ಶ್ರೀ ಎಮ್.ಎಚ್ ಪೂಜಾರಿ ಅವರ – ಭಕ್ತಿ ಗೀತೆ ಬಿಡುಗಡೆ.
ಮರಡ ಬೂದಿಹಾಳ ನ.19

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಮರಡಿ ಬೂದಿಹಾಳ ಗ್ರಾಮದ ಆರಾಧ್ಯ ದೈವಾಗಿರುವ ಮಹಾ ಮಹಿಮ ಶ್ರೀ ಮಾರುತೇಶ್ವರನ ಕುರಿತು “ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ” ಎಂಬ ಭಕ್ತಿ ಗೀತೆಯನ್ನು ಮರಡಿ ಬೂದಿಹಾಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಬಸವನಾಳ, ಮರಡಿ ಬೂದಿಹಾಳ ಹಾಗೂ ಮೂಗನೂರ ಈ ಮೂರು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವುದರ ಮೂಲಕ ಊರಿನ ಸಮಸ್ತ ಗುರು ಹಿರಿಯರು ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಸಾಯಂಕಾಲ ಬಿಡುಗಡೆ ಮಾಡಿದರು.ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿ ಗೀತೆಯಲ್ಲಿ ಶ್ರೀ ಮಾರುತೇಶ್ವರ ದೇವರ ಪವಾಡಗಳು, ಭಕ್ತಿ ಭಾವಗಳು ಊರಿನ ಗಣ್ಯ ಮಾನ್ಯರ ಸಹಕಾರ ಪ್ರೋತ್ಸಾಹ ಎಲ್ಲವನ್ನು ಒಳ ಗೊಂಡಂತೆ ಶ್ರೀ ಎಂ.ಎಚ್ ಪೂಜಾರಿ, ಶಿಕ್ಷಕರು HPS ಹಿರೇಮಳಗಾವಿ ಹಾಗೂ ಉಪಾಧ್ಯಕ್ಷರು SC/ST ನೌಕರರ ಸಂಘ ಹುನಗುಂದ ಮತ್ತು ನಿರ್ದೇಶಕರು ಶಿಕ್ಷಕರ ಪತ್ತಿನ ಸಹಕಾರಿ ಸಂಘ ಹುನಗುಂದ ಇವರು ಅತ್ಯಂತ ಸೊಗಸಾಗಿ ಸುಂದರವಾಗಿ ಗೀತೆ ರಚಿಸಿ ಹಾಡಿಸಿ ಮರಡಿ ಬೂದಿಹಾಳ, ಮೂಗನೂರ ಹಾಗೂ ಬಸವನಾಳ ಗ್ರಾಮ ದವರ ಮೆಚ್ಚುಗೆಗೆ ಪಾತ್ರರಾದರು. ನಮ್ಮೂರ ಹಿರಿಮೆ ಶ್ರೀ ಮಾರುತೇಶ್ವರನ ಮಹಿಮೆ ಎಂಬ ಭಕ್ತಿ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಸ್ತ ಊರಿನ ಗಣ್ಯ ಮಾನ್ಯರಾದ ಶ್ರೀ ಶಂಕರಗೌಡ ಗೌಡರ, ಶ್ರೀ ಶಾಂತಗೌಡ ಪಾಟೀಲ್, ಶ್ರೀ ವಿ.ಜಿ ಗಡೆದ (ನಿವೃತ್ತ Pkps ಬ್ಯಾಂಕ ವ್ಯವಸ್ಥಾಪಕರು) ಶ್ರೀ ಭೀಮಪ್ಪ ಪೂಜಾರಿ, ಶ್ರೀ ಮಹಮ್ಮದಸಾಬ್ ವಾಲಿಕಾರ್, ಶ್ರೀ ಬಸವರಾಜ ಗೂರಿಕಾರ, ಶ್ರೀ ರಾಮಣ್ಣ ಹೊರಕೇರಿ, ಶ್ರೀ ಅಮಿನಸಾಬ್ ಹೊನ್ಯಳ ಶ್ರೀ ಮನೋಹರ ಹಡಪದ ಶ್ರೀ ಗೋಪಾಲ ಹೊರಕೇರಿ ಶ್ರೀ ರಾಜೇಸಾಬ್ ಸುತಗುಂಡರ ಶ್ರೀ ಸಂಗಣ್ಣ ಗೌಡರ ಶ್ರೀ ಹುಸೇನಸಾಬ್ ವಾಲಿಕಾರ ಶ್ರೀ ಬಸವರಾಜ ಮೇಟಿ ಶಿಕ್ಷಕರು ಶ್ರೀ ಮುತ್ತು ವಡ್ಡರ ಶಿಕ್ಷಕರು ಶ್ರೀ ಹನಮಂತ ಮಾದರ ಶಿಕ್ಷಕರು ಶ್ರೀ ಬಸವರಾಜ್ ಪೂಜಾರಿ ಶ್ರೀ ಹನಮಂತ ಪೂಜಾರಿ ಶ್ರೀ ಗೈಬುಸಾಬ್ ಚಪೃರಬಂದ ಹನಮಂತ ತಳವಾರ ಹಾಗೂ ಮರಡಿ ಬೂದಿಹಾಳ ಮೂಗನೂರ ಮತ್ತು ಬಸವನಾಳ ಗ್ರಾಮದ ಗುರು ಹಿರಿಯರು ಯುವಕ ಮಿತ್ರರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಶ್ರೀ ಎಮ್.ಎಚ್ ಪೂಜಾರಿಯವರು ಮಾತನಾಡಿದರು. ಬಿಡುಗಡೆಯಾದ ಭಕ್ತಿ ಗೀತೆಯ ಕುರಿತು ಶ್ರೀ ಮುತ್ತು.ಯ ವಡ್ಡರ್ ಶಿಕ್ಷಕರು ಮಾತನಾಡಿದರು. ಶ್ರೀ ಬಿ.ಆಯ್ ಮೇಟಿಯವರು ಊರಿನ ಗಣ್ಯ ಮಾನ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
