ಆಧುನಿಕ ವಚನಗಳ ಸಂಕಲನ ನುಡಿ – ನೈವೇದ್ಯ ಕೃತಿ ಲೋಕಾರ್ಪಣೆ.

ಮಾನ್ವಿ ಡಿ.15

ಪಟ್ಟಣದ ಗ್ಯಾಲಾಕ್ಸಿ ಮೀಟಿಂಗ್ ಹಾಲ್ ನಲ್ಲಿ ನಡೆದ ಸುವರ್ಣಗಿರಿ ಪ್ರಕಾಶನ ಮಾನ್ವಿ ರವರ ಪ್ರಕಾಶನದ ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿಯನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಮಹಾಂತೇಶ ಮಸ್ಕಿ ಲೋಕಾರ್ಪಣೆ ಗೊಳಿಸಿ ಮಾತನಾಡಿ 12 ನೇ. ಶತಮಾನದಲ್ಲಿ ಬದುಕಿಗೆ ಬೇಕಾಗಿರುವ ಬದುಕಿನಲ್ಲಿ ನುಡಿಯುವುದನ್ನೆ ನಡೆಯಾಗಿಸಿ ಕೊಂಡು ಬರೆದ ಸಾಹಿತ್ಯ ಪ್ರಕಾರವನ್ನು ವಚನಗಳೇಂದು ಕರೆಯಲಾಯಿತು.

ಅಂದಿನ ದಿನಗಳಲ್ಲಿ ಅನೇಕರು ತಮ್ಮ ಬದುಕಿನಲ್ಲಿ ಕಂಡ ಅನುಭವಿಸಿದ ನೋವುಗಳು, ಪ್ರಸಂಗಗಳು ಪಲ್ಲಟ ಗೊಂಡು ವಚನಗಳ ರೂಪದಲ್ಲಿ ಬರುವುದಕ್ಕೆ ಸಾಂಸ್ಕೃತಿಕ ನಾಯಕರೆಂದು ಕರೆಸಿ ಕೊಳ್ಳುವ ವಿಶ್ವಗುರು ಬಸವಣ್ಣನವರು ಒಂದು ಸಮೂಹವನ್ನು ಒಗ್ಗೂಡಿಸಿ ಕೊಂಡು ಸಾಗಿರುವುದರಿಂದಲೇ ಸಾಧ್ಯವಾಗಿದೆ ಶರಣರ ವಚನಗಳನ್ನು ಸ್ಪೂರ್ತಿಯಾಗಿ ಮಾಡಿಕೊಂಡು ಅಧುನಿಕ ವಚನಗಳನ್ನು ರಚನೆ ಮಾಡುವುದಕ್ಕೆ ಸಾಹಿತಿ ಸಿದ್ದಲಿಂಗಯ್ಯನವರು ನಾಂದಿ ಹಾಡಿದ ನಂತರ ಅನೇಕ ಸಾಹಿತಿಗಳು ಅಧುನಿಕ ದೃಷ್ಟಿ ಕೋನದಿಂದ ವಚನಗಳನ್ನು ರಚಿಸಿದ್ದರೆ ಅದ್ದರೆ ಅವುಗಳಲ್ಲಿ ಅನುಭವದ ಹಾದಿಯಲ್ಲಿ ಬರೆದ ವಚನಗಳು ಮನಸ್ಸಿಗೆ ತಟ್ಟುವಲ್ಲಿ ಯಶಸ್ವಿ ಯಾಗುತ್ತವೆ. ಅದ್ದರಿಂದ ಸಾಹಿತಿಗಳು ವಚನಗಳನ್ನು ಕಟ್ಟುವಾಗ ಯಾವ ಸಾಹಿತ್ಯದ ಪ್ರಭಾವಕ್ಕೆ ಒಳಗಾಗದೆ ತಮ್ಮ ಅನುಭವಗಳಿಂದ ಬರೆದಾಗ ಮಾತ್ರ ಜನರಿಗೆ ತಲುಪುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ದಿವ್ಯ ಸಾನಿಧ್ಯವನ್ನು ವಹಿಸಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಾಚನ ನೀಡಿ ಶರಣರು ಜಗತ್ತಿನಲ್ಲಿ ಎಲ್ಲಾವನ್ನು ಹೇಳುವುದನ್ನೇಲ್ಲ ಹೇಳಿದ್ದಾರೆ. ಆದರೆ ಇಂದು ಅವುಗಳ ಪಾಲನೆ ಮಾತ್ರ ಆಗ ಬೇಕಾಗಿದೆ ಇಂದು ನಮ್ಮ ಜೀವನದಲ್ಲಿ ಉತ್ತಮವಾಗಿ ಏಕೆ ಬದುಕವುದಕ್ಕೆ ಅಗುತ್ತಿಲ್ಲ ಎನ್ನುವ ವಿಷಯವನ್ನಿಟ್ಟು ಕೊಂಡೆ ವಚನಗಳು ಹುಟ್ಟಿ ಕೊಂಡವು, ಸಾಹಿತ್ಯ ಹುಟ್ಟಿ ಕೊಂಡವು, ಎಲ್ಲಿಯ ವರೆಗೂ ನಮ್ಮಲ್ಲಿ ಆಸೆಯೆನ್ನುವುದು ಅಳಿಯುವುದಿಲ್ಲವೇ. ಪ್ರಕೃತಿ ಜೋತೆ ಜೋತೆಗೆ ಬದುಕುವುದನ್ನು ಎಲ್ಲಿಯ ವರೆಗೂ ಕಲಿಯುವುದಿಲ್ಲವೊ. ಅಲ್ಲಿಯ ವರೆಗೆ ನಾವು ಸುಂದರವಾದ ಬದುಕನ್ನು ಕಟ್ಟಿ ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನಮಗೆ ವಚನಗಳು ತಿಳಿಸುತ್ತವೆ ಎಂದು ತಿಳಿಸಿದರು.

ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾ ಸ್ವಾಮಿಗಳು ಆಶಿರ್ವಾಚನ ನೀಡಿದರು. ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಕೃತಿಯ ಕುರಿತು ಹಿರಿಯ ಸಾಹಿತಿ ರಮೇಶಬಾಬು ಯಾಳಗಿ ಪರಿಚಯಿಸಿದರು.ಕೃತಿಯ ಲೇಖಕರಾದ ಡಾ, ಚಂದ್ರಶೇಖರ ಸುವರ್ಣಗಿರಿ ಮಠ ತಮ್ಮ ಕೃತಿಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಸ್ಕಿಯ ವೈದ್ಯರಾದ ಡಾ, ಶಿವಶರಣಪ್ಪ ಇತ್ಲಿ, ಜಿಲ್ಲಾ ಕಸಾಪ ಗೌರವ ಅಧ್ಯಕ್ಷರಾದ ತಾಯಪ್ಪ ಬಿ.ಹೋಸೂರು, ಕ.ಸಾ.ಪ.ತಾ.ಅಧ್ಯಕ್ಷರಾದ ಶರಣಬಸವ ನೀರಮಾನ್ವಿ, ಮಾಜಿ ಅಧ್ಯಕ್ಷರಾದ ಡಾ, ಬಸವಪ್ರಭು ಪಾಟೀಲ್ ಬೆಟ್ಟದೂರು, ಸಿಂಧನೂರು ಮಾಜಿ ಕ.ಸಾ.ಪ.ತಾ. ಅಧ್ಯಕ್ಷರಾದ ಪಂಪಯ್ಯಸ್ವಾಮಿ ಸಾಲಿಮಠ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಗಿರೆಯ್ಯಪಾಟೀಲ್, ಬೆಂಗಳೂರಿನ ನ್ಯೂರೋಸರ್ಜನ್ ಡಾ, ಚೈತನ್ಯ ಪ್ರಭು, ಶಂಕ್ರಪ್ಪ ಚಿಕ್ಕಗೌಡರ ಮಾಟಮಾರಿ, ಪ್ರಕಶಕರಾದ ರಾಚಮ್ಮ ಸಾಂಬಯ್ಯಸ್ವಾಮಿ, ತ್ರಯಂಬಕೇಶ ಮೇದಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button