ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ – ಚಿತ್ರಕಲಾ ಸ್ಪರ್ಧೆ.
ಚಳ್ಳಕೆರೆ ನ.26

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ವಿವಿಧ ಚಿತ್ರಕಲಾ ಸ್ಪರ್ಧೆಗಳು ನಡೆದವು.

ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕುಮಾರಿ ಹರ್ಷಿತಾ,ವಸಿಷ್ಠ, ಜಶ್ವಿತಾ ಪಡೆದು ಕೊಂಡರೆ ನಮ್ರತಾ, ವಿವಿಕ್ತ, ಪ್ರಣಾಮ್ಯ ಸಮಾಧಾನಕರ ಬಹುಮಾನಗಳನ್ನು ಪಡೆದು ಕೊಂಡರು. ಮಕ್ಕಳಿಗೆ ಪುಸ್ತಕ ಬಹುಮಾನಗಳನ್ನು ಸದ್ಭಕ್ತರಾದ ಶ್ರೀವೆಂಕಟಲಕ್ಷ್ಮಮ್ಮ ಅವರು ವಿತರಿಸಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ನಡೆದರೆ ಯತೀಶ್ ಎಂ ಸಿದ್ದಾಪುರ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚೈತ್ರ, ಪ್ರಶಾಂತ್, ಪ್ರಣವ್, ಸಾಯಿ ಸಮರ್ಥ್, ಋತ್ವಿಕಾ, ಕೇದಾರನಾಥ, ದವನ್, ಜಾಹ್ನವಿ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

