ಮಕ್ಕಳ ದಿನಾಚರಣೆಯ ಪ್ರಯುಕ್ತ – ಮಕ್ಕಳಿಗಾಗಿ ಮೊಬೈಲ್ ಬಗ್ಗೆ ಜಾಗೃತಿ ಮೂಡಿಸುವ ಹಾಡು ಹಾಡಿ ರಂಜಿಸಿದ ಸಿ.ಎಚ್ ಉಮೇಶ್.
ಗಂಗನಕಟ್ಟೆ ನ.15

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಾಲಕರ ಮತ್ತು ಶಿಕ್ಷಕರ ಮಹಾ ಸಭೆಯು ದಿನಾಂಕ 14/11/2025 ರ ಶುಕ್ರವಾರದಂದು ಸರ್ಕಾರಿ ಪ್ರೌಢ ಶಾಲೆಯ ಗಂಗನಕಟ್ಟೆಯ ಶಾಲಾ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಉಪಾಧ್ಯಕ್ಷರಾದ ಶ್ರೀಯುತ ಉಮೇಶ್ ನಾಯಕ್, ಗ್ರಾಮದ ಹಿರಿಯರಾದ ಶ್ರೀಯುತ ಸಂಗಣ್ಣನವರು, ಎಸ್.ಡಿ.ಎಂ.ಸಿ ಯ ಎಲ್ಲ ಪದಾಧಿಕಾರಿಗಳು ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಹಾಲಸ್ವಾಮಿ.ಎಂ ಎಸ್ ಮಾತನಾಡುತ್ತಾ ಸರ್ಕಾರದ ವಿವಿಧ ಯೋಜನೆಗಳು, ಅವುಗಳ ಮಹತ್ವ, ಸರ್ಕಾರಿ ಶಾಲೆಗಳನ್ನು ಬಲ ಪಡಿಸುವಲ್ಲಿ ಆ ಕಾರ್ಯಕ್ರಮಗಳ ಕೊಡುಗೆಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಶಾಲೆಯ ಶಿಕ್ಷಕರಾದ ಶಂಕರಪ್ಪ ಅವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಕುರಿತಂತೆ ಮಾತನಾಡಿದರು.

ಶ್ರೀಮತಿ ಶ್ವೇತ ಅವರು ಬಾಲ್ಯ ವಿವಾಹ ಬಾಲಕಾರ್ಮಿಕ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳ ಕುರಿತಂತೆ ವಿಸ್ತೃತವಾಗಿ ಮಾತನಾಡಿದರು.
ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಸಂಗಣ್ಣನವರು ಕಾರ್ಯಕ್ರಮವನ್ನು ಕುರಿತಂತೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರೌಢ ಶಾಲೆಯ ಗಂಗನಕಟ್ಟೆ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಗೃತರಾಗಿ ಎಂದು ಹಾಡಿನ ಮೂಲಕ ಸ್ವತಃ ರಚನೆ ಮಾಡಿರುವ ಹಾಡನ್ನು ಖ್ಯಾತ ಜನಪದ ಕಲಾವಿದ ಸಿ.ಎಚ್ ಉಮೇಶ್ ಚಿನ್ನಸಮುದ್ರ ಅತ್ಯುತ್ತಮವಾಗಿ ಹಾಡಿ ಶಿಕ್ಷಕ ವೃಂದ ಮಕ್ಕಳು ಪೋಷಕರು ತಾಯಂದರು ತುಂಬಾ ಖುಷಿ ಪಟ್ಟರು ಎಂದು ವರದಿಯಾಗಿದೆ.

