ಡಾ, ಶಿವಕುಮಾರ ಸ್ವಾಮೀಜಿಯವರ ಸಾಂಗ್ ಗೆ ಮನಸೋತ – ಉತ್ತರ ಕರ್ನಾಟಕದ ಕಲಾವಿದರು.
ಸಿದ್ದನಕೊಳ್ಳ ನ.18

ಇಳಕಲ್ಲ ತಾಲೂಕಿನ ಸಿದ್ದನಕೊಳ್ಳ ಮಠದ ಪರಮ ಪೂಜ್ಯ ಡಾ, ಶಿವಕುಮಾರ ಸ್ವಾಮೀಜಿಯವರು ಮುದ್ದೇಬಿಹಾಳದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪರಮ ಪೂಜ್ಯ ಸಿದ್ದನಕೊಳ್ಳದ ಡಾ, ಶಿವಕುಮಾರ ಸ್ವಾಮೀಜಿ ಅಶ್ವತ್ ಅವರು ಹಾಡಿದ್ದ ಒಳಿತು ಮಾಡು ಮನುಷ್ಯ ಒಳಿತು ಮಾಡು ಮನುಷ್ಯ ಎಂಬ ಸಾಂಗ್ ಗೆ ಉತ್ತರ ಕರ್ನಾಟಕದ ಖ್ಯಾತ ಜಾನಪದ ಕಲಾವಿದರಾದ ಮ್ಯೂಸಿಕ್ ಮೈಲಾರಿ ಜೂನಿಯರ್ ರವಿಚಂದ್ರನ್ ಸೇರಿದಂತೆ ಅನೇಕ ಕಲಾವಿದರು ಪರಮ ಪೂಜ್ಯ ಡಾ, ಶಿವಕುಮಾರ ಸ್ವಾಮೀಜಿಯವರ ಹಾಡನ್ನು ಕೇಳಿ ಖುಷಿ ವ್ಯಕ್ತಪಡಿಸಿದರು.
ನೆರೆದಿದ್ದ ಉತ್ತರ ಕರ್ನಾಟಕದ ಜನಪದ ಕಲಾವಿದರು ಸ್ವಾಮೀಜಿಯವರ ಸಂಗೀತಕ್ಕೆ ಆಶ್ಚರ್ಯ ಪಟ್ಟರು ಸಾರ್ವಜನಿಕರಿಂದ ಚಪ್ಪಾಳೆಯ ಹೂಮಳೆ ಗಿಟ್ಟಿಸಿ ಕೊಂಡ ಸ್ವಾಮೀಜಿಯವರು ಯಾವ ಕಲಾವಿದರಿಗೆ ಕಡಿಮೆ ಇಲ್ಲ ಎನ್ನುವಂತೆ ಸ್ವಾಮೀಜಿಯವರು ಈ ರೀತಿ ಹಾಡನ್ನು ಹಾಡುವುದು ಅತ್ಯಂತ ವಿಶೇಷ ಎಂದು ನೆರೆದಿದ್ದ ಸಾರ್ವಜನಿಕರು ಅಲ್ಲಲ್ಲಿ ಮಾತನಾಡುತ್ತೀರುವುದು ನೋಡಿದರೆ ಆಶ್ಚರ್ಯ ಚಕಿತರಾದರು.

