ಸೇನೆಗೆ ಮಾಜಿ ಯೋಧನ ಪುತ್ರ ಆಯ್ಕೆ – ಮುಖ್ಯ ಗುರು ಪ್ರಭು ಟಕ್ಕಳಕಿ ಹರ್ಷ.
ಬೆಟ್ಟದೂರ ನ.25

ಮಾನ್ವಿ ಪೂರ್ವ ಪ್ರಾಥಮಿಕ ಶಿಕ್ಷಣ ನಮ್ಮ ಶಾಲೆಯಲ್ಲಿ ಪಡೆದ ಮಹೇಶ್ ನಾಯಕ ನಮ್ಮ ಶಾಲೆಯ ವಿದ್ಯಾರ್ಥಿ ಇಂದು ದೇಶ ಸೇವೆಗೆ ಭಾರತೀಯ ಸೇನೆಗೆ ನೇಮಕ ವಾಗಿರುವುದು ನನಗೆ ಸಂತಸ ತಂದಿದೆ ಹಾಗೆ ನನ್ನ ವಿದ್ಯಾರ್ಥಿ ದೇಶ ಸೇವೆಗೆ ಹೋಗುತ್ತಿರುವುದು ಈಗಿನ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಪ್ರೇರಣೆಯಾಗಲಿ ಎಂದು ಸಿದ್ಧಾರೂಢ ಸಂಸ್ಥೆಯ ಮುಖ್ಯ ಗುರುಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಮೀಪದ ಬೆಟ್ಟದೂರು ಗ್ರಾಮದ ಮಾಜಿ ಯೋಧ ಗೋಪಾಲ ನಾಯಕ ಬೆಟ್ಟದೂರು ಇವರ ಪುತ್ರ ಮಹೇಶ್ ನಾಯಕ ಬೆಟ್ಟದೂರು ರಾಯಚೂರಿನಲ್ಲಿ ನಡೆದ ಅರ್ಹತಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗ್ನಿವೀರಗೆ ನೇಮಕವಾಗಿದ್ದಾರೆ ಕಾರಣ ಕುಟುಂಬಸ್ಥರು ಹಾಗೂ ಗ್ರಾಮದ ಜನತೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಖಾಸಗಿ ಉಪನ್ಯಾಸಕ ಅಧ್ಯಕ್ಷರಾದ ಆಂಜನೇಯ ನಸ್ಲಾಪುರ್ ಹಾಗೂ ಅಧ್ಯಕ್ಷರು ಪದಾಧಿಕಾರಿಗಳು ಕೇಂದ್ರೀಯ ಶಶಸ್ತ್ರ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಾನ್ವಿ ಮತ್ತು ಸಿರವಾರ ರಾಜ್ಯದ್ಯಕ್ಷರಾದ ಅಂಬಣ್ಣ ನಾಯಕ ಗುಜ್ಜಲ್ ಹಾಗೂ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

