ದಲಿತ ಬಾಲಕಿಯರ ಹಾಸ್ಟೇಲಿಗೆ ಪೊಲೀಸ್ ಭೇಟಿ – ಎ.ಎಸ್.ಪಿ ಜಯಕುಮಾರ್.

ತರೀಕೆರೆ ನ.15

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೌಂಟರ್ ಕೇಸುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಧಾ ಟಿ.ಟಿ ಜಯಕುಮಾರ್ ರವರು ಹೇಳಿದರು. ಅವರು ಶುಕ್ರವಾರ ಪಟ್ಟಣದ ಯುಎಸ್ ಕನ್ವೆನ್ಷನ್ ಆಲ್ ನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ದಲಿತರು ದೌರ್ಜನ್ಯ ಪ್ರಕರಣಗಳಲ್ಲಿ ದೂರು ನೀಡಿದರೆ ಆರೋಪಿಗಳು ಕೌಂಟರ್ ಕೇಸು ಮಾಡಿಸುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.ದಲಿತ ಮುಖಂಡರಾದ ಕುಂಕನಾಡು ಮಂಜುನಾಥ್ ರವರು ಸಹ ಧ್ವನಿ ಸೇರಿಸಿ ಕೌಂಟರ್ ಕೇಸುಗಳನ್ನು,ಸುಳ್ಳು ಕೇಸುಗಳನ್ನು ದಲಿತರ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಚಲವಾದಿ ಸಂಘದ ಅಧ್ಯಕ್ಷರಾದ ಎಸ್ ಕೆ ಸ್ವಾಮಿ ಮಾತನಾಡಿ ಬಾಲಕಿಯರ ಹಾಸ್ಟೆಲ್ ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಸ್ಟೆಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ದಲಿತ ಮುಖಂಡರಾದ ಹೆಬ್ಬೂರು ಶಿವಣ್ಣ ಮತ್ತು ಓಂಕಾರಪ್ಪ ಮಾತನಾಡಿ ದಲಿತರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಹೇಳಿದರು. ಎಸ್ ಎನ್ ಮಹೇಂದ್ರ ಸ್ವಾಮಿ, ಜಿ ಟಿ ರಮೇಶ,ವಸಂತಕುಮಾರ್, ಎಂ ಆರ್ ಎಚ್ ಎಸ್ ನ ಚಂದ್ರಶೇಖರ್, ಮಲ್ಲಿಕಾರ್ಜುನ,ಎಚ್ ವಿ ಬಾಲರಾಜ್, ಮರವಂಜಿ ನರಸಿಂಹಪ್ಪ,ಶೂದ್ರ ಶ್ರೀನಿವಾಸ್, ಮಾಜಿ ಸೈನಿಕ ಮೋಹನ್, ಹಾದಿಕೆರೆ ರಾಜು ಮುಂತಾದವರು ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಅರಣ್ಯ ಇಲಾಖೆಗೆ, ಅಬಕಾರಿ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಕ್ರಮ ಕೈಗೊಳ್ಳಲು ಎ ಎಸ್ ಪಿ ರವರು ತಿಳಿಸಿದರು ಮಾದಕ ವಸ್ತು ಗಾಂಜಾ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಕಾರ್ಯನಿರ್ವಹಣಾ ಅಧಿಕಾರಿ ಡಾ. ದೇವೇಂದ್ರಪ್ಪ ಡಿಎಸ್ಪಿ ಪರಶುರಾಮಪ್ಪ ಉಪ ವಿಭಾಗ ಅಧಿಕಾರಿಗಳ ಕಚೇರಿಯ ತಹಶೀಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್, ವಲಯ ಅರಣ್ಯ ಅಧಿಕಾರಿ ಉಮರ್ ಪಾಷಾ,ಅಬಕಾರಿ ನಿರೀಕ್ಷಕರಾದ ಆನಂದಮೂರ್ತಿ, ಪುರಸಭಾ ಮುಖ್ಯ ಅಧಿಕಾರಿ ವಿಜಯಕುಮಾರ್ ಹಾಗೂ ಎಲ್ಲಾ ಪೊಲೀಸ್ ಇಲಾಖೆ ಆರಕ್ಷಕ ನಿರೀಕ್ಷಕರು ಉಪನಿರೀಕ್ಷಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button