ಹಜರತ್ ಟಿಪ್ಪು ಸುಲ್ತಾನ್ ರವರ 275 ನೇ ಜಯಂತಿಯ ಆಚರಣೆ – ಮಹೋತ್ಸವ ಕಾರ್ಯಕ್ರಮ ಜರುಗಿತು.

ಮಾನ್ವಿ ನ 16

ಮಾನ್ವಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ 275 ನೇಯ ಜಯಂತಿಯನ್ನು ಉದ್ಘಾಟಿಸಿದ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.

ಉದ್ಘಾಟನಾ ನುಡಿಯನ್ನು ನೋಡಿದ ಮಾನ್ಯ ಶಾಸಕರು ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನರು ಹೆಸರಿಗೆ ತಕ್ಕ ಹುಲಿಯಾಗಿ ಘರ್ಜನೆಯೊಂದಿಗೆ ಬ್ರಿಟಿಷರ ವಿರುದ್ಧ 4 ಸಾರಿ ಯುದ್ಧವನ್ನು ಮಾಡಿ ದೇಶ ಹಾಗೂ ರಾಜ್ಯವನ್ನು ಸಂರಕ್ಷಿಸಿದ ರಾಜರು ಟಿಪ್ಪುರವರು ಕೇವಲ ತಮ್ಮ ಸಮುದಾಯದವಲ್ಲದೆ ಸಮಸ್ತ ಸಮಾಜದ ನಾಯಕರಾಗಿ ಹೊರಹೊಮ್ಮಿದ್ದರು.

ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ಬರುವ ಸುಮಾರು 39000 ಕೆರೆಗಳಿಗೆ ಹಾಗೂ 10,000 ಭಾವಿಗಳಿಗೆ ಪರಿಶಿಷ್ಟ ಜಾತಿಯ ಜನರನ್ನು ಸಂರಕ್ಷಣೆ ಗೋಸ್ಕರ ಮೀಸಲಿರಿಸಿ ನೀರು ಗಂಟೆಯರನ್ನಾಗಿ ಮಾಡಿ ಆ ಸಮಯದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವೀರರು.

ಕಬ್ಬಿಣದ ಕವಚದ ರಾಕೆಟ್ ಗಳನ್ನು ತಯಾರಿಸಿ ಇಡೀ ರಾಷ್ಟ್ರಕ್ಕೆ ಆ ಸಂದರ್ಭದಲ್ಲಿ ರಾಕೆಟ್ ಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೇಷ್ಮೆ ನೂಲನ್ನು ಇಡೀ ರಾಜ್ಯಕ್ಕೆ ಪರಿಚಯಿಸಿದರು, ಭೂ ಕಂದಾಯ ನೀತಿಯನ್ನು ಜಾರಿಗೆ ತಂದರು, ಚನ್ನಪಟ್ಟಣದಲ್ಲಿ ಆಟಿಕೆ ಸಾಮಾನುಗಳನ್ನು ಆ ಸಂದರ್ಭದಲ್ಲಿ ಪರಿಚಯಿಸಿದರು. ಕೇರಳದ ಮಲಬಾರಿನ ಹೆಣ್ಣುಗಳ ಮಾನ ಮುಚ್ಚಲು ರೇಷ್ಮೆ ವಸ್ತ್ರಗಳನ್ನೇ ದಾನ ಮಾಡಿದ ಕೀರ್ತಿ ಇವರದು ಮತ್ತು ಸ್ಥಾನ ತೆರಿಗೆಗಳನ್ನು ರದ್ದು ಗೊಳಿಸಿದ ಮಹಾನ್ ವ್ಯಕ್ತಿತ್ವ ಹೊಂದಿದ ಟಿಪ್ಪು ಅವರು ಇಂದಿನ ಮೈಸೂರು ಜಿಲ್ಲೆಯ KRS ಜಲಾಶಯಕ್ಕೆ ಆ ದಿನಮಾನಗಳಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದ ಕೀರ್ತಿ ಇವರದು ಇಂತಹ ಮಹಾನ್ ನಾಯಕರ ಜಯಂತಿಗಳನ್ನು ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಇವರ ಪರಿಚಯ ಇವರು ಮಾಡಿರ್ತಕಂತ ಸಾಧನೆಗಳನ್ನು ನಾವು ನೀವೆಲ್ಲರೂ ತೋರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂಬುದನ್ನು ನಾವು ತಿಳಿಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರೆಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು, ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್, ಸೈಯದ್ ಖಾಲಿದ್ ಖಾದ್ರಿ, ಟಿಪ್ಪು ಸುಲ್ತಾನ್ ಸಂಘದ ರಾಜ್ಯ ಸಂಚಾಲಕರಾದ ಸಯ್ಯದ್ ಹುಸೇನ್, ರಾಜ ಸುಭಾಷ್ ಚಂದ್ರ ನಾಯಕ್, ಸೈಯದ್ ಅಕ್ಬರ್ ಪಾಷಾ ಗುತ್ತೇದಾರರು, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಇಸ್ಮಾಯಿಲ್,ಜಿಲಾನಿ ಖುರೇಶಿ, ಪುರಸಭೆ ಸದಸ್ಯರುಗಳಾದ ಸಾಬೀರ್ ಹುಸೇನ್, ಶೇಕ್ ಜಮೀಲ್ ಅಹಮದ್, ಭಾಷಾ ಸಾಬ್ ಟೈಲರ್, ಖಾಲಿಲ್ ಕುರೇಶಿ, ಎಚ್ ಬಿ ಎಂ ಬಾಷಾ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಯದ್ ಫಯಾಜೋದ್ದೀನ್, ಚಾಂದ್ ಪಾಷಾ ಗುತ್ತೇದಾರ್, ಮಹೆಮ್ಮದ್,ಸತ್ತರ್ ಬಂಗ್ಲೆವಾಲೆ, ರಸುಲ್ ಖುರೇಶಿ, ಖಾದಿರ್ ನಾಯ್ಕ್, ಶೇಕ್ ಮಹಿಬೂಬ್, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷರಾದ ಮಹಿಬೂಬ್ ಕುರಿಷಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button