ಸಂಕಲ್ಪ ವಿಕಲ ಚೇತನರ ಒಕ್ಕೂಟ ಜಿಲ್ಲಾ ಘಟಕ ರಚನೆವಿಕಲ ಚೇತನರ ರಾಜ್ಯ – ಮುಖಂಡರ ನೇತೃತ್ವದಲ್ಲಿ ಸಭೆ.
ಮಾನ್ವಿ ನ.16

ಪಟ್ಟಣದಲ್ಲಿ ವಿಕಲ ಚೇತನರ ರಾಜ್ಯ ಮುಖಂಡರಾದ ದೇಸಾಯಿ ದೊತರಬಂಡಿ ರವರ ನೇತೃತ್ವದಲ್ಲಿ ವಿಕಲ ಚೇತನರ ಭಾನುವಾರ ಸಭೆ ನಡೆಯಿತು. ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ಬಲ ಪಡಿಸುವ ಉದ್ದೇಶದಿಂದ ಕರೆಯಲಾಗಿದ್ದ ಈ ಸಭೆಯಲ್ಲಿ ಹೊಸ ಜಿಲ್ಲಾ ಹಾಗೂ ತಾಲೂಕು ಹುದ್ದೆಗಳನ್ನು ಘೋಷಿಸಲಾಯಿತು.ಸಭೆಯಲ್ಲಿ ಸಂಕಲ್ಪ ವಿಕಲ ಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಶಿವಕುಮಾರ್ ಚಲ್ಮಲ್, ಜಿಲ್ಲಾ ಉಪಾಧ್ಯಕ್ಷರಾಗಿ ಸಾವಿತ್ರಮ್ಮ, ಹಾಗೂ ಮಾನ್ವಿ ತಾಲೂಕು ಅಧ್ಯಕ್ಷರಾಗಿ ಲಕ್ಷ್ಮೀ ಉಟಕನೂರು ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.ಅದರ ಜೊತೆಗೆ, ಸಂಘಟನೆಯ ಬೆಳವಣಿಗೆ, ಮಾರ್ಗದರ್ಶನ ಹಾಗೂ ಉತ್ತಮ ದಿಕ್ಕನ್ನು ನೀಡುವ ಜವಾಬ್ದಾರಿಯನ್ನು ಹೊತ್ತು ಕೊಳ್ಳುವಂತೆ ದೇಸಾಯಿ ದೊತರಬಂಡಿ ರವರನ್ನು ‘ಸಂಕಲ್ಪ ವಿಕಲ ಚೇತನರ ಒಕ್ಕೂಟದ ಗೌರವಾಧ್ಯಕ್ಷರಾಗಿ’ ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ಈ ಘೋಷಣೆಯನ್ನು ಸಭೆಯಲ್ಲಿದ್ದ ಎಲ್ಲಾ ಸದಸ್ಯರು ಚಪ್ಪಾಳೆಗಟ್ಟುವ ಮೂಲಕ ಸ್ವಾಗತಿಸಿದರು.

ಹುದ್ದೆಗಳ ಘೋಷಣೆಯ ನಂತರ ಮಾತನಾಡಿದ ದೇಸಾಯಿ ದೊತರಬಂಡಿ ಅವರು ವಿಕಲ ಚೇತನರ ಹಕ್ಕು ಸೌಲಭ್ಯಗಳು, ಸರ್ಕಾರದ ವಿವಿಧ ಯೋಜನೆಗಳು, ಮತ್ತು ಸಂಘಟನೆಯ ಬಲ ವರ್ಧನೆ ಕುರಿತಂತೆ ಮನದಾಳದ ಮಾತುಗಳನ್ನು ಹಂಚಿ ಕೊಂಡರು. ವಿಕಲ ಚೇತನರ ಒಗ್ಗಟ್ಟು ಮತ್ತು ಸಂಘಟನೆ ಬಲವಾಗಿದ್ದಾಗ ಮಾತ್ರ ಸರ್ಕಾರದ ಮುಂದೆ ನಮ್ಮ ಧ್ವನಿ ಪರಿಣಾಮಕಾರಿಯಾಗಿ ತಲುಪುತ್ತದೆ ಎಂದು ಅವರು ಒತ್ತಿ ಹೇಳಿದರು. ಸಂಘಟನೆಯ ನಿಷ್ಠೆ, ಪಾರದರ್ಶಕತೆ ಮತ್ತು ಸೇವಾ ಭಾವನೆಯೇ ನಿಜವಾದ ಬದಲಾವಣೆಗೆ ದಾರಿ ಮಾಡುತ್ತದೆ ಎಂದು ಅವರು ಹೇರಳವಾಗಿ ಅಭಿಪ್ರಾಯ ಪಟ್ಟರು. ಇಂದಿನ ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಬಂದಿದ್ದ ವಿಕಲ ಚೇತನರ ಮುಖಂಡರು, ಸದಸ್ಯರು, ಸಮಾಜ ಸೇವಕರು ಹಾಜರಿದ್ದರು. ಸಭೆಯು ಉತ್ಸಾಹ ಭರಿತ ಚರ್ಚೆಗಳೊಂದಿಗೆ, ಪರಸ್ಪರ ಅಭಿಪ್ರಾಯ ಹಂಚಿಕೆ ಯಿಂದ ಹಾಗೂ ಸಂಘಟನೆಯ ಮುಂದಿನ ದಿಕ್ಕು ನಿಲುವುಗಳನ್ನು ತೀರ್ಮಾನಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯವಾಯಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
