🔱 ಶ್ರೀ ಕ್ಷೇತ್ರ ಮಂದಾರ್ತಿ, ತುಳುನಾಡಿನ ಆದಿಶಕ್ತಿ ಇತಿಹಾಸ – ವಿಶಿಷ್ಟ ಸಂಪ್ರದಾಯ ಮತ್ತು ಭಕ್ತಿ ಸಂಗಮ.
ಬ್ರಹ್ಮಾವರ ನ.18

ಬ್ರಹ್ಮಾವರ/ಉಡುಪಿ ಜಿಲ್ಲೆಯ ಕರಾವಳಿ ಕರ್ನಾಟಕದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಂದಾರ್ತಿ, ಶತಮಾನಗಳಿಂದ ಭಕ್ತರ ಪಾಲಿಗೆ ಅಭಯ ನೀಡುವ ತಾಯಿಯ ಸನ್ನಿಧಾನವಾಗಿದೆ. ತನ್ನ ಐತಿಹಾಸಿಕ ಹಿನ್ನೆಲೆ, ವಿಶಿಷ್ಟ ‘ಯಕ್ಷಗಾನ ಸೇವೆ’ ಮತ್ತು ಸುಸಂಘಟಿತ ಆಡಳಿತದಿಂದಾಗಿ ಈ ಕ್ಷೇತ್ರವು ನಿತ್ಯವೂ ಭಕ್ತರ ಆಕರ್ಷಣಾ ಕೇಂದ್ರವಾಗಿದೆ.
📜 ಮಂದಾರ್ತಿ ಇತಿಹಾಸ ಮತ್ತು ಕಾರ್ಣಿಕದ ಹೆಜ್ಜೆಗಳು ಮೂಲ ಪುರಾಣ 🕉️:-
ಕ್ಷೇತ್ರದ ಐತಿಹ್ಯದ ಪ್ರಕಾರ, ಶ್ರೀ ದುರ್ಗಾಪರಮೇಶ್ವರಿ ದೇವಿಯು ‘ನಂದ್ಯಾಲಯ’ ಮತ್ತು ‘ಮಂದ್ಯಾಲಯ’ ಎಂಬ ಎರಡು ವಿಭಿನ್ನ ರೂಪದಲ್ಲಿ ಇಲ್ಲಿ ನೆಲೆಸಿದ್ದಳು. ಕಾಲಕ್ರಮೇಣ ಈ ‘ಮಂದ್ಯಾಲಯ’ ವೇ ‘ಮಂದಾರ್ತಿ’ ಯಾಗಿ ಮಾರ್ಪಾಟು ಗೊಂಡಿದೆ.ಮತ್ತೊಂದು ನಂಬಿಕೆಯ ಪ್ರಕಾರ, ಈ ಪ್ರದೇಶವು ಹಿಂದೆ ದಟ್ಟವಾದ ‘ಮಂದಾರ’ ವೃಕ್ಷಗಳಿಂದ ಕೂಡಿದ ಅರಣ್ಯವಾಗಿತ್ತು. ಈ ವನದ ನಡುವೆ ದೇವಿ ನೆಲೆಸಿದ್ದರಿಂದ ಈ ಕ್ಷೇತ್ರಕ್ಕೆ ಮಂದಾರ್ತಿ ಎಂಬ ಹೆಸರು ಬಂದಿತು.ಸ್ಥಳೀಯ ಬ್ರಾಹ್ಮಣ ಎಂಟು ಅರ್ಚಕ ಕುಟುಂಬದವರು ಪೂಜೆಯನ್ನು ನಡೆಸಿ ಕೊಂಡು ಬಂದಿದ್ದು ಈ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾಗಿ ದೀರ್ಘ ಕಾಲದಿಂದ ದೇವಿಯ ಸೇವೆ ಮಾಡಿಕೊಂಡು ಬಂದಿದ್ದಾರೆ.
