ಅಗ್ನಿ ಅವಘಡಗಳಿಗೆ ಮುಂಜಾಗೃತ ಕ್ರಮ – ತಪ್ಪಿಸಲು ಎಚ್ಚರಿಕೆ ಅಗತ್ಯ.
ನಾಯನಹಳ್ಳಿ ನ.16

ಅಗ್ನಿ ಅನಾಹುತದಿಂದ ಪಾರಾಗಲು ಮುನ್ನೆಚ್ಚರಿಕೆ ಹಾಗೂ ಸಾಮಾನ್ಯ ಜ್ಞಾನ ಇರಬೇಕೆಂದು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕರಾದ ರವೀಂದ್ರ ಸಂಗಮ ಹೇಳಿದರು. ಅವರು ದಿನಾಂಕ 15/11/2025 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಾಯನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಗ್ನಿ ಅವಘಡಗಳ ಮುಂಜಾಗೃತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಾಯನಹಳ್ಳಿಯ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೃಶ್ಯಾವಳಿಯಲ್ಲಿ ನೀವು ಕೂಡ ನೋಡಬಹುದು ಯಾವ ರೀತಿ ಅಗ್ನಿಯನ್ನು ಸಂಭವಿಸಿದರೆ ತಡೆಗಟ್ಟುವ ಬಗೆಯನ್ನು ಸ-ವಿಸ್ತಾರವಾಗಿ ತಿಳಿಸಿ ಕೊಟ್ಟರು.


ಅವರು ಬೆಂಕಿ ಹೊತ್ತಿದ್ದು ಗಮನಕ್ಕೆ ಬಂದ ತಕ್ಷಣ 8156277101 ಹಾಗೂ 112 ಸಂಖ್ಯೆಗೆ ತ್ವರಿತವಾಗಿ ಸಂಪರ್ಕಿಸ ಬೇಕೆಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ನಾಗಪ್ಪ.ಶಿವಾಪುರ ರಾಜು.ಮುರುಕುಟ್ಟಿ, ಗಣೇಶ್ ಗೌಡ, ಶಾಲೆಯ ಶಿಕ್ಷಕರಾದ ಎನ್.ಲಕ್ಷ್ಮಿನಾರಾಯಣ್ ಪ್ರಭಾರಿ ಮುಖ್ಯೋಪಾಧ್ಯಾಯರು ಫಿ.ಎನ್ ಸುಧಾ, ಸಹ ಶಿಕ್ಷಕಿ, ಲಿಲಿಯನ್ ಸೋಫಿಯಾ ಸಹ ಶಿಕ್ಷಕಿ, ವಾಯ್.ಎಂ ಭಾರತಿ ಸಹ ಶಿಕ್ಷಕಿ ವಿ.ಶ್ರೀನಿವಾಸ ಸಹ ಶಿಕ್ಷಕ. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ. ನರಸಿಂಹಮೂರ್ತಿ, ಹಾಗು ಗ್ರಾಮಸ್ಥರು ಶ್ರೀನಾಥ ಸ್ವಾಮಿ, ಅಡುಗೆ ಸಿಬ್ಬಂದಿ ಗೌರಮ್ಮ, ಸರಳಮ್ಮ, ಇತರರು ಉಪಸ್ಥಿತರಿದ್ದರು.

