ಕೆ.ಎನ್ ರಾಜಣ್ಣ ಹೇಳಿಕೆಗೆ ಕಲಬುರಗಿ ಜಿಲ್ಲಾ – ಹಡಪದ ಅಪ್ಪಣ್ಣ ಸಮಾಜ ತೀವ್ರ ಖಂಡನೆ.
ಕಲಬುರಗಿ ಡಿ.08

ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಕುರಿತು ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಅಜಿತ್ ಹನುಮಕ್ಕನವರ ಜೊತೆಯಲ್ಲಿ ನ್ಯೂಸ್ ಅವರ ಸ್ಪೆಷಲ್ ನೇರಾ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಮಧುಗಿರಿ ತಾಲೂಕಿನ ಶಾಸಕರು ಹಾಗೂ ಮಾಜಿ ಸಹಕಾರ ಸಚಿವರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎನ್ ರಾಜಣ್ಣ ಅವರು ನೀಡಿರುವ ಹೇಳಿಕೆಯನ್ನು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜ ಹಾಗೂ ಇತರ ಹಿಂದುಳಿದ ಸಣ್ಣ ಸಣ್ಣ (ಒಬಿಸಿ) ಯ ಸಮುದಾಯಗಳು ಮತ್ತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.ಕೆ.ಎನ್ ರಾಜಣ್ಣ ಅವರು ಹಡಪದ ಅಪ್ಪಣ್ಣ ಸಮಾಜದ ನಿಷೇಧಿತ ಪದ ಬಳಸಿ, ಸಮಾಜವನ್ನು ಅವಮಾನಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಂದು ಸಮುದಾಯವನ್ನು ಸಾರ್ವಜನಿಕವಾಗಿ ಅಪಮಾನಿಸುವುದು ಅಕ್ಷಮ್ಯವ ಅಪರಾಧ. ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವಿರುದ್ಧದ ಸಾರ್ವಜನಿಕ ಹೇಳಿಕೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ, ದ್ವೇಷ ಹಾಗೂ ಅಶಾಂತಿಗೆ ಕಾರಣ ಆಗುವಂಥದ್ದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಸಣ್ಣ ಸಣ್ಣ ಸಮುದಾಯಗಳನ್ನು ಕೀಳಾಗಿ ಕಾಣುವುದು ಕಾಂಗ್ರೆಸ್ ನ ಸಂಸ್ಕೃತಿ ಯಾಗಿದೆ. ಆ ಪಕ್ಷದ ನಾಯಕರು ಜಾತಿಗಳನ್ನು ವೃತ್ತಿಯ ಹೆಸರಲ್ಲಿ ಹಂಗಿಸುವ ಚಾಳಿ ಬೆಳೆಸಿ ಕೊಂಡಿದ್ದಾರೆ. ಇದಕ್ಕೆ ಕೆ.ಎನ್ ರಾಜಣ್ಣ ಅವರ ಹೇಳಿಕೆಯೇ ತಾಜಾ ಉದಾಹರಣೆ ಎಂದು ಹೇಳಿದ್ದಾರೆ. ಹಡಪದ ಸಮಾಜವನ್ನು ಅಪಮಾನಿಸಿದ ಕೆ.ಎನ್ ರಾಜಣ್ಣ ವಿರುದ್ಧ ಕಾಂಗ್ರೆಸ್ ನ ವರಿಷ್ಠರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ರೀತಿಯ ಜಾತಿ ನಿಂದನೆ ಪದಕ್ಕೆ ಕಡಿವಾಣ ಹಾಕುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು. ಈ ನಿಟ್ಟಿನಲ್ಲಿ ಈಗೀನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ‘ಜಾತಿ ನಿಂದನೆ ” ಮಾಡಿ ಈ ಕ್ಷೌರಿಕ ಸಮಾಜಕ್ಕೆ ಅಪಹಾಸ್ಯ ಮಾಡಿ ಚುಚ್ಚು ಮಾತನಾಡುವ ವ್ಯಕ್ತಿಗಳಿಗೆ, ಕಾನೂನು ಪ್ರಕಾರ “ಅಟ್ರಾಸಿಟಿ” ಕಾನೂನು ಜಾರಿಗೆ ತರುವಂತೆ ಸರ್ಕಾರ ಸೂಕ್ತ ಚರ್ಚೆ ಅಧಿವೇಶನದಲ್ಲಿ ಮಾಡಲಿ. ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ (ಕಾಯಕ) ಬಂಧುಗಳಿಗೆ ನ್ಯಾಯ ಸಿಗಲಿ ಎಂಬುದು ಈ ಕರ್ನಾಟಕ ರಾಜ್ಯದ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಬಹು ದಿನಗಳ ಈ ಬೇಡಿಕೆಯು ಈಡೇರಲಿ. ಸಮಾಜದ ಜನತೆ ತೆಲೆ ಎತ್ತಿ ಗೌರವದಿಂದ ಕಾಣುವ ಹಾಗೆ ಬೆಳೆಯಬೇಕು ನಮ್ಮ ಸಮಾಜದ ಜನತೆ ಎಂದು ಈ ಪತ್ರಿಕೆಯ ಮಾಧ್ಯಮ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

