ಜೆ.ಡಿ.ಎಸ್ ಪಕ್ಷದ ಕಾರ್ಯಾಲಯದಲ್ಲಿ – ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ.
ಮಾನ್ವಿ ನ.19

ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ರವರಿಗೆ ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು,
“ಸಾಲುಮರದ ತಿಮ್ಮಕ್ಕ” ಮಹಾ ತಾಯಿ ನಮ್ಮ ರಾಜ್ಯದ ಹೆಮ್ಮೆ, ದೇಶದ ಸ್ಫೂರ್ತಿ. ಮರಗಳನ್ನು ಮಕ್ಕಳಂತೆ ಬೆಳೆಸಿದ ಅವರ ಸೇವೆ ಯುಗ ಯುಗಾಂತರಕ್ಕೂ ನೆನಪಾಗುವಂತಹದ್ದು. ಹಸಿರು ಸಂಸ್ಕೃತಿಯನ್ನು ಸಮಾಜಕ್ಕೆ ಬೋಧಿಸಿದ ತಿಮ್ಮಕ್ಕ ಅಮ್ಮನ ಜೀವನವೇ ಪಾಠ. ಅವರ ಹಸಿರು ಕನಸನ್ನು ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿ,” ಎಂದು ಹೇಳಿದರು.

ನಂತರ ಜೆಡಿಎಸ್ ಪಕ್ಷದ ಮಾನ್ವಿ ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ ವಕೀಲರು, ಮುಖಂಡರಾದ ಸೈಯದ್ ಸಾಜಿದ್ ಖಾದ್ರಿ, ಶೌಕತ್ ಅಲಿ, ನಗರ ಘಟಕದ ಅಧ್ಯಕ್ಷ ಹೆಚ್.ಮೌನೇಶ ಗೌಡ ರವರು ಮಹಾತಾಯಿಯ ಪರಿಸರ ಸೇವೆ, ಸರಳತೆ ಮತ್ತು ತ್ಯಾಗದ ಬದುಕಿನ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಪರಿಸರ ಪ್ರೇಮಿಗಳು ಮಹಾತಾಯಿಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ವಕೀಲರು, ರೈತ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಮದ್ಲಾಪೂರ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ನಗರ ಯುವ ಘಟಕದ ಅಧ್ಯಕ್ಷ ಎಂ.ಡಿ.ಉಸ್ಮಾನ್, ಚಿನ್ನ ರೆಡ್ಡಿ, ರವಿ ಪಾಟೀಲ್, ನಾಗನಗೌಡ ಆಲ್ದಾಳ್, ಮೌಲಸಾಬ್, ಮೌನೇಶ್ ನಾಯಕ, ಶಿವಕುಮಾರ್ ಚಲ್ಮಲ್, ಸಾಜಿದ್ ಪಾಷಾ, ಬಸವರಾಜ್ ಸ್ವಾಮಿ, ವೀರೇಶ್ ವಿಶ್ವಕರ್ಮ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

