ವ್ಯಕ್ತಿತ್ವ ನಿರ್ಮಾಣದಲ್ಲಿ ಶುಚಿತ್ವದ ಪಾತ್ರ ದೊಡ್ಡದು – ಯತೀಶ್.ಎಂ ಸಿದ್ದಾಪುರ.
ಚಳ್ಳಕೆರೆ ನ.18

ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ ಶುಚಿತ್ವದ ಪಾತ್ರ ಬಹಳ ದೊಡ್ಡದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್.ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆಯನ್ನು ನಡೆಸಿ ಕೊಟ್ಟ ಅವರು “ಶುಚಿತ್ವ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ದೇಹ, ಮನಸ್ಸು ಮತ್ತು ಪರಿಸರ ಸ್ವಚ್ಛತೆಯು ಮಕ್ಕಳ ವ್ಯಕ್ತಿತ್ವದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಆದ್ದರಿಂದ ಮಕ್ಕಳು ಶುಚಿತ್ವದ ಮಹತ್ವ ಅರಿತು ಅದನ್ನು ಪಾಲಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ನಡೆದರೆ ಕುಮಾರಿ ಹರ್ಷಿತಾ, ಯಶಸ್ವಿ, ವಿನತಿ ಅವರು ನಾಮಾವಳಿ ಹೇಳಿ ಕೊಟ್ಟರು. ಸಂತೋಷ ಕುಮಾರ್ ಅವರು ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಗೀತ, ಶ್ರೇಯಸ್ಸು, ಶ್ರೀನಿಹಾಂತ್, ಪ್ರಣಾಮ್ಯ, ನಮ್ರತಾ, ಅದಿಶ್, ನಕ್ಷತ್ರಾ, ಪ್ರಣವ್, ರಾಧಾ, ಯುಕ್ತ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

