🚨 ಬ್ರೇಕಿಂಗ್ ನ್ಯೂಸ್, ಬಿಸಿಯೂಟ ನೌಕರರಿಂದ ಡಿಸೆಂಬರ್ 1 ರಂದು ರಾಜ್ಯಾದ್ಯಂತ ಅಡುಗೆ ಬಂದ್ – ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ..! 🚨ಕೇಂದ್ರದ ಅನುದಾನ ಕಡಿತ ವಿರೋಧಿಸಿ 26 ಲಕ್ಷ ಮಹಿಳೆಯರಿಂದ ಹೋರಾಟ – ವೇತನ ಹೆಚ್ಚಳಕ್ಕೆ ಆಗ್ರಹ..!
ಉಡುಪಿ ನ.26

ರಾಜ್ಯದಲ್ಲಿನ ಸುಮಾರು 26 ಲಕ್ಷಕ್ಕೂ ಹೆಚ್ಚು ಬಿಸಿಯೂಟ (ಅಕ್ಷರ ದಾಸೋಹ) ನೌಕರರು ತಮ್ಮ ಕನಿಷ್ಠ ವೇತನ ಹೆಚ್ಚಳ ಮತ್ತು ಕೇಂದ್ರ ಸರ್ಕಾರದ ಅನುದಾನ ಕಡಿತ ನೀತಿಯನ್ನು ವಿರೋಧಿಸಿ ಡಿಸೆಂಬರ್ 01 ರಂದು (ಡಿ.01) ರಾಜ್ಯಾದ್ಯಂತ ಶಾಲೆಗಳಲ್ಲಿ ಅಡುಗೆ ತಯಾರಿಕೆ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಿ (ಅಡುಗೆ ಬಂದ್) ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.ಸಿಐಟಿಯು (CITU) ಬೆಂಬಲಿತ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ಪತ್ರಿಕಾ ಹೇಳಿಕೆಯ ಪ್ರಕಾರ, ಡಿಸೆಂಬರ್ 01 ರಂದು ಬೆಂಗಳೂರು, ತುಮಕೂರು, ಹುಬ್ಬಳ್ಳಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿರುವ ಕೇಂದ್ರ ಸಚಿವರ ಮನೆಗಳ ಮುಂದೆ ಧರಣಿ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಹೋರಾಟವನ್ನು ತೀವ್ರ ಗೊಳಿಸಲಾಗಿದೆ.
💰 ಕೇವಲ ₹600 ರೂ.ಗೆ ದುಡಿಮೆ:-
ನೌಕರರ ಆಕ್ರೋಶ ಸಂಘಟನೆ ನೀಡಿರುವ ಮಾಹಿತಿಯ ಪ್ರಕಾರ, 2001 ರಲ್ಲಿ ಆರಂಭವಾದ ಅಕ್ಷರ ದಾಸೋಹ ಯೋಜನೆಯು ಇಂದು 11.8 ಕೋಟಿ ಫಲಾನುಭವಿಗಳನ್ನು ತಲುಪಿದೆ. ಆದರೆ, ಕೇಂದ್ರ ಸರ್ಕಾರವು 2014 ರಿಂದ ನೀತಿ ಆಯೋಗದ ಶಿಫಾರಸ್ಸಿನ ಮೇರೆಗೆ ತನ್ನ ಪಾಲಿನ ವಂತಿಗೆಯನ್ನು ಶೇಕಡಾ 90 ರಿಂದ ಶೇಕಡಾ 60 ಕ್ಕೆ ಇಳಿಸಿದೆ.ಕೇಂದ್ರ ಸರ್ಕಾರದ ಈ ಕಡಿತದಿಂದಾಗಿ, ಅಡುಗೆ ತಯಾರಿಕೆ ಮಾಡುವ ಮಹಿಳೆಯರಿಗೆ ಕೇಂದ್ರದ ಅನುದಾನದ ಪ್ರಕಾರ ಕೇವಲ 600 ರೂ.ಗಳ ಅಲ್ಪ ವೇತನಕ್ಕೆ ದುಡಿಯುವ ಅನಿವಾರ್ಯತೆ ಎದುರಾಗಿದೆ.
📢 ಪ್ರಮುಖ ಬೇಡಿಕೆಗಳು:-
ವಂತಿಗೆ ಮರುಸ್ಥಾಪನೆ: ಕೇಂದ್ರ ಸರಕಾರವು ತನ್ನ ಪಾಲಿನ ವಂತಿಗೆಯನ್ನು ಮೊದಲಿನಂತೆ ಶೇಕಡಾ 90 ಕ್ಕೆ ಪುನಃ ಹೆಚ್ಚಿಸಬೇಕು.
ವೇತನ ಹೆಚ್ಚಳ:-
ಬಿಸಿಯೂಟ ನೌಕರರ ವೇತನವನ್ನು ಹೆಚ್ಚಿಸಲು ಕೂಡಲೇ ಅನುಕೂಲ ಮಾಡಿ ಕೊಡಬೇಕು. ಈ ಅಡುಗೆ ಕುಟುಂಬದವರನ್ನು ರಕ್ಷಿಸಲು ಪ್ರಜ್ಞಾವಂತ ನಾಗರಿಕರು ಮತ್ತು ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಮನವಿ ಮಾಡಿದೆ.
ಪರಿಣಾಮ:-
ಡಿಸೆಂಬರ್ 01 ರಂದು ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ವರದಿ:ಆರತಿ.ಗಿಳಿಯಾರು.ಉಡುಪಿ

