ರೈತರ ಹಬ್ಬ ಶೋಭಾ ಯಾತ್ರೆಗೆ ಆಹ್ವಾನ – ಸಿ.ಎ ಗಾಳೆಪ್ಪ ಜಿಲ್ಲಾಧ್ಯಕ್ಷರು ರೈತ ಸಂಘ.
ಕೊಟ್ಟೂರು ಡಿ.14

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಬೈರದೇವರಗುಡ್ಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷರಾದ ಸಿ.ಎ ಗಾಳೆಪ್ಪ ನವರು ಡಿಸೆಂಬರ್ 29 ಸೋಮವಾರ ದಂದು ರೈತರ ದಿನಾಚರಣೆ ಅಂಗವಾಗಿ 3 ನೇ. ವರ್ಷದ ರೈತರ ಸಮಾವೇಶ ಒಳಾಂಗಣ ಕ್ರೀಡಾಂಗಣದ ಸಭಾ ಭವನ ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಆದಕಾರಣ ಗಾಣಗಟ್ಟೆ ನಿಂಬಳಗೇರಿ ಮಂಗಾಪುರ ನಾಗೇನಹಳ್ಳಿ ಬೈರದೇವರ ಗುಡ್ಡ ಇನ್ನು ಮುಂತಾದ ಹಳ್ಳಿಗಳಲ್ಲಿ ಕಾರ್ಯಕ್ರಮಕ್ಕೆ ಸಂಘಟನಾಕಾರರು ಮತ್ತು ಊರಿನ ಗ್ರಾಮಸ್ಥರನ್ನು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ನಾಗಮ್ಮ ಗಂಡ ಸಿ.ಎ ಗಾಳೆಪ್ಪ ನವರು ಬೈರೆದೇವರಗುಡ್ಡ ಗ್ರಾಮದಲ್ಲಿರುವ ಶ್ರೀ ಮಾರಮ್ಮ ದೇವಿ ದೇವಸ್ಥಾನದ ನಿರ್ಮಾಣಕ್ಕೆ 101 ಚೀಲ ಸಿಮೆಂಟ್ ಮತ್ತು ಶ್ರೀ ಚೌಡಮ್ಮ ದೇವಸ್ಥಾನಕ್ಕೆ 11001 ರೂಪಾಯಿಗಳನ್ನು ದೇಣಿಗಿಯಾಗಿ ನೀಡಿದರು.

ಈ ಸಂದರ್ಭದಲ್ಲಿ ಸಿ.ರೇಖಾ ಕೊಟ್ಟೂರು ತಾಲೂಕು ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಸಂಘಟನೆಯ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು

