ಮಧುಮೇಹ ಸಾಮಾನ್ಯ ಸಾರ್ವಜನಿಕರಲ್ಲಿ – ಅರಿವು ಇರಲಿ.
ಅಮೀನಗಡ ನ.26

ಜಗದ ಜೀವ ಸಂಕುಲಗಳ ಅದರಲ್ಲೂ ಮಾನವ ಜೀವಿ ಸಮೃದ್ಧಿ ಬೆಳವಣಿಗೆ ಜೀವಿತಾವಧಿ ಆರೋಗ್ಯಕರ ಜೀವನ ಸಾಗಲು ದೇಹ ಮನಸ್ಸಿಗೆ ಬಾಧಿತವಾಗುವ ಕಾಯಿಲೆಗಳಿಗೆ ತುತ್ತಾಗದ ಹಾಗೆ ಬದುಕುವ ಜೀವನ ಸ್ವರ್ಗದ ಅನುಭವ ನೀಡುವುದು. ಯಾವುದೇ ರೋಗ ಮಾನವನಿಗೆ ಹರಡಲು ಜೀವನ ಶೈಲಿ ವಾತಾವರಣ ಆಹಾರ ಪದ್ಧತಿ ಪರಿಸರ ಮುಖ್ಯವಾಗುವುದು. ವೈದ್ಯ ವಿಜ್ಞಾನ ಆವಿಷ್ಕಾರಗಳಿಂದ ಅನೇಕ ಸಾಂಕ್ರಾಮಿಕ ಅಸಂಕ್ರಾಮಿಕ ರೋಗಗಳ ನಿಧಾನ ಚಿಕಿತ್ಸೆ ಪದ್ಧತಿಗಳಿಂದ ರೋಗಗಳ ನಿಯಂತ್ರ ನಿರ್ಮೂಲನೆ ಯಾಗಿದ್ದರೂ, ಆಧುನಿಕ ಜೀವನ ಪದ್ಧತಿಯ ಕಾರ್ಯ, ಆಹಾರ ಸೇವನೆ ಮಾನಸಿಕ ಒತ್ತಡ ಭಾಷೆಯ ಬಳಕೆಯಿಂದ ಅನೇಕ ಅಸಾಂಕ್ರಾಮಿಕ ಕಾಯಿಲೆಗಳ ನಮಗರಿವಿಲ್ಲದೇ ದೇಹ ಮನಸ್ಸು ನರಳುವ ಪರಿಸ್ಥಿತಿ ಬರುವುದು ಸಹಜವಾಗಿದೆ. ನಮ್ಮ ವೈಯಕ್ತಿಕ ಕುಟುಂಬದ ಆರೋಗ್ಯದ ಹಿತ ದೃಷ್ಟಿಯಿಂದ ಸಾಮಾನ್ಯ ಆರೋಗ್ಯ ಅರಿವು ನಮಗಿದ್ದರೆ ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಆರೋಗ್ಯಕರ ಜೀವನ ಸಾಗಲು ಸಹಾಯವಾಗುವುದು. ಇತ್ತಿಚೀನ ದಿನಗಳಲ್ಲಿ ಮಧುಮೇಹ (ಸಕ್ಕರೆ) ಕಾಯಿಲೆ ಆವರಿಸುವುದು ಸಾಮಾನ್ಯ ಮಧುಮೇಹದ ಇದೊಂದು ದೇಹದ ರಕ್ತದಲ್ಲಿ ಗ್ಲೂಕೋಸ್ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದೇ ಮಧುಮೇಹ. ನಮಗೆ ಅಗತ್ತ್ಯವಿರುವಷ್ಟು ಇನ್ಸುಲಿನ್ ನನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ. ಜೀವಕೋಶಗಳ ಮೇಲೆ ಗ್ಲೂಕೋಸ್ ಪ್ರಭಾವ ನಿಗಧಿತ ಪ್ರಮಾಣದಲ್ಲಿರುವದಿಲ್ಲ.