ರಾಜಕಾರಣದಲ್ಲೂ ಒಳ ಮೀಸಲಾತಿ ನೀಡಬೇಕು – ತರೀಕೆರೆ.ಎನ್ ವೆಂಕಟೇಶ್ ಕರೆ.
ಮೈಸೂರು ನ.24

ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣ, ಮುಡಾ ಪಕ್ಕ ಜೆ.ಎಲ್.ಬಿ ರಸ್ತೆ ಮೈಸೂರಿನ ಸಭಾಂಗಣದಲ್ಲಿ “ಸಾಮಾಜಿಕ ನ್ಯಾಯ ಒಳ ಮೀಸಲಾತಿ ಪರಿ ಕಲ್ಪನೆ” ರಾಜ್ಯ ಮಟ್ಟದ ವಿಚಾರ ಗೋಷ್ಠಿ ಸದಸ್ಯತ್ವ ನೋಂದಣಿ ಆಂದೋಲನ ಮತ್ತು ಮೈಸೂರು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ, ಡಿ. ತಿಮ್ಮಯ್ಯ, ವಿಧಾನ ಪರಿಷತ್ ಸದಸ್ಯರು ಮಾತನಾಡುತ್ತಾ ಸಾಮಾಜಿಕ ಪರಿ ಕಲ್ಪನೆ ರೂವಾರಿ ಯಾದ ದೇವರಾಜ್ ಅರಸು ರವರ ಆಲೋಚನೆಯನ್ನು ಯಥಾವತ್ತಾಗಿ ಜಾರಿಯಾಗುವಲ್ಲಿ ಈಗಿನ ಕಾಂಗ್ರೇಸ್ ಸರ್ಕಾರದ ಮುಖ್ಯ ಮಂತ್ರಿಯವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್. ದಲಿತರ ಸ್ವಾಭಿಮಾನದ ಬದುಕಿಗೆ ಸಂಘರ್ಷದ ಹಾದಿ & ಗುರಿ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಂಗರಾಜು ಮಲ್ಲಾಡಿ ದಲಿತ ಮುಖಂಡರು ಒತ್ತಾಯ ಪೂರ್ವಕವಾದ ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣದ ಆಮೂಲಾಗ್ರ ಬದಲಾವಣೆಗೆ ಆಗ್ರಹ ಪಡಿಸಿದರು.
ಉಟ್ಟುಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ಮಾತನಾಡುತ್ತಾ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಬರುವ ಹಲವಾರು ಉಪ ಜಾತಿಗಳ ಬದುಕು ಬವಣೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿ ಅವರಿಗೆ ನ್ಯಾಯ ಸಮ್ಮತವಾಗಿ ಎರಡು ಪರ್ಸೆಂಟ್ ಕೋಡಲೇ ಬೇಕೆಂದು ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ ಬಾಗಲಕೋಟ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ರಾಜಶೇಖರ ಜಾಪನೂರ ಬೆಂಗಳೂರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತಮ್ಮಣ್ಣ ಖಾನಗಡ್ಡಿ ವಿಜಾಪುರ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಬಿ.ಆರ್ ದೊಡಮನಿ ಬೆಳಗಾವಿ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಆದಿನಾರಾಯಣಪ್ಪ ಬೆಂಗಳೂರು.

ರಾಜ್ಯ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ ಭವಾನಿ ಬಾಳೆಹೊನ್ನೂರು ಅವರು ಹಕ್ಕಿ ಪಿಕ್ಕಿ. ಅಲೆಮಾರಿ ಜನಾಂಗದವರು ಜೀವನ ಮಟ್ಟ ನೈತಿಕವಾಗಿ ಕುಸಿದಿದೆ. ಹಾಗಾಗಿ ಸರ್ಕಾರ ಜನಾಂಗದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಕ.ದ.ಸಂ.ಸ ಜಿಲ್ಲಾ ಸಂಚಾಲಕ ಪ್ರವೀಣ್ ಕುಮಾರ್ ಬೆಂಗಳೂರು. ಕ.ದ.ಸಂ.ಸ ಜಿಲ್ಲಾ ಸಂಚಾಲಕ ವಿಜಯಕುಮಾರ್ ಕೋಲಾರ. ಕದಸಂಸ ಜಿಲ್ಲಾ ಸಂಚಾಲಕ ಯಮನೂರ.ಸಿ ಹಲಗಿ ಬಾಗಲಕೋಟ. ಕದಸಂಸ ಜಿಲ್ಲಾ ಸಂಚಾಲಕ ರಾಜು ದಿಂಡವಾರ ವಿಜಯಪುರ. ಕದಸಂಸ ಜಿಲ್ಲಾ ಸಂಚಾಲಕ ಗೋವಿಂದ ಸಣ್ಣಕ್ಕಿ ಬೆಳಗಾವಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆ ದೇವೆಂದ್ರ ಕುಳವಾಡಿ ಹುಣಸೂರು. ವಂದನಾರ್ಪಣೆ ಆರ್.ಬನ್ನಾರಿ ಹೆಬ್ಬಾಳಕಲ್ ಓಣಿ ಇವರೆಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು ಎಂದು ವರದಿಯಾಗಿದೆ.

