“ಮಕ್ಕಳು ದಿನ ದಿನ ದಿನವೂ ವಿಶ್ವದೆಲ್ಲೆಡೆ ಮಿನಗುವ ನಕ್ಷತ್ರಗಳು”…..

ಮಕ್ಕಳ ದಿನವು ಹರುಷದ ಹೊನಲು
ಬಾಲ್ಯದ ಮನವು ರಾಜ ಸಿಂಹಾಸ
ಸುಂದರ ವನವು
ಮನೆ ಮಗು ಸ್ವಚ್ಚ ನಗು ಸ್ವರ್ಗದ ತಾಣವು
ಮಕ್ಕಳ ಆಟವು ಸುಂದರ ನೋಟವು
ಆಹ್ಲಾದಕರ ಉತ್ಸವವು
ಕಂದಮಗಳ ಅಡಿಗೆ ಮೆಚ್ಚಿಗೆ ಕೊಡಿ
ಮಕ್ಕಳಲಿ ಬೆರತರೇ ಸಂತೋಷದ ಸಿರಿ
ಹೊನ್ನ ಕಿರಣ ಬೆಳಕು
ಮಕ್ಕಳು ನಕ್ಕರೆ ಜೇನು ಸಕ್ಕರೆಯ
ಸವಿ ರುಚಿಯು
ಹೊನ್ನಹೂವುಗಳ ಚಲ್ಲಾಟ ಗೃಹ
ತುಂಬಾ ಸುಗಂಧವು
ಕ್ರಿಯಾತ್ಮಕವಾಗಿರುವ ಕಂದಮ್ಮಗಳು
ಯೋಗದ ಭೋಗವು
ಬೇದ ಭಾವ ಅಸೂಯೆ ಇರದ ಪುಟಾಣಿಗಳು
ಸುಂದರ ಸೌಂಗಧಿಕಾ ಪುಷ್ಪಗಳು
ಸಂಸ್ಕಾರ ಸಂಸ್ಕೃತಿ ಮಕ್ಕಳಲ್ಲಿ ಬೆಳಸಲು
ಮನೆತದ ಗೌರವ ಇಮ್ಮಡಿಯು
ಮಕ್ಕಳು ಮಾನವ ಲೋಕದ ಸುಂದರ
ಪುಷ್ಪಗಳು ನೋಡುಗರ ಮನ ಸೆಳೆತವು
ಚಿನ್ನರು ದಿನ ದಿನವೂ ವಿಶ್ವದೆಲ್ಲೆಡೆ
ಮಿನಗುವ ನಕ್ಷತ್ರಗಳು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