ಯಾರಿಗೆಲ್ಲಾ ಈ ರೋಗ ಬರಬಹುದು. ಕೌಟುಂಬಿಕ ಹಿನ್ನಲೆ ಇರಬಹುದು, 30 ವರ್ಷ ಮೇಲ್ಪಟ್ಟರಲ್ಲಿ, ಬೊಜ್ಜು ತನವಿದ್ದವರಿಗೆ, ತಂಬಾಕು ಸೇವನೆ. ಮದ್ಯಪಾನ, ಐಷಾರಾಮಿ ಜೀವನ ಶೈಲಿ, ಅನಿಯಂತ್ರಿತ ಆಹಾರ ಸೇವನೆ, ದುಶ್ಚಟಗಳಿಂದ ದೂರವಿರುವುದು ಉತ್ತಮ. ಮಧು ಮೇಹದ ಲಕ್ಷಣಗಳು, ಪದೇ ಪದೇ ಮೂತ್ರ ವಿಸರ್ಜನೆ, ಅತೀ ಹಸಿವಾಗುವುದು, ಬಾಯಾರಿಕೆ ಯಾಗುವುದು, ಆಯಾಸವಾಗುವುದು, ಮಧಮೇಹ ಯಾರಿಗಾದರೂ ಬರಬಹುದು. ಮಧು ಮೇಹದಿಂದ ಪಾರ್ಶವಾಯು, ಕುರುಡುತನ, ಹೃದಯ ಕಾಯಿಲೆಗಳು, ಮೂತ್ರ ಪಿಂಡದ ತೊಂದರೆಗಳು, ನರ ದೌರ್ಬಲ್ಯಗಳು ಇವುಗಳ ತಡೆಗೆ ಶೀಘ್ರ ಪತ್ತೆಗಾಗಿ ಸಮೀಪದ ಆಯುಷ್ಮಾನ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ. ಮಧುಮೇಹ ತಡೆಗೆ ಸ್ವಯಂ ರಕ್ಷಣಾ ಕ್ರಮಗಳನ್ನು ಅನುಸರಿಸುವುದು, ಉಪ್ಪಿನ ಪ್ರಮಾಣ ಕಡಿಮೆ ಸೇವಿಸಬೇಕು ಮಾನಸಿಕ ಒತ್ತಡ ಹೆಚ್ಚಾಗದಂತಿರ ಬೇಕು ಅನಾರೋಗ್ಯಕರ ಆಹಾರ ಸೇವಿಸ ಬಾರದು, ಮಧ್ಯಪಾನ ಧೂಮಪಾನ, ಗುಟ್ಕಾ ತಂಬಾಕು ಮಾಡಬಾರದು ಪೋಷಕಾಂಶ ಯುಕ್ತ ಆಹಾರ ತಾಜಾ ಹಣ್ಣು ತರಕಾರಿ ಸೇವಿಸಬೇಕು. ದಿನನಿತ್ಯ ವ್ಯಾಯಾಮ ವಾಯು ವಿಹಾರ ಮಾಡಬೇಕು. ಉತ್ತಮ ಜೀವನ ಕ್ರಮ ಅನುಸರಿಸಿ ಮಧುಮೇಹ ಬರದಂತೆ ಜಾಗೃತಿ ವಹಿಸಬೇಕು ನಿರ್ಲಕ್ಷಿಸದೇ ಮಧುಮೇಹ ಮುಂಜಾಗ್ರತೆ ಅನುಸರಿಸಿ ನಿತ್ಯ ಬಾಳ ಪಯಣದಲ್ಲಿ ಆರೋಗ್ಯವಂತ ಜೀವನ ಸಾಗಿಸುವುದು ಕುಟುಂಬ ಸಮಾಜ ದೇಶದ ಅಭಿವೃದ್ಧಿಗೆ ಪೂರಕ ವಾಗಿರುತ್ತದೆ. ಮಧುಮೇಹ ಭಯ ಪಡದೆ ಮುಂಜಾಗ್ರತೆ ವಹಿಸಿ ಆರೋಗ್ಯ ಕರ ಜೀವನ ಸಾಗಿಸೋಣ.
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ದೇವರ ಹಿಪ್ಪರಗಿ/ಅಮೀನಗಡ

