ತಾಲೂಕ ಕ.ಸಾ.ಪ ವತಿಯಿಂದ ವೃಕ್ಷ ಮಾತೆ – ಸಾಲುಮರದ ತಿಮ್ಮಕ್ಕಗೆ ಶ್ರದ್ಧಾಂಜಲಿ.
ಮಾನ್ವಿ ನ.16

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ತಾಲೂಕ ಕ.ಸಾ.ಪ ವತಿಯಿಂದ ವೃಕ್ಷ ಮಾತೆಯ ಸಾಲುಮರದ ತಿಮ್ಮಕ್ಕಗೆ ಶ್ರದ್ಧಾಂಜಲಿ ಸಲ್ಲಿಸಿ ನುಡಿ ನಮನ ಸಲ್ಲಿಸಲಾಯಿತು.
ತಾಲೂಕ ಕ.ಸಾ.ಪ ಅಧ್ಯಕ್ಷ ಶರಣಬಸವ ನೀರಮಾನ್ವಿ ಮಾತನಾಡಿ ಸಾಲುಮರದ ತಿಮ್ಮಕ್ಕ ಮರ ಗಿಡಗಳನ್ನೇ ತಮ್ಮ ಮಕ್ಕಳಂತೆ ಕಂಡು ಬೆಳೆಸುವ ಮೂಲಕ ವೃಕ್ಷ ಮಾತೆಯಾಗಿದ್ದಾರೆ ಅವರ ಪರಿಸರ ಕಾಳಜಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ರಮೇಶಬಾಬು ಯಾಳಗಿ, ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ಮಹಿಳಾ ಪ್ರತಿನಿಧಿ ಅಂಬಮ್ಮ ಪ್ರತಾಪಸಿಂಗ್, ಮಾನ್ವಿ ತಾ.ಕ.ಸಾ.ಪ. ಗೌರವ ಕಾರ್ಯದರ್ಶಿ ಲಕ್ಷ್ಮಣ್ ಜಾನೇಕಲ್, ಜಿ.ಎಸ್. ಬಾಲಾಜಿಸಿಂಗ್ ಮಾನ್ವಿ, ರಾಮು ಹೊಳೆಯಪ್ಪನವರ್, ರವಿಶರ್ಮ, ಹನುಮಂತಪ್ಪ ಕೊಟ್ನೆಕಲ್, ಪ್ರಾಧ್ಯಾಪಕ ಚನ್ನಬಸಪ್ಪ, ಯಲ್ಲಪ್ಪ ನಿಲೋಗಲ್, ಡಿ.ಬಸನಗೌಡ, ಶಿವಕುಮಾರ ಸೇರಿದಂತೆ ಇನ್ನಿತರರಿದ್ದರು.
ಬಾಕ್ಸ್ ನ್ಯೂಸ್:-
ಪಟ್ಟಣದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ತಾಲೂಕ ಕ.ಸಾ.ಪ. ವತಿಯಿಂದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ಶ್ರದ್ಧಾಂಜಲಿ ಸಲ್ಲಿಸಿ ನುಡಿ ನಮನ ಸಲ್ಲಿಸಲಾಯಿತು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

