22 ನೇ. ಮನೆ ಮನೆಗೆ ಶಾರದಾ ಮಾತೆಯ – ಸತ್ಸಂಗ ಕಾರ್ಯಕ್ರಮ.
ಮದ್ದಿಹಳ್ಳಿ ನ.27

ಹಿರಿಯೂರು ತಾಲೂಕಿನ ಮದ್ದಿಹಳ್ಳಿಯ ಸದ್ಭಕ್ತರಾದ ಶ್ರೀಮತಿ ರಂಗಮ್ಮ ಪಾತಲಿಂಗಪ್ಪ ಅವರ ನಿವಾಸದಲ್ಲಿ ದಿನಾಂಕ 28/11/2025 ರ ಶುಕ್ರವಾರ ಸಂಜೆ 7ಗಂಟೆ ಯಿಂದ ಸ್ವಾಮಿ ವಿವೇಕಾನಂದ ಸೇವಾ ಮತ್ತು ಶೈಕ್ಷಣಿಕ ಟ್ರಸ್ಟ್ ನ ವತಿಯಿಂದ “22 ನೇ. ಮನೆ ಮನೆಗೆ ಶಾರದಾಮಾತೆ” ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಚಳ್ಳಕೆರೆ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಸಮಾಜ ಸೇವಕರಾದ ಯತೀಶ್ ಎಂ ಸಿದ್ದಾಪುರ ಅವರು ಭಾಗವಹಿಸಿ ಭಜನೆ ಮತ್ತು ಉಪನ್ಯಾಸವನ್ನು ನೀಡಲಿದ್ದು ಸದ್ಭಕ್ತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ನ ಅಧ್ಯಕ್ಷರಾದ ಪರಮೇಶ್ವರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

