನಿಗದಿತ ಬೆಲೆ ನೀಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೈತರು ಕಬ್ಬಿನ ತೂಕದಲ್ಲಿ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಅದಕ್ಕೆ ಎಪಿಎಂಸಿಯ ಅಧ್ಯಕ್ಷ ಬಸವರಾಜ್ ಬಾಗೇವಾಡಿ ಅವರು ಎಪಿಎಂಸಿ ಆಲಮೇಲ ವತಿಯಿಂದ ಸರ್ಕಾರದ ಕಡೆಯಿಂದ ತೂಕದ ಯಂತ್ರ ಮಾಡಿ ಕೊಡುವುದಾಗಿ ರೈತರಿಗೆ ಶಪಥ ಮಾಡಿದರು ಇದೇ ಸಂದರ್ಭದಲ್ಲಿ ರೈತರು ಕಡಣಿ ಕೆಪಿಆರ್ ರಸ್ತೆಯ ಕಡೆ ತೂಕದ ಯಂತ್ರವನ್ನು ಅಳವಡಿಸ ಬೇಕೆಂದು ತಿಳಿಸಿದರು.
ಆಗ ರೈತರೊಬ್ಬರು 20 ಗುಂಟೆ ಜಮೀನು ನೀಡುವುದಾಗಿ ಹೇಳಿದರು ಆಗ ಶಾಸಕರಾದ ಅಶೋಕ್ ಮನಗೂಳಿ ಅವರ ಜೊತೆ ಚರ್ಚಿಸಿ ಕೂಡಲೇ ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಹೋಗುವ ಕಡಣಿ ರಸ್ತೆಯಲ್ಲಿ ತೂಕದ ಯಂತ್ರವನ್ನು ಮಾಡುವುದಾಗಿ ಎಪಿಎಂಸಿ ಅಧ್ಯಕ್ಷ ತಿಳಿಸಿದರು.
ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಸಾಧಿಕ್ ಸುಂಬಡ್ ಮಾತನಾಡಿ ರೈತರಿಗೆ ಅನ್ಯಾಯವಾಗುತ್ತಿದೆ ರೈತರ ಬೆಂಬಲ ಬೆಲೆ ಹಾಗೂ ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಬಾಕಿ ಹಣವನ್ನು ನೀಡಿ ಕಾರ್ಖಾನೆಯನ್ನು ಪ್ರಾರಂಭಿಸಿ ಇಲ್ಲದಿದ್ದರೆ ಕಾರ್ಖಾನೆಯನ್ನು ಪ್ರಾರಂಭಿಸಲು ಬಿಡುವುದಿಲ್ಲ ಎಂದು ಹೇಳಿದರು.
ಈ ಸಮಾರಂಭದಲ್ಲಿ ಆಲಮೇಲ ತಾಲೂಕಿನ ಹಾಗೂ ಸುತ್ತಮುತ್ತಲಿನ ತಾಲೂಕಿನ ರೈತ ಮುಖಂಡರು ಹಾಗೂ ರೈತರು ಭಾಗವಹಿಸಿ ತಮಗೆ ಸಕ್ಕರೆ ಕಾರ್ಖಾನೆಯ ಮಾಲೀಕರಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳಿ ಕೊಂಡರು.

ನಂತರ ಕೆಪಿಆರ್ ಸಕ್ಕರೆ ಕಾರ್ಖಾನೆಯ ಎದುರು ಹಸಿರು ಸೇನಾ ಅಧ್ಯಕ್ಷರಾದ ಚುನ್ನಪ್ಪ ಪೂಜಾರಿ ಮತ್ತು ಆಲಮೇಲ ತಸಿಲ್ದಾರ್ ಅರಿಕೇರಿ ಹಾಗೂ ಕೆಪಿಆರ್ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ್ ಜೋಗುರ್ ಮತ್ತು ಸಮ್ಮುಖದಲ್ಲಿ ಚರ್ಚಿಸಿದರು. ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದ್ ಅಂಗಡಿ ಸೂಕ್ತ ಬಂದೋಬಸ್ತ ಒದಗಿಸಿದ್ದರು.
ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ್ ಜೋಗುರ್ ಹಾಗೂ ಆಲಮೇಲ ತಹಶೀಲ್ದಾರ ಅರಕೇರಿ ತಮಗೆ ನ್ಯಾಯ ಸಿಗುವಂತೆ ಜಿಲ್ಲಾಧಿಕಾರಿಗಳ ಜೊತೆ ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದು ಹೇಳಿದರು. ಆಲಮೇಲ ತಾಲೂಕಿನ ಹಾಗೂ ರೈತಮುಖಂಡರು ಹಾಗೂ ರೈತಪರ ಹೋರಾಟಗಾರರು ರೈತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

