ವಿಕಲ ಚೇತನರ ಗುರುತಿನ ಚೀಟಿಗಾಗಿ – ಬಾಲಕಿಯ ನಾಲ್ಕು ವರ್ಷಗಳ ಓಡಾಟ.
ಬಾಗಲವಾಡ ನ.25

ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ರಂಜನ್ ಬೀ ತಂದೆ ರಹಿಮಾನ್ ಸಾಬ್ ಶ್ರವಣ-ವಾಕ್ ದೋಷ ಹೊಂದಿರುವ ವಿಕಲ ಚೇತನೆ ಬಾಲಕಿ ಯಾಗಿದ್ದು.ಇವರ UDID (ವಿಕಲ ಚೇತನರ ವಿಶೇಷ ಗುರುತಿನ ಚೀಟಿ) ಸಿಗದೇ 2020 ರಿಂದ ಇಲ್ಲಿಯ ವರೆಗೆ ಸುಮಾರು 20–30 ಬಾರಿ RIMS ಆಸ್ಪತ್ರೆಗೆ ಓಡಾಡಿದರೂ ಕೂಡಾ ಕೆಲಸ ಪೂರ್ಣವಾಗಿಲ್ಲ.ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆಯ ಗಂಭೀರ ಗಮನ ಸೆಳೆಯುವಂತಹ ವಿಷಯ.
ರಂಜನ್ ಬೀ ಕುಟುಂಬದ ಮನಕಲಕುವ ಹಾದಿಈ ಹುಡುಗಿಗೆ UDID ಅಗತ್ಯವಾದ ಕಾರಣ, ತಂದೆ-ತಾಯಿ ನಾಲ್ಕೂ ವರ್ಷಗಳಿಂದ ನಿರಾಶೆಯಿಂದಲೂ, ತಾಳ್ಮೆಯಿಂದಲೂ ದಾಖಲಾತಿ ಕೆಲಸಕ್ಕಾಗಿ RIMS ಆಸ್ಪತ್ರೆ ಹಾಗೂ ಸಂಬಂಧಿತ ವಿಭಾಗಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಪ್ರತಿಬಾರಿ “ಮುಂದಿನ ತಿಂಗಳು ಬನ್ನಿ”, “ಮೂರನೇ ತಾರೀಖು ಬನ್ನಿ” ಎಂಬ ಉತ್ತರವೇ ಸಿಗುತ್ತಿದೆ.
ವೈದ್ಯರ ಮಾತು – ಕುಟುಂಬದ ನೋವಿಗೆ ಕಾರಣ
ಪೋಷಕರು ಹೇಳುವುದೇನಂದರೆ:-
“ಡಾಕ್ಟರ್‌ಗಳಿಗೆ Report ಕೊಡಬೇಕಂದ್ರೆ — ‘ಹುಡುಗಿ ನಿದ್ದೆ ಮಾಡಬೇಕು’ ಅಂತ ಹೇಳ್ತಾರೆ. ಸ್ವಲ್ಪ ಅವಳಿಗೆ ತೊಂದರೆ ಆದ್ರು ಕೂಡಾ ‘ಇವತ್ತು ಆಗಲ್ಲ, ಮುಂದಿನ ತಿಂಗಳು 3 ರ ಕ್ಕೆ ಬನ್ನಿ’ ಅಂತ ಮುಂದೂಡ್ತಾರೆ. ಅವರು ಹೇಳಿದ ದಿನಕ್ಕೆ ಹೋದ್ರು ಮತ್ತೆ ಮತ್ತೊಂದು ಕಾರಣ ಹೇಳ್ತಾರೆ.
”ಹೀಗೆ ನಾಲ್ಕು ವರ್ಷಗಳಿನಿಂದ ಕೇವಲ ದಿನಾಂಕ ಬದಲಾವಣೆ, ತಳ್ಳಾಟ, ಲೋಪ — ಆದರೆ ಕೆಲಸ ಇನ್ನೂ ಆಗಿಲ್ಲ.
ಜಿಲ್ಲಾಡಳಿತಕ್ಕೆ ಮನವಿ:-
ವಿಕಲ ಚೇತನರ ಕುಟುಂಬಗಳಿಗೆ UDID ಮಹತ್ವದ ದಾಖಲೆ. ಪಿಂಚಣಿ, ವೈದ್ಯಕೀಯ ನೆರವು, ಸರ್ಕಾರಿ ಕಲ್ಯಾಣ ಯೋಜನೆಗಳು — ಎಲ್ಲಕ್ಕೂ ಇದು ಮೂಲ. ಇಂತಹ ಮಕ್ಕಳನ್ನು ತಿಂಗಳತನಕ, ವರ್ಷಗಳ ತನಕ ಓಡಾಡಿಸುವುದು ಮಾನವೀಯವಾಗಿಯೂ ಸರಿ ಅಲ್ಲ.
ಸಂಕಲ್ಪ ವಿಕಲ ಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ್ ಚಲ್ಮಲ್ ಹೇಳುವುದೇನಂದರೆ,“ವಿಕಲ ಚೇತನರಿಗಾಗಿ ಸರ್ಕಾರ ನೀಡುವ ಬಹುತೇಕ ಯೋಜನೆಗಳ ಮೂಲ ದಾಖಲೆ UDID. ಇಂತಹ ಮಕ್ಕಳಿಗೆ ಹೆಚ್ಚುವರಿ ತೊಂದರೆ ಕೊಡದೆ, ಮಾನವೀಯತೆ ಮೆರೆದಂತೆ ತುರ್ತಾಗಿ ವೈದ್ಯಕೀಯ ವರದಿ ನೀಡುವಂತೆ ಜಿಲ್ಲಾಡಳಿತ ಹಾಗೂ RIMS ಆಡಳಿತ ಕ್ರಮ ಕೈಗೊಳ್ಳಬೇಕು.
”ಈ ವಿಷಯವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ RIMS ಮೇಲ್ದರ್ಜೆ ಅಧಿಕಾರಿಗಳು ತುರ್ತಾಗಿ ಪರಿಶೀಲಿಸಿ, ಈ ವಿಕಲ ಚೇತನೆ ಹುಡುಗಿಗೆ UDID ಮಂಜೂರು ಮಾಡುವ ಕ್ರಮ ಕೈಗೊಳ್ಳಲು ವಿನಂತಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

