“ಬ್ರಹ್ಮಾಂಡ ರಕ್ಷಕ ಶ್ರೀರಾವುತರಾಯನ ಸ್ಮರಣೆ” ವಿಶ್ವ ಭಂಡಾರದ ಬೆಳಕು ಶ್ರೀರಾವುತರಾಯ ನಮೋ ನಮಃ”…..

ಶ್ರೀಕರ ಶುಭಕರ ರಾಜ ಮಾರ್ತಾಂಡ ಭೈರವ
ನಮೋ ನಮಃ
ಏಳುಕೋಟಿ ಏಳುಕೋಟಿಗೆ ಯುಗೇ ಯುಗೇ
ಶ್ರೀಮಲ್ಹಾರಿ ನಮೋ ನಮಃ
ದುಷ್ಟರ ಸದೆ ಬಡೆವ ಶಿಷ್ಟರ ರಕ್ಷಿಪ ಶಿವನ
ಅವತಾರಿ ಅಶ್ವರೂಢ ಶ್ರೀರಾವುತರಾಯ
ನಮೋ ನಮಃ
ಗಂಗಮಾಳಮ್ಮನ ವರಿಸುವಾತ
ಶ್ರೀರಾವುತರಾಯ ನಮೋ ನಮಃ
ಶುದ್ಧ ಮನದಿ ಜ್ಞಾನಿಸುವ ಭಕ್ತಜನ ಪಾಲಕ
ಶ್ರೀರಾವುತರಾಯ ನಮೋ ನಮಃ
ಹಣೆಗೆ ಭಂಡಾರವ ಧರಿಸಲು ತಮವ ಕಳೆದು
ಬಾಳ ಬೆಳಗುವ ಬೆಳಕು ಶ್ರೀರಾವುತರಾಯ
ನಮೋ ನಮಃ
ಶುದ್ಧ ಭಾವದಿ ಧರ್ಮವ ರಕ್ಷಿಪರ
ಅಂಗೈಯಲಿರಿಸಿ ಸಲಹುವ ಶ್ರೀ ಮಾರ್ತಾಂಡ
ಭೈರವ ನಮೋ ನಮಃ
ಅಚ್ಚ ಚೆಂಡು ಹೂವು ಪ್ರೀಯ ಭಾಗ್ಯದ
ಭಗವಂತ ಶ್ರೀರಾವುತರಾಯ ನಮೋ ನಮಃ
ಶರಣೆಂದು ಬರುವ ಭಕ್ತ ಕೋಟಿಯ
ಜಗದೊಡೆಯ ಶ್ರೀರಾವುತರಾಯ ನಮೋ
ನಮಃ
ಭಕ್ತಿ ಭಾವದಿ ಭಜಿಸಲು ಶುಭ
ಮಂಗಳದಾಯಕ ಶ್ರೀರಾವುತರಾಯ ನಮೋ
ನಮಃ
ಜಗದ ಸುಕ್ಷೇತ್ರ ದೇವರ ಹಿಪ್ಪರಗಿ ಪುರವಾಸ
ಶ್ರೀರಾವುತರಾಯ ನಮೋ ನಮಃ
ಮಹಾ ಮಹಿಮ ಬ್ರಹ್ಮಾಂಡ ಒಡೆಯ
ಶ್ರೀರಾವುತರಾಯನ ಒಲುಮೆ ಇರಲು
ದುಷ್ಟಶಕ್ತಿಯು ಸನಿಹ ಸುಳಿಯಲು ಬಿಡನು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