ವಿಶಿಷ್ಟ ‘ಯಕ್ಷಗಾನ ಹರಕೆ’ 🎭:-
ಮಂದಾರ್ತಿ ದೇವಿಯ ಪ್ರಮುಖ ಕಾರ್ಣಿಕವೆಂದರೆ ಇಲ್ಲಿ ಸಲ್ಲಿಸುವ ಯಕ್ಷಗಾನ ಹರಕೆ (ಬಯಲಾಟ ಸೇವೆ) ಇದು ಭಾರತದ ಯಾವುದೇ ದೇವಸ್ಥಾನದಲ್ಲಿ ಕಾಣಸಿಗದ ಒಂದು ವಿಶೇಷ ಸಂಪ್ರದಾಯ.ಭಕ್ತರು ತಮ್ಮ ಸಂಕಷ್ಟಗಳು ನಿವಾರಣೆ ಯಾದಾಗ ಅಥವಾ ಇಷ್ಟಾರ್ಥ ಸಿದ್ಧಿಯಾದಾಗ, ಮಂದಾರ್ತಿ ಮೇಳದ ಕಲಾವಿದರಿಂದ ದೇವಿಗೆ ಯಕ್ಷಗಾನವನ್ನು ಹರಕೆಯ ರೂಪದಲ್ಲಿ ಆಡಿಸುತ್ತಾರೆ.ಈ ಹರಕೆಯು ದೇವಿಯ ಅಲೌಕಿಕ ಶಕ್ತಿ ಮತ್ತು ಕಲೆಯ ಮೇಲಿನ ಅನುಗ್ರಹವನ್ನು ಸಾರುತ್ತದೆ.
📍 ಕ್ಷೇತ್ರ ಪರಿಚಯ ಮತ್ತು ಭಕ್ತರ ಆಗಮನ ಭೌಗೋಳಿಕ ಸ್ಥಾನ 🗺️:-
ಮಂದಾರ್ತಿ ದೇವಸ್ಥಾನವು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೆಬ್ರಿ ರಸ್ತೆಯಲ್ಲಿದೆ. ಇದು ಮಂಗಳೂರು, ಉಡುಪಿ ಮತ್ತು ಕುಂದಾಪುರಕ್ಕೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ.
ಭಕ್ತರ ಪ್ರವಾಹ 👥:-
ದೇವಿಯ ಕಾರ್ಣಿಕ ಮತ್ತು ಶಕ್ತಿ ಮತ್ತೆಯನ್ನು ನಂಬಿ, ಭಕ್ತಾದಿಗಳು ಕೇವಲ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ , ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಯಂತಹ ರಾಜ್ಯದ ಪ್ರಮುಖ ನಗರಗಳಿಂದಲೂ ಆಗಮಿಸುತ್ತಾರೆ.ಮುಂಬೈ, ಪುಣೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕರಾವಳಿಯ ಅನಿವಾಸಿ ಭಾರತೀಯರು ಸಹ ವಿಶೇಷ ಹಬ್ಬಗಳಂದು ಇಲ್ಲಿಗೆ ಭೇಟಿ ನೀಡುತ್ತಾರೆ.ದೇವಸ್ಥಾನದ ಆವರಣದಲ್ಲಿ ವಸತಿ ಮತ್ತು ಮಧ್ಯಾಹ್ನ ಮತ್ತು ಅನ್ನದಾನ ವ್ಯವಸ್ಥೆಯು ಕಲ್ಪಿಸಲಾಗಿದ್ದು, ದೂರದ ಭಕ್ತರಿಗೆ ಅನುಕೂಲ ಕಲ್ಪಿಸಿದೆ.ಶ್ರೀ ದೇವಾಲಯದಿಂದ ಒಂದು ಪದವಿ ಪೂರ್ವ ಕಾಲೇಜು ಹಾಗೂ ಒಂದು ಪ್ರೌಢ ಶಾಲೆಗಳನ್ನು ನಡೆಸುತ್ತಾ ಬಂದಿದೆ.

