ಕರುಣೆಯ ಮೂರುತಿ ಶಾರದೆ – ರಮ್ಯಾ ಕಲ್ಲೂರು.
ಚಳ್ಳಕೆರೆ ಡಿ.18

ಶ್ರೀಮಾತೆ ಶಾರದಾದೇವಿಯವರು ಕರುಣೆಯ ಸಾಕಾರ ಮೂರ್ತಿಯೇ ಆಗಿದ್ದರು ಎಂದು ತುಮಕೂರಿನ ಸೋದರಿ ನಿವೇದಿತಾ ನಿಕೇತನದ ಮುಖ್ಯಸ್ಥರಾದ ಸೋದರಿ ರಮ್ಯಾ ಕಲ್ಲೂರು ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಮಾತೆ ಶಾರದಾದೇವಿಯವರ 173 ನೇ. ಜಯಂತ್ಯುತ್ಸವ” ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಕರುಣೆಯ ಮೂರುತಿ ಶಾರದೆ” ಎಂಬ ವಿಷಯವಾಗಿ ಪ್ರವಚನ ನೀಡಿದರು.

ಶ್ರೀಮಾತೆಯವರ ಕರುಣೆಯು ಜಗತ್ತಿನ ಸಕಲ ಜೀವಿಗಳ ಮೇಲೆ ಹರಿಯುತ್ತಿರುವ ರೀತಿ ಅಮೋಘವಾದದ್ದು ಅದು ಇಂದಿಗೂ ಮುಂದುವರೆಯುತ್ತಿರುವುದು ಆಶ್ಚರ್ಯದ ಸಂಗತಿ ಎಂಬುದಕ್ಕೆ ತಮಿಳುನಾಡಿನ ಜೈಲು ಖೈದಿ ಮುರಳೀಧರನ್ ನ ಜೀವನದ ಘಟನೆಯೇ ಸಾಕ್ಷಿ ಎಂದು ಉದಾಹರಣೆ ಸಹಿತ ವಿವರಿಸಿದರು.

ಈ ಸತ್ಸಂಗದ ಆರಂಭದಲ್ಲಿ ಸೋದರಿ ನಿವೇದಿತಾ ನಿಕೇತನದ ಸದಸ್ಯರಿಂದ ವಿಶೇಷ ಭಗವನ್ನಾಮ ಸಂಕೀರ್ತನಾ ಕಾರ್ಯಕ್ರಮ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಕಾರ್ಯಕ್ರಮದ ಸ್ವಾಗತ ಪರಿಚಯ ವಂದನಾರ್ಪಣೆಯನ್ನು ಸದ್ಭಕ್ತರಾದ ಶ್ರೀಮತಿ ಡಿ.ಕಾವೇರಿ ಸುರೇಶ್ ಅವರು ನಡೆಸಿ ಕೊಟ್ಟರು.
ಸತ್ಸಂಗ ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಶ್ರೀಸುಬ್ರಮಣ್ಯ ಶಾಸ್ತ್ರಿ, ಎಂ.ಗೀತಾ ನಾಗರಾಜ್, ನೇತಾಜಿ ಪ್ರಸನ್ನ, ತೊಯಜಾಕ್ಷಿ, ಯತೀಶ್ ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ, ಮಾನ್ಯ, ಲಕ್ಷ್ಮೀದೇವಮ್ಮ, ರಂಗಮ್ಮ, ಗೀತಾ ಪ್ರಕಾಶ್, ಸುಮನಾ, ಅಶ್ವಿನಿ, ಪಂಕಜ ಚೆನ್ನಪ್ಪ, ಮೋಹನ್ ರಾವ್, ಸಂಜನಾ, ಋತಿಕ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

