ಕುಷ್ಠರೋಗ ಪತ್ತೆ ಸಮೀಕ್ಷೆ ಕಾರ್ಯ – ಪರೀಕ್ಷೆ ಜಾಗೃತಿ.
ಅಮೀನಗಡ ನ.15

ಹುನಗುಂದ ತಾಲೂಕಿನ ಅಮೀನಗಡ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಅಮೀನಗಡ ಹನಮಪ್ಪನ ಹೊಂಡದ ಹತ್ತಿರ ಚಾವಡಿ ಕಟ್ಟೆಯಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಜನಜಾಗೃತಿ ಆಯೋಜಿಸಲಾಗಿತ್ತು. ಪಟ್ಟಣ ಪಂಚಾಯತ ಸದಸ್ಯರಾದ ಅಂಬರೀಶ ಬಾಣಗೇರಿ, ಶಂಕ್ರೆಪ್ಪ ಈರಪ್ಪ ತಳೇವಾಡ, ಮಾರುತಿ ಟಕ್ಕಿ, ಬಸವರಾಜ ಯರಗಲ್, ಇರಣ್ಣ ಮಳಗಾವಿ ಕುಷ್ಠರೋಗ ಜಾಗೃತಿ ಮಾಹಿತಿ ಕರಪತ್ರ ಬಿಡುಗಡೆ ಮಾಡುವ ಮುಖಾಂತರ ಸ್ಪರ್ಶ ಕುಷ್ಠರೋಗ ಆರೋಗ್ಯ ಅರಿವು ಜಾಗೃತಿಗೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಕುಷ್ಠ ಈಗ ಕಷ್ಟ ಅಲ್ಲ ಬಹು ಔಷಧಿ ಚಿಕಿತ್ಸೆಯಿಂದ ಕುಷ್ಠರೋಗ ಸಂಪೂರ್ಣ ಗುಣವಾಗುತ್ತದೆ. ಕುಷ್ಠರೋಗವು ಮೈಕೋಬ್ಯಾಕ್ಟೇರಿಯಂ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆಯಾಗಿದೆ. ಚರ್ಮ ನರಗಳಿಗೆ ಬಾಧಿತವಾಗುವುದು ದೇಹದ ಮೇಲೆ ತಿಳಿ ಬಿಳಿ ತಾಮ್ಯ ವರ್ಣದ ಸ್ಪರ್ಶ ಜ್ಞಾನವಿಲ್ಲದ ತದ್ದು ಮಚ್ಚೆ ಕುಷ್ಠರೋಗ ಪ್ರಾರಂಭಿಕ ಲಕ್ಷಣ ವಿರಬಹುದು ಮನದಲ್ಲಿ ಮುಚ್ಚಿಡದೆ ವೈದ್ಯರ ಬಳಿ ಪರೀಕ್ಷಿಸಿ ಕೊಳ್ಳಬೇಕು ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆ ತಡಯಬಹುದು. ಕುಷಠರೋಗ ಪತ್ತೆ ಹಚ್ಚಲು ಆಶಾ ಸ್ವಯಂ ಸೇವಕರು ತಮ್ಮ ಮನೆಗಳಿಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸ ಬೇಕೆಂದರು. ಸ್ಪರ್ಶ ಕುಷ್ಠರೋಗ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.

