ಶಾಲಾ ಮಕ್ಕಳಿಗೆ ವಿವಿಧ ಸಾಂಕ್ರಾಮಿಕ ರೋಗಗಳ – ಬಗ್ಗೆ ಆರೋಗ್ಯ ಅರಿವು ಕಾರ್ಯಕ್ರಮ ಜರಗಿತು.
ಅಮೀನಗಡ ಡಿ.11

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಎಕ್ಷಲೆಂಟ್ ಇಂಗ್ಲಿಷ್ ಮಾದ್ಯಮ ಫ್ರೌಡ ಶಾಲೆ ಅಮೀನಗಡ ಸಹಯೋಗದಲ್ಲಿ ಶಾಲಾ ಮಕ್ಕಳಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಆರೋಗ್ಯ ಅರಿವು ಜಾಗೃತಿಯನ್ನು ಎಕ್ಷಲೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆ ಅಮೀನಗಡದಲ್ಲಿ ಆಯೋಜಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಖ್ಯವಾಗಿ ಸ್ವಯಂ ರಕ್ಷಣಾ ಕ್ರಮಗಳ ಅನುಸರಿಸುವದು ಹಾಗೂ ಚಿಕಿತ್ಸೆ ಸೌಲಭ್ಯಗಳ ಮಾಹಿತಿ ಇರಬೇಕು. “ಕಡಿತ ಚಿಕ್ಕದು ಹಾನಿ ದೊಡ್ಡದು” ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದಳು ಜ್ವರ ಆನೇಕಾಲು ರೋಗ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತವೆ. ಸೊಳ್ಳೆಗಳ ಲಾರ್ವ ಉತ್ಪತ್ತಿ ತಡೆಯಲು ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ಒಡೆದ ಬಾಟಲ್, ಟಾಯರ್ ಟ್ಯೂಬ್, ಟೆಂಗಿನ ಚಿಪ್ಪು ಕಸ ವಿಲೇವಾರಿ ಮಾಡಬೇಕು, ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಡ ಬೇಕು. ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆ ಭೇಟಿ ನೀಡಬೇಕು.
ಡೆಂಗ್ಯೂ ರೋಗ ತಡೆಗೆ ಸೊಳ್ಳೆ ಪರದೆ. ಸೊಳ್ಳೆ ನಿರೋಧಕ, ಸ್ವಯಂ ರಕ್ಷಣೆ ಮಾಡಿ ಕೊಳ್ಳಬೇಕು. ರೇಬೀಸ್ ರೋಗವು ನಾಯಿ, ಬೆಕ್ಕು, ಪ್ರಾಣಿಗಳ ಕಡಿತದಿಂದ ಬರುತ್ತದೆ. ರೇಬೀಸ್ ರೋಗವು ಮಾರಣಾಂತಿಕವಾಗಿದ್ದು, ನಾಯಿಗಳ ಕಡಿತದಿಂದ ತಪ್ಪಿಸಿ ಕೊಳ್ಳಬೇಕು.
ಸಾಕು ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ಕೊಡಿಸ ಬೇಕು. ಯಾವುದೇ ನಾಯಿ ಕಚ್ಚಿದ ತಕ್ಷಣ ಸ್ವಚ್ಛವಾಗಿ ತೊಳೆದು ಕೊಳ್ಳಿ, ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ರೇಬೀಸ್ ಲಸಿಕೆ ಪಡೆಯಬೇಕು. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ರೇಬೀಸ್ ಚುಚ್ಚುಮದ್ದು ಉಚಿತವಾಗಿ ನೀಡಲಾಗುವುದು.
ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆಗಳಿಗೆ 104 ಉಚಿತ ಕರೆಗಳ ಮೂಲಕ ಮಾಹಿತಿ ಪಡೆಯಬಹುದು. ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಶಾಲಾ ಮಕ್ಕಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಎಕ್ಷಲೆಂಟ್ ಇಂಗ್ಲಿಷ್ ಮಾಧ್ಯಮ ಫ್ರೌಡ ಶಾಲಾ ಮುಖ್ಯ ಗುರುಮಾತೆ, ಸಾವಿತ್ರಿ ಹಿರೇಮಠ, ಶಿಕ್ಷಕ ಸಂತೋಷ ಮಠಪತಿ, ಮುಜಾಮಿಲ್ ಜಮಖಂಡಿ, ವಾಣಿಶ್ರೀ ಅರಳೆಲೆಮಠ, ನಾಗವೇಣಿ ಗರಡಿ, ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

