ಎನ್.ಎಮ್ ಬಿರಾದಾರ ರವರಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ – ತರಬೇತಿ ಕಾರ್ಯಗಾರ.

ಮಾನ್ವಿ ನ.17

ಪಟ್ಟಣದ ಕಲ್ಮಠ ಗುರುಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಾಗೂ ಮಾಧ್ಯಮ ಸಮಿತಿ, ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘ ಮಾನ್ವಿ ತಾ. ಘಟಕ, ಕಲ್ಮಠ ಶಿಕ್ಷಣ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ತರಬೇತಿ ಕಾರ್ಯಗಾರವನ್ನು ತಾ.ಪಂ. ಇ.ಓ ಶ್ರೀ. ಪುರುರಾಜ್ ಸಿಂಗ್ ಸೋಲಂಕಿ ಐ.ಎ.ಎಸ್. ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗಳು ಕಷ್ಟ ಎಂದು ಭಾವಿಸದೆ ನಿರಂತರವಾದ ಅಧ್ಯಯಾನ ಹಾಗೂ ಪ್ರತಿದಿನದ ವೇಳಪಟ್ಟಿಯ ಪ್ರಕಾರ ಅಧ್ಯಾಯನ ನಡೆಸಿದಲ್ಲಿ ಸುಲಾಭವಾಗಿ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಿದೆ ವಿದ್ಯಾರ್ಥಿಗಳು ಪದವಿ ಕಲಿಕೆಯ ಜೊತೆಗೆ ಸ್ಪರ್ಧತ್ಮಕ ಪರೀಕ್ಷೆಗಳಿಗೆ ಕೂಡ ಸಿದ್ದತೆಗಳನ್ನು ಕೈಗೊಂಡಲ್ಲಿ ಆಢಳಿತಾತ್ಮಕ ಸ್ಪರ್ಧತ್ಮಕ ಪರೀಕ್ಷೆಗಳಲ್ಲಿ ಸುಲಾಭವಾಗಿ ಉತ್ತಿರ್ಣರಾಗಿ ಉನ್ನತವಾದ ಹುದ್ದೆಗಳನ್ನು ಪಡೆಯುವುದಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.ತಹಸೀಲ್ದಾರ್ ಭೀಮರಾಯ.ಬಿ ರಾಮಸಮುದ್ರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 371 ಜೆ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಉತ್ತಮವಾದ ಅವಕಾಶವಿದ್ದು ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಸ್ಪರ್ಧತ್ಮಕ ಪರೀಕ್ಷೆಗಳಿಗೆ ಸಿದ್ದತೆ ಮಾಡಿ ಕೊಂಡಲ್ಲಿ ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ತರಬೇತಿಗಳನ್ನು ಸದುಪಯೋಗ ಪಡಿಸಿ ಕೊಳ್ಳುವಂತೆ ಕೋರಿದರು.

ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕರಾದ ಎನ್.ಎಮ್ ಬಿರಾದಾರ ರವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವರೀತಿ ಸಿದ್ದತೆ ಮಾಡಿ ಕೊಳ್ಳಬೇಕು ಹಾಗೂ ಅವುಗಳ ನಿಯಮಗಳ ಬಗ್ಗೆ ಅಧ್ಯಾಯನ ಮಾಡುವ ಪದ್ದತಿಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ ಕೊಟ್ಟರು.ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ನಿಲಗಲ್ ಶ್ರೀ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದರು ತಾ.ಪಂ.ಸಹಾಯಕ ನಿರ್ದೇಶಕರಾದ ಖಾಲೀದ್ ಅಹ್ಮದ್, ಕಲ್ಮಠ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಸಂಗಯ್ಯಸ್ವಾಮಿ, ಕಿಡಿಗಣಯ್ಯಸ್ವಾಮಿ, ಅ.ಖಿ.ಭಾ,ವೀ,ಲಿಂ ಮಹಾಸಭಾ ಮಾನ್ವಿ ತಾ.ಘಟಕದ ಅಧ್ಯಕ್ಷರಾದ ಅರುಣ್ ಚಾಂದಾ, ಮಾಧ್ಯಮ ಸಮಿತಿಯ ತಾ.ಅಧ್ಯಕ್ಷರಾದ ರಾಜಶೇಖರ್, ಸಿದ್ರಾಮಯ್ಯಸ್ವಾಮಿ, ಸುರೇಶ ಹಿರಾ, ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘ ತಾ. ಘಟಕದ ಅಧ್ಯಕ್ಷರಾದ ಆಂಜನೇಯ್ಯ ನಸಲಾಪುರ, ಕ,ಸಾ,ಪ ಜಿಲ್ಲಾ ಗೌ, ಕಾರ್ಯದರ್ಶಿ ತಾಯಪ್ಪ ಬಿ.ಹೋಸೂರು, ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ ನರಸಿಂಹ, ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button