ಕಬ್ಬು ಕಟಾವು ಮತ್ತು ಸಾಗಾಣಿಗಾನಿದಾರರ – ಹೋರಾಟಕ್ಕೆ ಸಿಕ್ಕ ಜಯ.
ಆಲಮೇಲ ನ.15

ಕೆಪಿಆರ್ ಸಕ್ಕರೆ ಕಾರ್ಖಾನೆಯ ಎದುರು ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘ ತಾಲೂಕು ಸಮಿತಿ ಆಲಮೇಲ 2023-24 ನೇ. ಸಾಲಿನ ಬರ ಬೇಕಾಗಿರುವ 57 ಮತ್ತು 28 ರೂಪಾಯಿ ಬಿಡುಗಡೆ ಮಾಡಬೇಕೆಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಕೊನೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಕ್ಕೆ ಇಂದು ಜಯ ದೊರಕಿತು. ಟ್ರ್ಯಾಕ್ಟರ್ ಮಾಲೀಕರು ಮತ್ತು ಕಬ್ಬು ಕಟಾವು ಹಾಗೂ ಸಾಗಾಣಿಕೆದಾರರ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕೋಡಿ ಉಪಾಧ್ಯಕ್ಷ ಮಾಂತೇಶ್ ಕತ್ತಿ ಹಾಗೂ ಸರ್ವ ಸದಸ್ಯರು ಮತ್ತು ಟ್ರ್ಯಾಕ್ಟರ್ ಮಾಲೀಕರ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ವಿಜಯೋತ್ಸವ ಆಚರಿಸಿ ಸಹಿ ಹಂಚಿ ಬಣ್ಣ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕಬ್ಬು ಕಟಾವು ಮತ್ತು ಸಾಗಾಣಿಕೆ ದಾರರ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕೋಡಿ ಮತ್ತು ಉಪಾಧ್ಯಕ್ಷ ಮಾಂತೇಶ್ ಕತ್ತಿ ಅವರಿಗೆ ಸನ್ಮಾನಿಸಿ ಸಿಹಿ ತಿನಿಸಿ ಸಂತೋಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಆಲ ಮೇಲ ತಾಲೂಕಿನ ಎಲ್ಲಾ ಟ್ರ್ಯಾಕ್ಟರ್ ಮಾಲೀಕರು ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ಸಮ್ಮುಖದಲ್ಲಿ ಕೆಪಿಆರ್ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ್ ಜೋಗುರ್ ಆಡಳಿತ ಅಧಿಕಾರಿಯಾದ ಪಾರ್ಥಿವನ್ ತಮಗೆ ನೀಡಬೇಕಾದ ಬಾಕಿ ಹಣವನ್ನು ಜನವರಿ 14/2026 ರ ಒಳಗಡೆ ಕೊಡುವುದಾಗಿ ವೇದಿಕೆಯಲ್ಲಿ ಘೋಷಿಸಿದರು.

ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಸವರಾಜ್ ಬಾಗೇವಾಡಿ, ಕಡಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಬಸಲಿಂಗಪ್ಪ ಕತ್ತಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ತಾವರಗೇರಿ, ರಾಜು ಮೇತ್ರಿ ಇನ್ನೂ ಅನೇಕ ರೈತ ಮುಖಂಡರು ಹಾಗೂ ಎಲ್ಲಾ ಟ್ರ್ಯಾಕ್ಟರ್ ಮಾಲೀಕರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಆಲಮೇಲ ಪಿಎಸ್ಐ ರವೀಂದ್ರ ಅಂಗಡಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್ ನೀಡಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ
