“ಐ.ಎ.ಎಸ್ ಅಧಿಕಾರಿ ಬೀಳಗಿ ಸರ್ ಗೆ ಅಶ್ರು ತರ್ಪಣವು”…..

ಭಾರತ ದೇಶದ ಪ್ರಾಮಾಣಿಕ ದಕ್ಷತೆಗೆ ಮೆರಗು
ಐ.ಎ.ಎಸ್ ಅಧಿಕಾರಿ ಮಹಾಂತೇಶ ಬೀಳಗಿ
ಸರ್
ಬಡತನದಲಿ ಬೆಂದ ಅನುಭವ ಯುವಕರಿಗೆ
ಸ್ಪೂರ್ತಿಯ ಸೆಲೆಯಾದಿರಿ
ತಂದೆಗೆ ತಾಯಿ ಹಿರಿಯರ ಕನಸಿನ
ಕಣ್ಣುಗಳಾದಿರಿ
ಸದಾ ನಗು ಮೊಗದ ಬಸವ ವಿಭೂತಿ
ಭೂಷಣವು
ಸಂಸ್ಕಾರ ಸಂಸ್ಕೃತಿ ಕಾಯಕ ಜೀವಿಯು
ಅಧಿಕಾರತ್ವ ಭ್ರಷ್ಠತೆಗೆ ಮೂಗುದಾರವು
ಸ್ವಚ್ಛ ಸುಂದರ ಆಡಳಿತದ ರೂವಾರಿಯು
ನಿಜತ್ವದ ಬೆಳಕು ಮೂಡಿಸಿದ ನಿಜ ಸುಂದರ
ಸಮಾಜಮುಖಿ ಭಾವುಕರು
ಪ್ರಜಾರಾಜರ ಬಾಳ್ವಗೆ ಏಳ್ಗೆಯ ಶ್ರಮಿಕರು
ಜನ ಸಮೂಹ ಖುಷಿಯಲ್ಲಿರುವಾಗ ಆ ಕರ್ತ
ಕರೆದನೆಕೆ ನಿಮ್ಮನ್ನೇ
ಬೇಗನೆಯು
ಬಡವರ ಬಂಧು ಅನುಕೂಲಗಳ ಒದಗಿಸಲು
ಸದಾ ಸಿದ್ಧರು
ಐ.ಎ.ಎಸ್ ಅಧಿಕಾರಿ ಮಹಾಂತೇಶ ಬೀಳಗಿ
ಸರ್ ನಿಮ್ಮ ಹೆಸರು ಅಜರಾಮರ ಕರುನಾಡ
ಮಡಿಲಲಿ ಮಿಡಿಯಲಿ
ಬೇಜಾರು ಆದರು ಒಳ್ಳೆಯತನವ ಮೆಚ್ಚಿ
ದುಃಖದ ಅಶ್ರು ತರ್ಪಣವು ಪುಷ್ಪ ನಮನಗಳು
ಮತ್ತೆ ಹುಟ್ಟಿ ಬನ್ನಿ ಸರ್…..
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ದೇವರ ಹಿಪ್ಪರಗಿ/ಅಮೀನಗಡ

