🚨 ಬ್ರೇಕಿಂಗ್ ನ್ಯೂಸ್: ಮಕ್ಕಳ ಜೀವದ ಜೊತೆ ಚೆಲ್ಲಾಟ! ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಳಪೆ ಆಹಾರ, ಸಿಬ್ಬಂದಿಯ ಬೇಜವಾಬ್ದಾರಿತನ – HM ನಿಂದ ಮುಚ್ಚಿ ಹಾಕುವ ಯತ್ನದ ಗಂಭೀರ ಆರೋಪ..!
ಉಡುಪಿ ಡಿ.18
ಇಲಾಖೆ ಸಿ.ಆರ್.ಪಿ, ಅಡುಗೆ ಸಿಬ್ಬಂದಿ ಮತ್ತು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಮುಚ್ಚಿ ಹಾಕುವ ಹುನ್ನಾರದಿಂದಾಗಿ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ (ಪಿ.ಎಂ ಶ್ರೀ ಶಾಲೆ) ವಿದ್ಯಾರ್ಥಿಗಳು ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಆಹಾರವನ್ನು ಸೇವಿಸುವ ದುಸ್ಥಿತಿ ನಿರ್ಮಾಣವಾಗಿದೆ. ಹುಳು ಬಿದ್ದ ಅಕ್ಕಿ, ಹಾಳಾದ ಬೇಳೆ ಕಾಳುಗಳ ಸಾಂಬಾರ್ ನೀಡಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯ ಎಸ್.ಡಿ.ಎಂ.ಸಿ ಸದಸ್ಯ ಗಣಪತಿ ಸೇರೇಗಾರ್ ಕುಕ್ಕೆ ಹಳ್ಳಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಶಾಲೆಯ ಮುಖ್ಯೋಪಾಧ್ಯಾಯರು (HM) ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

😠 ಅಡುಗೆ ಸಿಬ್ಬಂದಿ ದುರ್ವರ್ತನೆ:-
‘ನಾನು ಹೇಳಿದ್ದೆ ಆಗಬೇಕು’ ಎಸ್.ಡಿ.ಎಂ.ಸಿ ಸದಸ್ಯರ ಮೇಲೆ ವಾಗ್ದಾಳಿ! ಶಾಲೆಯ ಅಡುಗೆ ಸಿಬ್ಬಂದಿ ಇಂದ್ರಮ್ಮನ ದರ್ಬಾರ್ ನಡೆಸುತ್ತಿದ್ದು, ತಮ್ಮ ಬೇಜವಾಬ್ದಾರಿತನವನ್ನು ಮೆರೆಯುತ್ತಿದ್ದಾರೆ ಎಂದು ಸ್ಥಳೀಯರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ತಿಳಿಸಿದ್ದಾರೆ.
ಮಕ್ಕಳಿಗೆ ಹೆದರಿಕೆ, ಗದರಿಕೆ:-
ಅಡುಗೆ ಸಿಬ್ಬಂದಿ ಮಕ್ಕಳಿಗೆ ಕಣ್ಣು ಬಿಟ್ಟು ಹೆದರಿಸಿ, ಗದರಿಸಿ ಬಿಸಿ ಊಟ ಬಡಿಸುತ್ತಾರೆ ಎನ್ನುವ ಮಾಹಿತಿಗಳು ಕೇಳಿ ಬಂದಿದೆ.

