ಜಾನಪದ ಸಾಹಿತ್ಯ ಸಂಸ್ಕೃತಿಯ ಮೂಲ ಬೇರಾಗಿದೆ – ಐ.ಬಿ ಬೆನಕೊಪ್ಪ
ಗದಗ ನ.23

ಜಾನಪದ ಸಂಸ್ಕೃತಿ ನಮ್ಮ ಮೂಲ ಬೇರು, ಸಮುದಾಯದ ಜ್ಞಾನ, ನಂಬಿಕೆಗಳು,ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುತ್ತದೆ,ಎಂದು ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾಧ್ಯಕ್ಷರಾದ ಐ.ಬಿ ಬೆನಕೊಪ್ಪರವರು, ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾ ಘಟಕದ ಸರ್ವ ಪದಾಧಿಕಾರಿಗಳ ಪರ‍್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಕೊಂಡು ಮಾತನಾಡಿದರು.
ಜಗದ್ಗುರು ತೋಂಟದರ‍್ಯ ಸಂಸ್ಥಾನ ಮಠ ಗದಗದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾಧ್ಯಕ್ಷರಾದ ಐ.ಬಿ ಬೆನಕೊಪ್ಪ ರವರು ದಿನಾಂಕ ೪-೧೨-೨೦೨೫ ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ರೂಪುರೇಷೆಯನ್ನು ತಿಳಿಸಿದರು.
ಪದಾಧಿಕಾರಿಗಳು ಜಾನಪದದ ಉಳಿವಿಗೆ ಎಲ್ಲರೂ ಶ್ರಮಿಸೋಣ.ಯುವಕರಲ್ಲಿ ಜಾನಪದದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳುವುದು ಸೂಕ್ತ, ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಲಾವಿದರಿದ್ದಾರೆ ಅವರನ್ನು ಗುರುತಿಸಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸುವ ಕೆಲಸ ಮಾಡೋಣವೆಂದು ಚರ್ಚಿಸಲಾಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳಾದ ಎ.ಎಂ. ವಡಿಗೇರಿ, ಶ್ರೀಮತಿ ಮಂಗಳಾ ಪಾಟೀಲ, ವೀರಣ್ಣ ಮಡಿವಾಳರ, ಬಸವರಾಜ ಕೊಟಗಿ, ದೇಸಾಯಿಪಟ್ಟಿ, ಪ್ರೊ ಶ್ರೀನಿವಾಸ ಬಡಿಗೇರ, ಎಂ ಎಚ್ ಸವದತ್ತಿ, ಡಾ.ಪ್ರಭು ಗಂಜಿಹಾಳ , ಎಸ್ಎಂ ದೊಡ್ಡಣ್ಣವರ, ಬಿ .ಕೆ ನಿಂಗನಗೌಡ್ರ, ಬೂದಪ್ಪ ಅಂಗಡಿ, ಶೀರನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾ ಕಾರ್ಯದರ್ಶಿಗಳಾದ ಪ್ರೊ. ಹೇಮಂತ ದಳವಾಯಿ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರೆ ಕೊನೆಯಲ್ಲಿ ಎಸ್.ಎಂ. ದೊಡ್ಡಣ್ಣವರ ವಂದಿಸಿದರು.
*****
– ಡಾ.ಪ್ರಭು ಗಂಜಿಹಾಳ
ಮೊ-9448775346

