ಸಾಮೂಹಿಕ ಸತ್ಯನಾರಾಯಣ ಪೂಜೆ – ಧಾರ್ಮಿಕ ಸಭಾ.

ಹೂಡೇಂ ನ.27

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೂಡ್ಲಿಗಿ, ತಾಯಕನಹಳ್ಳಿ ವಲಯ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಹೂಡೇಂ, ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ, ಡಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರು ಕಾವಲಿ ಶಿವಪ್ಪ ನಾಯಕ ಮಾತನಾಡಿದ ಅವರು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಗೆ ಪರಮ ಪೂಜ್ಯ ಧರ್ಮಾಧಿಕಾರಿಗಳು ನೀಡಿದ ಸೇವೆ ಶ್ಲಾಘನೀಯವಾದುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರಕಾರಕ್ಕೆ ಸಮಾಂತರವಾದ ಕೆಲಸ ಮಾಡುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಬಡವರಿಗೆ ಮಾಸಾಶನ, ನಿರ್ಗತಿಕರಿಗೆ ಮನೆ ನಿರ್ಮಾಣ, ಕುಡಿತಕ್ಕೆ ದಾಸರಾದವರಿಗೆ ಮದ್ಯವರ್ಜನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಘಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ ಪರಮ ಪೂಜ್ಯ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿದೆ. ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಆರ್ಥಿಕ ಸಮಸ್ಯೆಯ ಸಂದರ್ಭ ಹಣಕಾಸಿನ ವ್ಯವಸ್ಥೆ ಹಾಗೂ ಶೌರ್ಯ ವಿಪತ್ತು ಘಟಕಗಳಿಂದ ಸಮಾಜದ ಸರ್ವೋತೋಮುಕ ಅಭಿವೃದ್ದಿಗೆ ಸಹಕಾರಿ ಆಗುತ್ತದೆ‌ ಎಂದರು.

ಈ ವೇಳೆ ಸಂತೋಷ್ ಯೋಜನಾಧಿಕಾರಿ ಕೂಡ್ಲಿಗಿ ಇವರು ನಮ್ಮ ಸಂಘವು ಬರಿ ಸ್ವಸಹಾಯ ಸಂಘವಲ್ಲದೆ ಗ್ರಾಮೀಣ ಅಭಿವೃದ್ಧಿ ಕೆರೆಕಟ್ಟೆಗಳ ಪುನಶ್ಚತನ, ದೇವಸ್ಥಾನಗಳ ಜೀರ್ಣೋದ್ಧಾರ, ರೈತರು ಮತ್ತು ಮಹಿಳೆಯರು ಈ ಸ್ವ- ಸಹಾಯ ಸಂಘದ ಮೂಲ ಉದ್ದೇಶವನ್ನು ತಿಳಿಸಿ ಬಡತನ ನಿರ್ಮೂಲನೆ ಮಾಡುವುದು ಮತ್ತು ನಿಸರ್ಗದ ಬಗ್ಗೆ ನಾವು ಹೇಗೆ ಕಾಳಜಿ ತಿಳಿದು ಕೊಳ್ಳಬೇಕೆಂದು ತಿಳಿಸಿದರು.

ಪೂಜ್ಯರು 58 ವರ್ಷಗಳಿಂದ ಮಾಡಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ಕೃಷಿ, ವಿವಿಧ ಕ್ಷೇತ್ರಗಳಲ್ಲಿಯ ಸೇವೆಯ ನೆನಪಿಸಿ ಕೊಂಡು ಇನ್ನಷ್ಟು ಸೇವೆಯನ್ನು ಮಾಡುವ ಶಕ್ತಿ ಶ್ರೀ ಕ್ಷೇತ್ರದ ಸ್ವಾಮಿ ಪೂಜ್ಯರಿಗೆ ನೀಡಲಿ ಎಂದು ಎಲ್ಲಾ ದೈವ ದೇವರಲ್ಲಿ ಪ್ರಾರ್ಥಿಸಿ ಜನ್ಮ ದಿನದ ಶುಭಾಶಯ ಕೋರಲಾಯಿತು. ಅರ್ಚಕ ಜಗದೀಶ್ ವೈದಿಕತ್ವದಲ್ಲಿ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ನವೀನ್ ಕುಮಾರ್, ಪೊಲೀಸ್ ಇಲಾಖೆಯ ಎಎಸ್ಐ ಮಲ್ಲೇಶ, ಹೂಡೇಂ ಆಸ್ಪತ್ರೆ ವೈದ್ಯಾಧಿಕಾರಿ ಡಾ, ಸಂದೀಪ್, ಸಿದ್ದೇಶಣ್ಣ ಜನ ಜಾಗೃತಿ ವೇದಿಕೆಯ ಸದಸ್ಯರು, ಕೃಷಿ ಮೇಲ್ವಿಚಾರಕರರಾದ ಮಹಾಲಿಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರಾದ ರಾಮಚಂದ್ರಪ್ಪ ಮಾಜಿ ಅಧ್ಯಕ್ಷರು, ಕೆ ರಾಘವೇಂದ್ರ, ಪುಟ್ಟಮ್ಮ ಮಲ್ಲಿಕಾರ್ಜುನ್, ಶಶಿಕಲಾ ಜಯಣ್ಣ, ಸುಂದರಮ್ಮ ಮಲ್ಲಿಕಾರ್ಜುನ್ ಹಾಗೂ ನಿವೃತ್ತಿ ಗ್ರಂಥಪಾಲಕ ಟಿ ಗುರುರಾಜ್, ಗುಡ್ಡದ ಬೋಸಯ್ಯ, ಕನಕ ವಿದ್ಯ ಕೇಂದ್ರದ ಮುಖ್ಯ ಶಿಕ್ಷಕಿ ಸುನಿತಾ ಗುರುರಾಜ್, ಮೇಲ್ವಿಚಾರಕರಾದ ಪ್ರಕಾಶ್, ಸಂತೋಷ, ಟಿ‌.ಎನ್.ಒ ಪ್ರಕಾಶ್, ಸೇವಾ ಪ್ರತಿನಿಧಿ ಲಕ್ಷ್ಮೀ ದೇವಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ವಲಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು, ವಲಯದ ಎಲ್ಲಾ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button