ಶ್ರೀರಾಮಕೃಷ್ಣರ ಲೀಲಾಕ್ಷೇತ್ರ ಕಾಮಾರಪುಕುರ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ನ.16

ಶ್ರೀರಾಮಕೃಷ್ಣರ ದಿವ್ಯ ಲೀಲಾಕ್ಷೇತ್ರ ಕಾಮಾರಪುಕುರ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ತಾವು ಕೈಗೊಂಡ “ಕಲ್ಕತ್ತಾ ಮತ್ತು ಕಾಮಾರಪುಕುರ ಯಾತ್ರೆ”ಯ ಅನುಭವಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಸಭೆಯಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ಸರಸ್ವತಿ ನಾಗರಾಜ್, ಉಷಾ ಶ್ರೀನಿವಾಸ್, ಕವಿತಾ ಗುರುಮೂರ್ತಿ, ಪ್ರೇಮಲೀಲಾ, ಗೀತಾ ವೆಂಕಟೇಶ್, ಜಿ.ಯಶೋಧಾ ಪ್ರಕಾಶ್, ಮಂಜುಳಾ ಉಮೇಶ್, ಚೇತನ್, ಚೆನ್ನಕೇಶವ, ಸುಮನಾ, ಪಂಕಜ, ಸಿ.ಎಸ್ ಭಾರತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ರಶ್ಮಿ ವಸಂತ, ಸಂಗೀತ, ಯತೀಶ್ ಎಂ ಸಿದ್ದಾಪುರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