🎊 ಜಾತ್ರೆ, ಹಬ್ಬ ಮತ್ತು ಆಚರಣೆಯ ವೈಭವ ವಾರ್ಷಿಕ ಜಾತ್ರೆ (ರಥೋತ್ಸವ) 🗓️:-
ಪ್ರತಿ ವರ್ಷ ಮಾರ್ಗಶಿರ ಮಾಸದ ಪೂರ್ಣಿಮೆ ಯೆಂದು ನಡೆಯುವ ಮಹಾರಥೋತ್ಸವ ಕ್ಷೇತ್ರದ ಅತಿದೊಡ್ಡ ಹಬ್ಬ. ಸಾವಿರಾರು ಭಕ್ತರು ‘ಜೈ ಮಾತಾ’ ಘೋಷಗಳೊಂದಿಗೆ ತೇರನ್ನು ಎಳೆಯುತ್ತಾರೆ.ಜಾತ್ರೆಯ ದಿನದಂದು ದೇವಿಗೆ ವಿಶೇಷ ಪೂಜೆಗಳು, ಮಂಗಳಾರತಿ, ಮತ್ತು ನೂರಾರು ಬಗೆಯ ಹಣ್ಣುಗಳಿಂದ ಅಲಂಕಾರ ಮಾಡಲಾಗುತ್ತದೆ.
ಕಾರ್ತಿಕ ದೀಪೋತ್ಸವ 🪔:-
ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಮತ್ತು ಬೆಳ್ಳಿರಥೋತ್ಸವ ಕ್ಷೇತ್ರದ ಮತ್ತೊಂದು ಕಣ್ಮನ ಸೆಳೆಯುವ ಹಬ್ಬ. ಈ ಸಮಯದಲ್ಲಿ ದೇವಸ್ಥಾನ, ಆವರಣ ಮತ್ತು ಕೆರೆಯ ಸುತ್ತಮುತ್ತ ಸಾವಿರಾರು ದೀಪಗಳಿಂದ ಜಗಮಗಿಸುತ್ತದೆ.ದೀಪಗಳು ದುಷ್ಟ ಶಕ್ತಿಗಳನ್ನು ನಿವಾರಿಸಿ, ಸುಜ್ಞಾನ ಮತ್ತು ಐಶ್ವರ್ಯವನ್ನು ತರುತ್ತವೆ ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
🏛️ ಆಡಳಿತ ಮತ್ತು ಸೇವಾ ಕಾರ್ಯಗಳು ಸುಸಂಘಟಿತ ಆಡಳಿತ 💼:-
ದೇವಸ್ಥಾನದ ಆಡಳಿತವು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಮತ್ತು ಆನುವಂಶಿಕ ಮೊಕ್ತೇಸರರ ನಡುವಿನ ಸಹಯೋಗದಿಂದ ನಡೆಯುತ್ತದೆ. ಇದರಿಂದ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ಮತ್ತು ಸುಗಮವಾಗಿ ನಡೆಯುತ್ತವೆ.
ನಿರ್ವಹಣಾ ಕರ್ತವ್ಯಗಳು ✅:-
ಪೂಜಾ ನಿರ್ವಹಣೆ: ದಿನನಿತ್ಯದ ಮತ್ತು ವಿಶೇಷ ಪೂಜೆಗಳಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು.ಸೌಕರ್ಯ ವೃದ್ಧಿ:-ಭಕ್ತರ ಸಂಖ್ಯೆ ಹೆಚ್ಚಿದಂತೆ ಮೂಲಭೂತ ಸೌಕರ್ಯಗಳು (ಶೌಚಾಲಯ, ಪಾರ್ಕಿಂಗ್, ಕುಡಿಯುವ ನೀರು) ವಿಸ್ತರಿಸುವುದು.
ಧಾರ್ಮಿಕ/ಸಾಮಾಜಿಕ ಕಾರ್ಯ:-
ಧಾರ್ಮಿಕ ವಿದ್ಯೆ ಮತ್ತು ಸಮಾಜ ಸೇವೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದು.ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಕೇವಲ ಒಂದು ದೇವಸ್ಥಾನವಾಗಿ ಉಳಿದಿಲ್ಲ, ಬದಲಿಗೆ ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಶಕ್ತಿಯ ಕೇಂದ್ರವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಅಂತಾ ಸಾರ್ವತ್ರಿಕ ಅಭಿಪ್ರಾಯ ಆಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

