ತಾಲೂಕ ಕಮ್ಮವಾರಿ ಸಂಘದ ವತಿಯಿಂದ – ಕಾರ್ತಿಕ ಮಾಸದ ವನ ಭೋಜನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಮಾನ್ವಿ ನ.17

ಪಟ್ಟಣದ ಕಾಕತೀಯ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕಮ್ಮವಾರಿ ಸಂಘದ ವತಿಯಿಂದ ಕಾರ್ತಿಕ ಮಾಸದ ವನ ಭೋಜನ ಕಾರ್ಯಕ್ರಮ ಭಕ್ತಿ ಭಾವ ಸೌಹಾರ್ದದ ನಡುವೆ ಜರುಗಿತು. ಕಾರ್ಯಕ್ರಮವನ್ನು ರಾಜ್ಯ ಸಣ್ಣ ನೀರವಾರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಉದ್ಘಾಟಿಸಿ ಮಾತನಾಡಿದರು.ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಣ, ಕೃಷಿ, ಉದ್ಯಮ ಕಮ್ಮ ಸಮುದಾಯದವರು ಶ್ರಮ, ಪ್ರತಿಭೆ ಯಿಂದ ಬೆಳೆಯುತ್ತಿರುವುದನ್ನು ಅವರು ಶ್ಲಾಘಿಸಿದರು. ಈ ಭಾಗದಲ್ಲಿ ಶಿಕ್ಷಣ ವಿಸ್ತರಣೆಗೆ ಶಾಲೆಗಳ ಸ್ಥಾಪನೆ ಮೂಲಕ ಸಮುದಾಯ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಕಾರ್ತಿಕ ಮಾಸ ಅತ್ಯಂತ ಪವಿತ್ರವಾದದು ಈ ಮಾಸದಲ್ಲಿ ಸಮುದಾಯ ಒಟ್ಟಾಗಿ ಸೇರಿ ವನ ಭೋಜನ ಆಯೋಜಿಸಿರುವುದು ಶ್ಲಾಘನೀಯ, ಎಂದು ಅಭಿಪ್ರಾಯ ಪಟ್ಟರು.ಕಮ್ಮ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದ ಅಭಿವೃದ್ಧಿ ಅನುದಾನದಲ್ಲಿ 20 ಲಕ್ಷ ರೂಪಾಯಿ ಮಂಜೂರು ಮಾಡಿಸುವುದಾಗಿ ಅವರು ಸಭೆಯಲ್ಲಿ ಭರವಸೆ ನೀಡಿದರು.ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಗಣ್ಯರು ಮಾತನಾಡಿ ಸಮುದಾಯದ ಅಭಿವೃದ್ದಿ, ಏಕತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕಮ್ಮವಾರಿ ಸಂಘದ ವತಿಯಿಂದ ನಿರ್ಮಿಸಲಿರುವ ಅಂತರಾಷ್ಟ್ರೀಯ ಮಟ್ಟದ ಶಾಲೆ ಮತ್ತು ಕಾಲೇಜು ನಿರ್ಮಾಣಕ್ಕೆ 2 ಎಕರೆ ಭೂಮಿಯನ್ನು ದಾನ ಮಾಡಿದ ವೇಮಲೂರಿ ಸತ್ಯನಾರಾಯಣರನ್ನು ಸಚಿವ ಬೋಸರಾಜು ಸನ್ಮಾನಿಸಿ ಗೌರವಿಸಿದರು. ಜೊತೆಗೆ ಬ್ಯಾಡ್ಮಿಂಟನ್ ಕ್ರೀಡಾಪಟು ರೋಹನ್ ಕರುಟೂರಿ ಮತ್ತು ಅಖಿಲ ಕರ್ನಾಟಕ ಕಮ್ಮವಾರಿ ಸಂಘದ ಅಧ್ಯಕ್ಷ ಲಯನ್ ಗಾರಪಾಟಿ ರಾಮಕೃಷ್ಣರಿಗೂ ಸನ್ಮಾನ ಸಲ್ಲಿಸಲಾಯಿತು.ಕಾರ್ತಿಕ ಮಾಸದ ಅಂಗವಾಗಿ ಸಮುದಾಯದವರು ಸಾಮೂಹಿಕ ಶ್ರೀ ರಮಾ ಸತ್ಯನಾರಾಯಣ ಸ್ವಾಮಿ ವೃತ ಪೂಜೆ ನಡೆಸಿದರು. ನಂತರ ಡಾ, ವಾಣಿ ಕುಮಾರಿ ಮದ್ದುಕೂರಿ (ರಾಜಮಂಡ್ರಿ) ಮತ್ತು ಕೆ. ಸಾಯಿ ಪವನ್ ಶರ್ಮ ಅವರು ಕಾರ್ತಿಕ ಮಾಸದ ಮಹತ್ವ ಕುರಿತು ಭಕ್ತರಿಗೆ ಉಪನ್ಯಾಸ ನೀಡಿದರು.ಕಾಕತೀಯ ವಿದ್ಯಾ ಸಂಸ್ಥೆಯ ಮಕ್ಕಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರು ಬಾಲಕಿಯರಿಗಾಗಿ ಲೆಮನ್ ಸ್ಪೂನ್, ಸಂಗೀತ ಕುರ್ಚಿ, ನೃತ್ಯ, ಹಾಗೂ ವಿವಿಧ ಆಟೋಟಗಳು ಮನರಂಜನೆಯನ್ನು ಹೆಚ್ಚಿಸಿವೆ.ಕಾರ್ಯಕ್ರಮದಲ್ಲಿ ನಯೋಪ್ರ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಶರಣಯ್ಯ ನಾಯಕ ಗುಡದಿನ್ನಿ, ಕಮ್ಮವಾರಿ ಸಂಘದ ಅಧ್ಯಕ್ಷ ನೆಕ್ಕಂಟಿ ಶ್ರೀನಿವಾಸರಾವ್, ಕಾರ್ಯದರ್ಶಿ ಗೊಡವರ್ತಿ ಶ್ರೀನಿವಾಸ, ಕಾಕತೀಯ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಗೊಡವರ್ತಿ ಸತ್ಯನಾರಾಯಣ, ಕಾರ್ಯದರ್ಶಿ ಸಂಕರ ಶ್ರೀನಿವಾಸ, ಕಾಕತೀಯ ಸಹಕಾರಿಯ ಅಧ್ಯಕ್ಷ ಜಿ.ಪಾಪರಾವ್, ಪುಟ್ಟಪ್ರಸಾದ್, ಟಿ. ರಾಮಕೃಷ್ಣ, ಬಿ. ಉಮಾಮೇಶ್ವರರಾವ್, ಎಸ್. ಮಲ್ಲಿಕಾರ್ಜುನರಾವ್, ಗೊಡವರ್ತಿ ಸುರೇಶಕುಮಾರ, ಎಸ್. ರಮೇಶ್, ಕೆ. ಮಾರ್ಖಂಡೆಯ್ಯಲು, ಉಡವಲ್ಲಿ ರಾಂಬಾಬು, ವೈಟ್ಲ ರವಿ, ಡಿ. ರಾಮಕೃಷ್ಣ ಸೇರಿದಂತೆ ತಾಲೂಕಿನ ಕಮ್ಮ ಸಮುದಾಯದ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
