“ಮೆದಳು ತಿನ್ನುವ ಅಮೀಬಾ” ಭಯ ಬೇಡ ಯಾತ್ರಾರ್ಥಿಗಳಿಗೆ – ಜಾಗರೂಕತೆ ಇರಲಿ.
ಅಮೀನಗಡ ನ.19

ವಿಶ್ವದಲ್ಲಿ ಜೀವ ಸಂಕುಲಗಳ ನಿತ್ಯ ಬದುಕಿಗಾಗಿ ಹೋರಾಟ ನರಳಾಟ ಜೋತೆ ಜೀವಜಗತ್ತಿನ ಚಲನೆಯಲ್ಲಿ ಅನೇಕ ಅಪಾಯ ರೋಗರುಜಿನ ತಗಲಿ ಜೀವನ್ಮರಣದ ಕ್ರಿಯೆ ಸದಾ ಇದ್ದೇ ಇದೆ ಅನೇಕ ವೖಜ್ಞಾನಿಕ ಅವಿಷ್ಕಾರಗಳ ಮೂಲಕ ಸೂಕ್ಷ್ಮಾಣು ಜೀವಿಗಳ ವಿರುದ್ಧ ಔಷಧ ಉಪಚಾರದಿಂದ ರೋಗ ಮುಕ್ತವಾಗಿದ್ದರೂ ವಾತಾವರಣ ಬದಲಾವಣೆ, ಸಂಚಾರ ಪ್ರವಾಸ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಸ್ಥಳ ಬದಲಾವಣೆ ಯಿಂದ ಅನೇಕ ಸಾಂಕ್ರಾಮಿಕ ರೋಗಗಳು ಮಾನವನನ್ನು ಬಾಧಿಸಿ ದೇಹ ಮನಸ್ಸಿಗೆ ಹಾನಿಯಾಗುವುದು. ಹಾನಿ ಅಪಾಯವನ್ನು ತರುವ ಕೇರಳ ರಾಜ್ಯದಲ್ಲಿ ಮೆದಳು ತಿನ್ನುವ ಅಮೀಬಾ ಪ್ರಕರಣಗಳು ಕಂಡ ಬಂದ ಕಾರಣ ರಾಜ್ಯದ ಶಬರಿಮಲೆ ಯಾತ್ರಿಕರು ಉತ್ತಮ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಜಾಗೃತಿ ವಹಿಸುವುದು ಅಗತ್ಯ ಹಾಗೂ ಮುಖ್ಯವಾಗಿರುತ್ತದೆ. ಮೆದಳು ತಿನ್ನುವ ಅಮೀಬಾ ಬೆಚ್ಚಗಿನ ನಿಂತ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡು ಬರುತ್ತದೆ. ಈಜುಕೊಳ ಕೆರೆಗಳಲ್ಲಿ ಅಮೀಬಾ ಇರಬಹುದು ಈ ಸೋಂಕು ವ್ಯಕ್ತಿ ಯಿಂದ ವ್ಯಕ್ತಿಗೆ ಕುಲಷೀತ ನೀರು ಸೇವನೆ ಮತ್ತು ಈಜುವಾಗ ಮೂಗಿನ ಮುಖಾಂತರ ಮಾನವನ ಮೆದಳು ಸೇರುವುದು.”ನೇಗ್ಲೇರಿಯಾ ಫೌಲರಿ”ಎಂಬುದು ಸ್ವತಂತ್ರವಾಗಿ ಬದಕುವ ಅಮೀಬಾ ಆಗಿದ್ದು.

ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಕುಲಷಿತ ನೀರು ಸೇವನೆಯಿಂದ ಹರಡುತ್ತದೆ. ಅತ್ಯಂತ ವಿಷಕಾರಿ ಸೂಕ್ಷ್ಮಾಣು ಜೀವಿಯಾಗಿದ್ದು ನೀರಿನಿಂದ ಮೂಗಿನ ಮುಖಾಂತರ ಮೆದಳು ಪ್ರವೇಶಿಸಿ ಅಪರೂಪ ಗಂಭೀರ ಮಾರಣಾಂತಿಕ ಕಾಯಿಲೆಯನ್ನುಂಟು ಮಾಡುತ್ತದೆ. ಯಾತ್ರೆ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕವಚ ಬಳಸಬೇಕು ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಮುನ್ನೆಚ್ಚರಿಕೆ ವಹಿಸಿಬೇಕು. ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ ವಾಂತಿ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆ, ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ ಲಕ್ಷಣಗಳು ಕಂಡರೆ ಭಯ ಪಡದೆ ನಿರ್ಲಕ್ಷಿಸದೆ ತುರ್ತು ಆರೈಕೆಯ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಸ ಬೇಕು ಯಾವುದೇ ಆರೋಗ್ಯ ಸಮಸ್ಯಗಳಿಗೆ ಸೂಕ್ತ ಆರೋಗ್ಯ ಸಲಹೆಗಳಿಗಾಗಿ 104 ಉಚಿತ ಕರೆ ಮೂಲಕ ಆರೋಗ್ಯ ಸಲಹೆಗಳನ್ನು ಪಡೆಯಬಹುದು.ಸಲಹೆ ನಮ್ಮದು ಜಾಗೃತಿ ನಿಮ್ಮದು ನಿಮ್ಮ ಆರೋಗ್ಯ ನಮ್ಮ ಸೇವೆ ನಮ್ಮ ಜವಾಬ್ದಾರಿ. ಶುದ್ಧತೆ ಸ್ವಚ್ಛತೆ ಬದ್ಧತೆ ಇರಲಿ.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ದೇವರ ಹಿಪ್ಪರಗಿ/ಬಾಗಲಕೋಟ

