ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ & ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಮಾನ್ವಿ ನ,18

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಬಸವರಾಜ್ ಭೋಗವತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ತಾಯಪ್ಪ ಬಿ. ಹೊಸೂರು, ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣಬಸವ ನೀರಮಾನ್ವಿ, ಹಾಗೂ ಸಂಕಲ್ಪ ವಿಕಲ ಚೇತನರ ಒಕ್ಕೂಟದ ಹೊಸ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ಚಲ್ಮಲ್ ರವರಿಗೆ ಸನ್ಮಾನಿಸಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.
ನಂತರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, “ನೂತನವಾಗಿ ಆಯ್ಕೆಯಾದ ಈ ನಾಲ್ವರು ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ, ನೈತಿಕತೆ ಮತ್ತು ಜವಾಬ್ದಾರಿಯೊಂದಿಗೆ ಕೆಲಸ ಮಾಡುವುದು ನಮ್ಮ ಮಾನ್ವಿ ತಾಲೂಕಿನ ಹೆಮ್ಮೆಯ ವಿಷಯ. ಪತ್ರಕರ್ತರ ಕ್ಷೇತ್ರವಾಗಲಿ, ಸಾಹಿತ್ಯ ಸೇವೆಯಾಗಲಿ, ವಿಕಲ ಚೇತನರ ಹಕ್ಕುಗಳ ಹೋರಾಟವಾಗಲಿ ಇವರು ನೀಡಿರುವ ಕೊಡುಗೆ ಶ್ಲಾಘನೀಯ. ಹೊಸ ಜವಾಬ್ದಾರಿಗಳು ಇವರಿಗೆ ಮತ್ತಷ್ಟು ಶಕ್ತಿ ನೀಡಲಿ. ಸಮಾಜದ ಒಳಿತಿಗಾಗಿ, ದುರ್ಬಲ ವರ್ಗಗಳ ಧ್ವನಿಯಾಗಲು ಹಾಗೂ ಆಡಳಿತಕ್ಕೆ ನಿಜವಾದ ಸಮಸ್ಯೆಗಳನ್ನು ತಲುಪಿಸಲು ಇವರು ಮುಂದುವರಿಯಲಿ,” ಎಂದು ಶುಭ ಹಾರೈಸಿದರು.
ಬಸವರಾಜ್ ಭೋಗವತಿ ಮತ್ತು ತಾಯಪ್ಪ ಬಿ. ಹೊಸೂರು ಇವರಿಬ್ಬರೂ ದೀರ್ಘಕಾಲ ಪತ್ರಕರ್ತರ ಕ್ಷೇತ್ರದಲ್ಲಿ ನಿಜಸ್ಥಿತಿ ಅನಾವರಣ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೊಸ ಜವಾಬ್ದಾರಿಗಳು ಇವರ ಸೇವೆಯನ್ನು ಇನ್ನಷ್ಟು ಬಲ ಗೊಳಿಸಲೆಂದು ಅಭಿಪ್ರಾಯ ವ್ಯಕ್ತವಾಯಿತು.

ಶರಣಬಸವ ನೀರಮಾನ್ವಿ ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾಗಿ ಅವರು ಮಾನ್ವಿ ತಾಲೂಕಿನ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬಲಿದ್ದಾರೆ ಎಂಬ ವಿಶ್ವಾಸ ಹಂಚಿ ಕೊಳ್ಳಲಾಯಿತು.
ಶಿವಕುಮಾರ್ ಚಲ್ಮಲ್ ವಿಕಲಚೇತನರ ಹಕ್ಕುಗಳ ಹೋರಾಟ, ಕಲ್ಯಾಣ ಕಾರ್ಯಗಳು ಮತ್ತು ಸಂಘಟನೆಯ ಬಲವರ್ಧನದಲ್ಲಿ ನಿರಂತರವಾಗಿ ತೊಡಗಿಸಿ ಕೊಂಡು ವಿಕಲ ಚೇತನರ ಸಮಸ್ಯೆಗಳ ಪರಿಹಾರಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುವರು ಎಂಬ ನಂಬಿಕೆ ವ್ಯಕ್ತವಾಯಿತು.
ಅಂತಿಮವಾಗಿ, ನಾಲ್ವರು ಪದಾಧಿಕಾರಿಗಳಿಗೂ ಮುಂದಿನ ಜವಾಬ್ದಾರಿಗಳಲ್ಲಿ ಯಶಸ್ಸು ದೊರಕಿ, ತಮ್ಮ ಕ್ಷೇತ್ರಗಳಲ್ಲಿ ಆದರ್ಶ ಸೇವೆ ಸಲ್ಲಿಸಲಿ ಎಂದು ಹಾರೈಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮಾನ್ವಿ ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ ವಕೀಲರು, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ವಕೀಲರು, ನಗರ ಘಟಕದ ಅಧ್ಯಕ್ಷ ಹೆಚ್.ಮೌನೇಶ ಗೌಡ, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದ್ಲಾಪೂರ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ನಗರ ಯುವ ಘಟಕದ ಅಧ್ಯಕ್ಷ ಎಂ.ಡಿ.ಉಸ್ಮಾನ್, ಮುಖಂಡರಾದ ಸೈಯದ್ ಸಾಜಿದ್ ಖಾದ್ರಿ, ಶೌಕತ್ ಅಲಿ, ನಾಗನಗೌಡ ಆಲ್ದಾಳ್, ಮೌಲಸಾಬ್, ಸಾಜಿದ್ ಪಾಷಾ, ಬಸವರಾಜ್ ಸ್ವಾಮಿ, ವೀರೇಶ್ ವಿಶ್ವಕರ್ಮ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