ಹಾಲು ವ್ಯರ್ಥ, ಚರಂಡಿಗೆ ಎಸೆತ:-
ಮಕ್ಕಳಿಗೆ ಬೇಕಾದಷ್ಟು ಹಾಲು ಕಾಯಿಸದೆ ಅದಕ್ಕಿಂತ ಹೆಚ್ಚಿಗೆ ಹಾಲನ್ನು ಮಾಡಿ ಚರಂಡಿಗೆ ಎಸೆದು ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಎಸ್.ಡಿ.ಎಂ.ಸಿ ಸದಸ್ಯರ ಮೇಲೆ ವಾಗ್ದಾಳಿ:-
ಈ ಕೃತ್ಯವನ್ನು ವಿರೋಧಿಸಿದ ಎಸ್ಟಿಎಂಸಿ ಸದಸ್ಯರ ಮೇಲೆ ವಾಗ್ದಾಳಿ ನಡೆಸಿ ಬೇಜವಾಬ್ದಾರಿತನವನ್ನು ಮೆರೆದಿದ್ದಾರೆ ಎಂದು ಅಲ್ಲಿನ ಎಸ್ಎಂಸಿ ಸದಸ್ಯ ಗಣೇಶ್ ಸೇರಿಗಾರ್ ತಿಳಿಸಿದ್ದಾರೆ. ಇವರ ಈ ದುರ್ವಾಸನೆ ಸಾರ್ವಜನಿಕರಿಗೆ ಮತ್ತು ಎಸ್ಟಿಎಂಸಿ ಅವರಿಗೆ ಬೇಸರ ತಂದಿದೆ.
🐛 ಹಾಳಾದ ಆಹಾರ ಪೂರೈಕೆ, ಹುಳು ಬಿದ್ದ ಅಕ್ಕಿ, ಬೇಳೆ ಸಾಂಬಾರ್..!
ಶಾಲೆಯಲ್ಲಿ ಅಡುಗೆ ಸಿಬ್ಬಂದಿ ಹಾಳಾದ ಬೇಳೆಕಾಳುಗಳನ್ನು ಬಳಸಿ ಸಾಂಬಾರ್ ತಯಾರಿಸುತ್ತಿದ್ದಾರೆ. ಈ ಕುರಿತು ವೀಡಿಯೊದಲ್ಲಿ ಮಾತನಾಡಿದ ಗಣಪತಿ ಸೇರೇಗಾರ್ ಅವರು, “ಮಕ್ಕಳಿಗೆ ಊಟಕ್ಕೆ ನೀಡುತ್ತಿರುವ ಅಕ್ಕಿ ಸಹ ಕಳಪೆ ಯಾಗಿದ್ದು, ಅದರಲ್ಲಿ ಹುಳಗಳು (ಕುಟ್ಟೆ) ಕಂಡು ಬಂದಿವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಅಸ್ವಚ್ಛ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಆರೋಗ್ಯವನ್ನು ಗಂಭೀರ ಅಪಾಯಕ್ಕೆ ತಳ್ಳಲಾಗಿದೆ.
🤥 ಮುಖ್ಯೋಪಾಧ್ಯಾಯರಿಂದ ನಿರ್ಲಕ್ಷ್ಯ, ‘ಏನೂ ಆಗಿಲ್ಲ’ ಎಂದು ಸುಳ್ಳು..!
ಈ ಗಂಭೀರ ಸಮಸ್ಯೆಯ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಾಗ, ಅವರು ಜವಾಬ್ದಾರಿಯಿಂದ ನುಣುಚಿ ಕೊಳ್ಳುವ ಪ್ರಯತ್ನ ಮಾಡಿದ್ದಾರೆ. “ಬೇಳೆ ಸ್ವಲ್ಪ ಹಾಳಾಗಿದೆ, ಬೇರೇನೂ ಆಗಿಲ್ಲ” ಎಂದು ಹೇಳುವ ಮೂಲಕ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುವ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.ಸ್ಥಳೀಯ ವ್ಯಕ್ತಿ ಈ ಕುರಿತು ದೂರು ನೀಡಿದ ನಂತರ ಮೇಲಾಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದಾಗ, ಮುಖ್ಯೋಪಾಧ್ಯಾಯರು “ಇಲ್ಲಿ ಏನು ಆಗಲೇ ಇಲ್ಲ, ಅವರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ” ಎಂದು ಹೇಳುವ ಮೂಲಕ ಅಧಿಕಾರಿಗಳನ್ನು ದಾರಿ ತಪ್ಪಿಸಿ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಒಂದು ಸರ್ಕಾರಿ ಶಾಲೆಯ ಮುಖ್ಯಸ್ಥರೇ ಈ ರೀತಿ ನಿರ್ಲಕ್ಷ್ಯ ವಹಿಸಿ, ಮಕ್ಕಳ ಆರೋಗ್ಯದ ವಿಷಯವನ್ನು ಮುಚ್ಚಿ ಹಾಕಲು ಯತ್ನಿಸುವುದು ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.

📣 ಸಾರ್ವಜನಿಕರ ಆಕ್ರೋಶ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹ..!
ಜಿಲ್ಲಾಧಿಕಾರಿಗಳೇ, ಶಿಕ್ಷಣ ಸಚಿವರೇ – ಗಮನಿಸಿ! ಮಕ್ಕಳ ಆರೋಗ್ಯದ ವಿಷಯದಲ್ಲಿ ಇಷ್ಟೊಂದು ದೊಡ್ಡ ಲೋಪ ನಡೆದಿರುವಾಗ, ಕೂಡಲೇ ಕುಕ್ಕೆಹಳ್ಳಿ ಶಾಲೆಗೆ ಭೇಟಿ ನೀಡಿ, ಕಳಪೆ ಆಹಾರ ನೀಡಿದ ಅಡುಗೆ ಸಿಬ್ಬಂದಿ, ನಿರ್ಲಕ್ಷ್ಯ ತೋರಿದ ಮುಖ್ಯೋಪಾಧ್ಯಾಯರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ಅನುದಾನದ ದುರ್ಬಳಕೆಯ ಸಂಶಯದ ಬಗ್ಗೆಯೂ ಸಮಗ್ರ ತನಿಖೆಗೆ ಆದೇಶಿಸಬೇಕು.
ಶಾಸಕರೇ, ನಿಮ್ಮ ಜವಾಬ್ದಾರಿ ಎಲ್ಲಿ ಅಡಗಿದೆ..?:-
ಸಂಸದರು ಮತ್ತು ಶಾಸಕರು ಕೂಡಲೇ ಮೌನ ಮುರಿದು, ಶಾಲೆಯ ಲೋಪಗಳ ಬಗ್ಗೆ ಪ್ರಶ್ನೆ ಮಾಡಿ, ಮಕ್ಕಳ ಪರವಾಗಿ ನಿಂತು ಇಲಾಖೆಗೆ ಚಾಟಿ ಬೀಸಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಗ್ಗೆ ತಕ್ಷಣ ಕೂಲಂಕಷ ತನಿಖೆ ನಡೆಸಿ, ಮಕ್ಕಳ ಆರೋಗ್ಯದೊಂದಿಗೆ ಆಟವಾಡಿದ ಸಿಬ್ಬಂದಿ ಹಾಗೂ ತಪ್ಪು ಮಾಹಿತಿ ನೀಡಿದ ಮುಖ್ಯೋಪಾಧ್ಯಾಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

