ದೈನಂದಿನ ಜೀವನದಲ್ಲಿ ಶ್ರೀಮದ್ ಭಗವದ್ಗೀತೆಯ ಅನು ಸಂಧಾನ ಅಗತ್ಯ – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಡಿ.08

ದೈನಂದಿನ ಜೀವನದಲ್ಲಿ ಶ್ರೀಮದ್ ಭಗವದ್ಗೀತೆಯ ಅನುಸಂಧಾನ ಮಾಡುವುದರಿಂದ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ಶಾಂತಿ ನಗರದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ ಅವರ ಸಮೃದ್ಧಿ ನಿವಾಸದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಗೀತಾ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧ್ಯಾನ ನಡೆಸಿ ಕೊಟ್ಟ ಅವರು “ದೈನಂದಿನ ಜೀವನಕ್ಕೆ ಶ್ರೀಮದ್ ಭಗವದ್ಗೀತೆಯ ಮಾರ್ಗದರ್ಶನ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ಶ್ರೀಮದ್ ಭಗವದ್ಗೀತೆಯು ಮಾನವತೆಗೆ ಸೇರಿದ ಸರ್ವ ಶ್ರೇಷ್ಠ ಗ್ರಂಥವಾಗಿದ್ದು ಅದರ ಪ್ರತಿಯೊಂದು ಶ್ಲೋಕವು ಮಾನವ ಜೀವನಕ್ಕೆ ಮಾರ್ಗ ದರ್ಶನ ನೀಡುತ್ತದೆ.
ಪ್ರತಿ ನಿತ್ಯ ಗೀತೆಯ ಪಾರಾಯಣ ಮತ್ತು ಅಧ್ಯಯನ ಮಾಡುವುದರಿಂದ ಸಾರ್ಥಕ ಬದುಕಿಗೆ ನೆರವಾಗುತ್ತದೆ. ಮನಸ್ಸಿನಲ್ಲಿ ಉದ್ಭವಿಸುವ ಆಸೆಗಳನ್ನು ನಿಯಂತ್ರಿಸಿದಾಗ ಮಾತ್ರ ಮನಶಾಂತಿ ಸಿಗುತ್ತದೆ.ಸದಾ ನಮ್ಮ ಮನಸ್ಸನ್ನು ಭಗವಂತನ ಧ್ಯಾನದಲ್ಲಿಡಬೇಕು ಎಂದರು.
ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ, ಆರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಂ.ಗೀತಾ ನಾಗರಾಜ್, ಎಚ್.ಲಕ್ಷ್ಮೀದೇವಮ್ಮ, ರಂಗಮ್ಮ ಗುಂಡಲ, ನಿರ್ಮಲಾ ಸಂಗಮೇಶ್, ಲೀಲಾವತಿ, ವಿಶಾಲಾಕ್ಷಿ, ಜಗದಂಬಾ, ಬಿ.ಟಿ ಗಂಗಾಂಬಿಕೆ, ಗಿರಿಜಾ, ಜಯಮ್ಮ, ವೀರಮ್ಮ,ಉಷಾ ಶ್ರೀನಿವಾಸ್, ಸುಮನಾ, ಜಿ.ಯಶೋಧಾ ಪ್ರಕಾಶ್, ರಾಜೇಶ್ವರಿ, ಪಾಲಕ್ಕ, ಪುಷ್ಪ, ವಿದ್ಯಾ, ಮಲ್ಲಿಕಾ, ಮಮತಾ ರಾಜಣ್ಣ, ಧರ್ಮರಾಜ್, ಕರಿಬಸಪ್ಪ, ಉಷಾ ಬಸವರಾಜ್ ರೆಡ್ಡಿ, ಹೂವಿನ ಲಕ್ಷ್ಮೀದೇವಿ, ಮೋಹಿನಿ, ಭ್ರಮರಂಭಾ, ಗೀತಾ ವೆಂಕಟೇಶ್, ಪಂಕಜ, ಚೆನ್ನಕೇಶವ, ಸಂತೋಷ್, ರುದ್ರಪ್ಪ, ಗಿರಿಜಾ ಬಸವರಾಜ್, ಸುಧಾಮಣಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ರತ್ನಮ್ಮ, ಸರಸ್ವತಿ, ಎಂ.ಲಕ್ಷ್ಮೀದೇವಮ್ಮ, ಸರ್ವಮಂಗಳಾ, ಪದ್ಮ, ಯತೀಶ್ ಎಂ ಸಿದ್ದಾಪುರ, ಕವಿತಾ ವೆಂಕಟೇಶ್, ಗಾಯನ, ಶ್ಯಾಮ್, ಡಿ. ಕಾವೇರಿ ಸುರೇಶ್, ಗಾಯತ್ರಿ, ಗೋವಿಂದಶೆಟ್ಟಿ, ಶಾರದಾಮ್ಮ, ನಾಗರತ್ನಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

