ಬಾಲ ಸಹಜ ವ್ಯಕ್ತಿತ್ವ ಶ್ರೀರಾಮಕೃಷ್ಣರದ್ದು – ವೆಂಕಟಲಕ್ಷ್ಮೀ ಅಭಿಪ್ರಾಯ.
ಚಳ್ಳಕೆರೆ ನ.24

ಶ್ರೀರಾಮಕೃಷ್ಣರದ್ದು ಬಾಲಸಹಜ ವ್ಯಕ್ತಿತ್ವ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀವೆಂಕಟಲಕ್ಷ್ಮೀ ಅವರು ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಮಾಡುತ್ತ “ದಕ್ಷಿಣೇಶ್ವರಕ್ಕೆ ವಿದಾಯ” ಎಂಬ ಅಧ್ಯಾಯವನ್ನು ವಾಚಿಸಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿಯನ್ನು ಕುಮಾರಿ ಪುಷ್ಪಲತಾ ಅವರು ನಡೆಸಿಕೊಟ್ಟರು.

ಸತ್ಸಂಗ ಕಾರ್ಯಕ್ರಮದಲ್ಲಿ ಪಿ.ಎಸ್.ಮಾಣಿಕ್ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ, ಚೇತನ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು. ವರದಿ-ಯತೀಶ್ ಎಂ ಸಿದ್ದಾಪುರ.

