ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಅಧ್ಯಕ್ಷರಾಗಿ – ನಾಗಪ್ಪ ಭೀಮಶ್ಯಾ ಬಿರಾದಾರ ಆಯ್ಕೆ.
ಹಿಕ್ಕನಗುತ್ತಿ ಡಿ.18

ಆಲಮೇಲ ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಹಿಕ್ಕನಗುತ್ತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಈ ಮುಂಚೆ ಅಧ್ಯಕ್ಷ ರಾಗಿದ್ದ ಮಲ್ಕಮ್ಮ.ಬಿ ರೋಡಗಿ ಹತ್ತು ತಿಂಗಳ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿ ಪ್ರಾಪಂಚಿಕ ಕೆಲಸದ ಒತ್ತಡದಿಂದ ರಾಜೀನಾಮೆ ನೀಡಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ನಡೆಯಿತು.
ಈ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ನಾಗಪ್ಪ ಭೀಮಶ್ಯಾ ಬಿರಾದಾರ್. ಹಾಗೂ ಭೀಮಾಶಂಕರ ಈರಯ್ಯ ಹಿರೇಮಠ್. ನಾಮಿನೇಷನ್ ಮಾಡಿದ್ದು. ಒಟ್ಟು 13 ಸದಸ್ಯರ ಮತ ಚಲಾವಣೆ ಯಾಗಿದ್ದು.
ಈ ಚುನಾವಣೆಯಲ್ಲಿ ನಾಗಪ್ಪ ಭೀಮಶ್ಯಾ ಬಿರಾದಾರ ಇವರು 7 ಮತಗಳನ್ನು ಪಡೆದಿದ್ದು ಮತ್ತು ಭೀಮಾಶಂಕರ ಈರಯ್ಯ ಹಿರೇಮಠ ಇವರಿಗೆ 6. ಮತಗಳನ್ನು ಪಡೆದಿದ್ದು. 7 ಮತಗಳನ್ನು ಪಡೆದ ನಾಗಪ್ಪ ಭೀಮಶ್ಯಾ ಬಿರಾದಾರ ಇವರು ಜಯಗಳಿಸಿರುವುದಾಗಿ ಚುನಾವಣಾ ಅಧಿಕಾರಿಯಾದ ಲೀಲಾವತಿ ಗೌಡ ಘೋಷಣೆ ಮಾಡಿದರು.
ಇದೆ ಸಂದರ್ಭದಲ್ಲಿ ಸಿಂದಗಿ ಸಿ.ಪಿ.ಐ ನಾನಗೌಡ ಪೊಲೀಸ್ ಪಾಟೀಲ್ ಹಾಗೂ ಆಲಮೇಲ ಪಿ.ಎಸ್.ಐ ಅರವಿಂದ್ ಅಂಗಡಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ನಾಗಪ್ಪ ಭೀಮಶ್ಯಾ ಬಿರಾದರ ಜಯಗಳಿಸಿರುವ ಸಂತೋಷವನ್ನು ಅಭಿಮಾನಿಗಳು ವಿಜಯೋತ್ಸವ ಆಚರಣೆ ಮಾಡಿದರು.
ಈ ವಿಜಯೋತ್ಸವದಲ್ಲಿ ಆಲಮೇಲ ಪಟ್ಟಣದ ಎ.ಪಿ.ಎಂ.ಸಿ ಅಧ್ಯಕ್ಷರಾದ ಬಸವರಾಜ್ ಬಾಗೆವಾಡಿ, ಎಚ್.ಎಮ್ ಯಡಗಿ ಅಹಿಂದ ನಾಯಕರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಣ್ಣ ಬಿರಾದಾರ್, ಶಿವಯೋಗಪ್ಪ ಸಾತಲಗಾವ, ಬಸವರಾಜ್ ಐರೋಡಗಿ, ನಿಂಗಣ್ಣ ಸಾಹುಕಾರ್ ಜೇರಟಗಿ, ಶಂಕರ್ ಬಾದಾನ್, ಮಾಂತಪ್ಪಾ ಬಾದನ, ಬಸಣ್ಣ ಬಿರಾದಾರ್, ಶಿವಯೋಗಪ್ಪ ಬಿರಾದಾರ್, ಮಲ್ಕಣ್ಣ ಬಿರಾದಾರ್, ಶ್ರೀಶೈಲ್ ಪೂಜಾರಿ ಬಸವರಾಜ್ ತೆಲ್ಲೂರ್ ಮಾಜಿ ತಾಲೂಕ ಪಂಚಾಯಿತಿ ಸದಸ್ಯರು, ಗಣಿಯಾರ, ಕಲಹಳ್ಳಿ ರಾಂಪುರ, ಗಣಿಯರ ತಾಂಡಾ, ರಾಂಪುರ ತಾಂಡಾ ಗ್ರಾಮಗಳ ಯುವಕರು, ರೈತರು, ಮತ್ತು ಪಿ.ಕೆ.ಪಿ.ಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣಗೌಡ. ಪಾಟೀಲ್ ಹಾಗೂ ಸಿಬ್ಬಂದಿ ವರ್ಗ ಪಿ.ಕೆ.ಪಿ.ಎಸ್ ಸದಸ್ಯರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ ಹಿರೇಮಠ ಆಲಮೇಲ

