ವೃಕ್ಷ ಮಾತೆಗೆ ವನಸಿರಿ ಹಸಿರು ನಮನ ಸಲ್ಲಿಸುವ ಕಾರ್ಯ ಶ್ಲಾಘನೀಯ – ಶ್ರೀ ಷ.ಬ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ರೌಡಕುಂದ.

ಸಿಂಧನೂರು ಡಿ.18

ನಗರದ ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ (ಹೊಸದು) ಆವರಣದಲ್ಲಿ ವನಸಿರಿ ಪೌಂಡೇಷನ್ (ರಿ) ರಾಯಚೂರು ವತಿಯಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಯುಕ್ತ 114 ಸಸಿಗಳನ್ನು ನೆಡುವ ಮೂಲಕ ಹಸಿರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಸಸಿ ನಿರುಣಿಸುವ ಮೂಲಕ ಚಾಲನೆ ನೀಡಿದ ರೌಡಕುಂದ ಮಠದ ಶ್ರೀ ಷ.ಬ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಹಸಿರೇ ಹುಸಿರು ಎನ್ನುವ ಕಾರ್ಯಕ್ರಮದಲ್ಲಿ ಹಸಿರಿಗೆ ನಮನ ಸಲ್ಲಿಸುವ ಕಾರ್ಯವಾಗುತ್ತಿದೆ ಈ ಒಂದು ಕಾರ್ಯದಲ್ಲಿ ತಾಯಂದಿರು, ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಗಿಡನೆಟ್ಟು ಬೆಳಸಿ ಸಾಲುಮರದ ತಿಮ್ಮಕ್ಕ ಅವರಂತೆ ಆಗಬೇಕು. ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲ ಎಂದು ಕೊರಗದೆ ಗಿಡಗಳನ್ನೇ ಮಕ್ಕಳೆಂದು ಪಾಲನೆ ಪೋಷಣೆ ಮಾಡಿದ್ದಾಳೆ. ತಾಯಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ನವಂಬರ್ 14 ಮಕ್ಕಳ ದಿನಾಚರಣೆಯ ದಿನದಂದೆ ತಮ್ಮ ಕೊನೆಯುಸಿರೆಳೆದಿದ್ದಾರೆ. ವೃಕ್ಷ ಮಾತೆಯ ಆರ್ಶಿವಾದದೊಂದಿಗೆ ವನಸಿರಿ ತಂಡ ಹಾಗೂ ಅಮರೇಗೌಡ ಮಲ್ಲಾಪುರ ಅವರು ಸಿಂಧನೂರು ನಗರವನ್ನು ಇಂದು ಸುಂದರ ಮತ್ತು ಹಸಿರುನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಇದು ನಾಡಿನಲ್ಲಡೆ ವನಸಿರಿ ತಂಡದ ಗೌರವವನ್ನು ಹೆಚ್ಚಿಸುತ್ತದೆ.ಹರಗುರು ಚರಮೂರ್ತಿಗಳ ಆರ್ಶಿವಾದ ಅಮರೇಗೌಡ ಮಲ್ಲಾಪುರ ಅವರ ಮೇಲೆ ಸದಾಕಾಲ ಇರಲಿದೆ ಎಂದು ಆರ್ಶಿವದಿಸಿದರು.

ರಸ್ತೆಯುದ್ಧಕ್ಕೂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಕೈಯಲ್ಲಿ ಗಿಡಗಳನ್ನು ಹಿಡಿದು ಪೂಜ್ಯರಿಗೆ ಬಿಲ್ವಪತ್ರಿ ಸಸಿ ನೀಡಿ ಸ್ವಾಗತಿಸಲಾಯಿತು. ನಂತರ ಗಣ್ಯ ವ್ಯಕ್ತಿಗಳು ಸಾಲುಮರದ ತಿಮ್ಮಕ್ಕ ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿದರು.

ಇದೇ ವೇಳೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಹಾಗೂ ಓಂ ಶಾಂತಿ ಪಾರ್ವತಿ ಅಮ್ಮನವರು, BCM ತಾಲೂಕ ದಂಡಧಿಕಾರಿಗಳಾದ ಲಿಂಗಪ್ಪ ಅಂಗಡಿ, ಅರಣ್ಯ ಅಧಿಕಾರಿ ವಿಜಯಲಕ್ಷ್ಮಿ, ಅರುಣಾ, ಮಲ್ಲಿಕ್,ಮೌನೇಶ ಸಾಲ್ವಡಗಿ, ವನಸಿರಿ ಪೌಂಡೇಷನ್ ರಾಜ್ಯ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ ಹೊಸಹಳ್ಳಿ, ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರು, ಸದಸ್ಯ ಆನಂದ ಗುಂಜಳ್ಳಿ, ವಸತಿ ನಿಲಯದ ಶ್ರೀಮತಿ ಸುವರ್ಣ, ಶ್ರೀಮತಿ ವೀಣಾ, ಮಲ್ಲಿಕಾರ್ಜುನ, ಲೋಕೇಶ, ಶ್ರೀ ಮತಿ ಕಮಲ, ಹುಸೇನಪ್ಪ, ಅಮರೇಶ, ದ್ಯಾಮಣ್ಣ, ವೆಂಕಟೇಶ ಹಾಗೂ ನಿಲಯದ ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿ ಗೊಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button