ತಾಲೂಕ ಆಡಳಿತ ಸೌಧದ ಮುಂದೆ ತಹಶೀಲ್ದಾರ್ ವಿರುದ್ಧ ಡಾ, ಬಿ.ಆರ್ ಅಂಬೇಡ್ಕರ್ ರವರ ಫೋಟೋ ಇಟ್ಟು – ಬಿ.ಡಿ ಓಬಪ್ಪ ನವರ ಮೌನ ಪ್ರತಿಭಟನೆ.
ಕೂಡ್ಲಿಗಿ ನ.16

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕ ಆಡಳಿತ ಸೌಧದ ಮುಂದೆ ಸರ್ಕಾರಿ ಕಾನೂನು ಧಿಕ್ಕರಿಸಿ ಜವಾಬ್ದಾರಿಯಿಂದ ಆಡಳಿತ ನಡೆಸುತ್ತಿರುವಂತಹ ವಿ.ಕೆ ನೇತ್ರಾವತಿ ತಹಶೀಲ್ದಾರ್ ವಿರುದ್ಧ ಮೌನ ಧರಣಿ ಕೂತಿರುವಂತಹ 72 ವಯಸ್ಸಿನ ನಿವೃತ್ತ ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಅವರು ನ್ಯಾಯ ಸಮ್ಮತವಾಗಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಹಲವು ಅರ್ಜಿಗಳನ್ನು ಸಲ್ಲಿಸಿದ್ದು, ಸಲ್ಲಿಸಿರುವ ಅರ್ಜಿಗಳ ಬಗ್ಗೆ ನ್ಯಾಯ ಸಿಗದೇ ಇರುವುದನ್ನು ಖಂಡಿಸಿ ಭೀಮಸಮುದ್ರದ ಓಬಪ್ಪ ರವರು ಮೌನ ಪ್ರತಿಭಟನೆಯ ಧರಣಿಯನ್ನು ಒಬ್ಬಂಟಿಗರಾಗಿ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಟ್ಟುಕೊಂಡು ಆಡಳಿತ ಕಚೇರಿಯ ಮುಂಭಾಗದಲ್ಲಿ ತಹಶೀಲ್ದಾರ್ ವಿ.ಕೆ ನೇತ್ರಾವತಿ ರವರಿಗೆ ಧಿಕ್ಕಾರದ ಫ್ಲೆಕ್ಸ್ ನ್ನು ಹಾಕಿಕೊಂಡು ಮೌನ ಪ್ರತಿಭಟನೆ ಮಾಡಲಾಯಿತು. ಓಬಪ್ಪ ಇವರ ಮೌನ ಪ್ರತಿಭಟನೆಯ ಕಾರಣ ತಿಳಿಸುವ ಹಾಗೆ ಸಾರ್ವಜನಿಕರ ಕೆಲಸಗಳನ್ನು 25 ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಗಣಿಸದೆ ಬೇಜವಾಬ್ದಾರಿಯಿಂದ ಆಡಳಿತ ಮಾಡುತ್ತಿದ್ದಾರೆ ಎಂದು ನೇರವಾದ ಪ್ರಶ್ನೆಗೆ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ದೇವರು ಮನೆ ಮಹೇಶ್ ಹಾಗೂ ಪಿಎಸ್ಐ ಸಿಪ್ರಕಾಶ್ ರವರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಾಟೇರ ಹಾಲೇಶ್ ರವರು ಅವರ ಹೋರಾಟದ ಕಾರಣವನ್ನು ತಿಳಿದು ಕೊಂಡು ಅವರಿಗೆ ಓಬಪ್ಪರ ವರಿಗೆ ತಹಶೀಲ್ದಾರಾದ ವಿ.ಕೆ ನೇತ್ರಾವತಿಯವರ ಸಮ್ಮುಖದಲ್ಲಿ ಕರವೇ ಅಧ್ಯಕ್ಷ ಕಾಟೇರ ಹಾಲೇಶ್ ಹಾಗೂ ಸಿಪಿಐ ಪ್ರಹ್ಲಾದ್ ಆರ್ ಚೆನ್ನಾಗಿರಿ ರವರ ಸಮ್ಮುಖದಲ್ಲಿ ತಹಶೀಲ್ದಾರರು 3 ಅರ್ಜಿಗಳನ್ನು ಇತ್ಯರ್ಥ ಮಾಡುವುದಾಗಿ ಭರವಸೆ ಮಾತುಗಳನ್ನು ಬಿ.ಡಿ ಓಬಪ್ಪ ಇವರಿಗೆ ತಿಳಿಸಿರುವ ವಿಚಾರ ಕ.ರ.ವೇ ಕಾಟೇರ್ ಹಾಲೇಶ್ ರವರು ತಿಳಿಸಿರುತ್ತಾರೆ. ಮೌನ ಹೋರಾಟದ ಪ್ರತಿಭಟನೆಯನ್ನು ಮುಕ್ತ ಗೊಳಿಸಿದರು ಎನ್ನುವುದು ತಿಳಿದು ಬಂದಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ

