ಆಮಂತ್ರಣ ಪತ್ರಿಕೆ, ಪ್ರಜ್ಞಾವಂತ ನಾಗರಿಕರು – ಗೌರವಾನ್ವಿತ ಗಣ್ಯರೇ.
ಇಲಕಲ್ಲ ನ.23

ವಾರ್ತಾ ಭಾರತಿ ದಿನ ಪತ್ರಿಕೆಯೂ ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳಲ್ಲಿ ಒಂದಾಗಿದೆ, ಜನಪರವಾದ ನಿಲುವುಗಳ ಮೂಲಕ ಜನ ಸಾಮಾನ್ಯರ ಧ್ವನಿಯಾಗಿ ಗುರುತಿಸಿ ಕೊಂಡಿರುವ ಈ ಪತ್ರಿಕೆಯ ಮುದ್ರಣ ಆವೃತ್ತಿಯು ಇದು ವರೆಗೂ ಉತ್ತರ ಕರ್ನಾಟಕದ ಜನರಿಗೆ ಲಭ್ಯವಿರಲಿಲ್ಲ, ಆದರೆ ಡಿಜಿಟಲ್ ಮಾಧ್ಯಮದ ಮೂಲಕ ಈ ಭಾಗದ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಪ್ರಸಾರ ಮಾಡಿರುವುದು ಅದರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
ಸದ್ಯಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ಕಲಬುರ್ಗಿಯಲ್ಲಿ ವಾರ್ತಾ ಭಾರತಿ ಪತ್ರಿಕೆಯೂ ತನ್ನ ಮುದ್ರಣ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸುತ್ತಿದೆ, ಈ ನಿಟ್ಟಿನಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ರವರು ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದು ಓದುಗರು, ವೀಕ್ಷಕರು ಹಾಗೂ ಹಿತೈಷಿಗಳ ಜೊತೆಗೆ ಸಭೆಯನ್ನು ಹಮ್ಮಿ ಕೊಳ್ಳಲಾಗಿದೆ.
ನವೆಂಬರ್ 24 ರ ಸೋಮವಾರ ದಂದು ಇಳಕಲ್ ನಗರಕ್ಕೆ ಆಗಮಿಸಲಿರುವ ಅಬ್ದುಸ್ಸಲಾಮ್ ಪುತ್ತಿಗೆ ರವರ ಜೊತೆಗೆ ನಗರದ ಗಣ್ಯರು, ವಿಚಾರವಂತರು ಮತ್ತು ಪ್ರಜಾ ಪ್ರಭುತ್ವವಾದಿಗಳ ಜೊತೆಗೆ ಒಂದು ಸಭೆಯನ್ನು ನಗರದ ಮುನಿಸಿಪಾಲಿಟಿ ಹತ್ತಿರದ ಸ್ನೇಹರಂಗ ಸಭಾಂಗಣದಲ್ಲಿ ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ, ಆದ್ದರಿಂದ ತಾವುಗಳು ತಮ್ಮ ಸಮಯ ಬಿಡುವು ಮಾಡಿಕೊಂಡು ತಪ್ಪದೇ ಭಾಗವಹಿಸಲು ತಮ್ಮಲ್ಲಿ ಗೌರವ ಪೂರ್ವಕವಾಗಿ ವಿನಂತಿಸಿ ಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ
ದಿನಾಂಕ: 24/11/2025ರ ಸೋಮವಾರ
ಸ್ಥಳ: ಸ್ನೇಹರಂಗ ಸಭಾಂಗಣ, ಹಳೆಯ ನಾಟಕ ಥಿಯೇಟರ್ ಪಕ್ಕದಲ್ಲಿ, ಮುನಿಸಿಪಾಲಿಟಿ ಹತ್ತಿರ, ಇಳಕಲ್
ಸಮಯ: ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00ರ ವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್ ಗಫಾರ್ ತಹಶೀಲ್ದಾರ್ ಇಲಕಲ್ಲ

