ಮಹಾತ್ಮರ ಪುರಾಣ ಕೇಳುವುದರಿಂದ ಮನಸ್ಸಿ ಗೆ – ಶಾಂತಿ ಸಿಗುತ್ತದೆ ಶ್ರೀಶೈಲಗೌಡ.
ಆಲಮೇಲ ನ.23

ಸುಕ್ಷೇತ್ರ ಮೋರಟಗಿ ಗ್ರಾಮದಲ್ಲಿ “ಶ್ರೀ ವೀರಭದ್ರೇಶ್ವರ 56 ನೇಯ ಜಾತ್ರಾ ಮಹೋತ್ಸವ” ಅಂಗವಾಗಿ ಹಮ್ಮಿ ಕೊಂಡಿರುವ “ಮಹಾ ದಾಸೋಹಿ ಶ್ರೀ ಶರಣ ಬಸವೇಶ್ವರರ ಮಹಾ ಪುರಾಣ” ಕಾರ್ಯಕ್ರಮದಲ್ಲಿ ಸಿಂದಗಿ ವಿಧಾನ ಸಭಾ ಮತ ಕ್ಷೇತ್ರದ BJP ಪಕ್ಷದ ಮುಖಂಡರು ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ ಅವರು ಭಾಗವಹಿಸಿ ಸನ್ಮಾನ ಸ್ವೀಕರಿಸಿ ಸಭೇಯನ್ನು ಉದ್ದೇಶಿಸಿ ಮಾತನಾಡಿದರು.


ಶರಣ ಬಸವೇಶ್ವರರು ಕಲಬುರಗಿಯ ಒಬ್ಬ ಶ್ರೇಷ್ಠ ದಾರ್ಶನಿಕ, ಶರಣ ಮತ್ತು ಧಾರ್ಮಿಕ ನಾಯಕರು ಮಹಾ ದಾಸೋಹ ಭಂಡಾರಿ ಎಂದೇ ಕರೆಯುವ ವಿಶ್ವಕ್ಕೆ ದಾಸೋಹ ಪರಂಪರೆಯನ್ನು ಪಸರಿಸಿದ ಶರಣಬಸವೇಶ್ವರ ಕುರಿತು ಜನಪದರು, ಜನ ಸಾಮಾನ್ಯರು ಸಾವಿರಾರು ಪದ್ಯಗಳನ್ನು ಹಾಗೂ ತ್ರಿಪದಿಗಳನ್ನು ರಚಿಸಿ ಹಾಡಿದ್ದಾರೆ, ಅವರ ಜೀವ ಮಾನದ ಬದ್ಧತೆಯು ಸಾಮಾಜಿಕ ಸೇವೆ, ನೈತಿಕ ಮೌಲ್ಯಗಳು, ಒಳಗೊಳ್ಳುವಿಕೆ ಮತ್ತು ಸರ್ವಧರ್ಮ ಸಮನ್ವಯಕ್ಕೆ ಕಾರಣವಾಗಿ ಶರಣಬಸವೇಶ್ವರ ಪ್ರಭಾವ ಮತ್ತು ಅವರ ಮೇಲೆ ಜನರು ಇಟ್ಟುಕೊಂಡಿರುವ ಭಕ್ತಿಗೆ ಹಿಡಿದ ಕನ್ನಡಿಯಾಗಿದೆ ಶರಣರ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೂಜ್ಯರು, ರಾಜಕೀಯ ಮುಖಂಡರು, ಮೋರಟಗಿ ಗ್ರಾಮದ ಗುರು ಹಿರಿಯರು, ತಾಯಿಂದರು, ಯುವಕ ಮಿತ್ರರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

