ಪಬ್ಲಿಕ್ ಶಾಲೆಯಲ್ಲಿ ಮಕ್ಕಳ – ದಿನಾಚರಣೆ ಜರುಗಿತು.
ಮಾನ್ವಿ ನ.16

ಇಂದಿನ ಮಕ್ಕಳೇ ಭಾವಿ ಭವಿಷ್ಯದ ಭಾರತದ ಪ್ರಜೆಗಳು. ಮಕ್ಕಳು ಶಿಕ್ಷಕರ, ತಂದೆ ತಾಯಿಗಳ, ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸಿ, ಉನ್ನತ ಮಾರ್ಗವನ್ನು ಅನುಸರಿಸ ಬೇಕು ಇದರಿಂದ ಅವರು ಉನ್ನತಿ ಹೊಂದುತ್ತಾರೆ ತನ್ಮೂಲಕ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಶಾಲೆಯ ಮುಖ್ಯ ಗುರು ನಾಗರತ್ನ ದೇಸಾಯಿ ನುಡಿದರು. ಅವರು ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆಯ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಸೈಯದ್ ಮುಸ್ತಾಪ ಖಾದ್ರಿ, ಶಾಲಾ ಶಿಕ್ಷಕರು, ಪಾಲಕರು ಹಾಗೂ ಇತರೆ ಸಿಬ್ಬಂದಿ ಭಾಗವಹಿಸಿದ್ದರು. ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಆಟಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಸಿಹಿ ತಿನಿಸುಗಳನ್ನು ವಿತರಿಸಲಾಯಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

