ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ) ಕರ್ನಾಟಕ ವತಿಯಿಂದ ಬ್ರಹತ್ ಪ್ರತಿಭಟನೆ – ರಭಸವಾಗಿ ಬಂದ ಗೂಡ್ಸ್ ವಾಹನ ಅಪಘಾತದಲ್ಲಿ ಕಾಲು ಕಳೆದು ಕೊಂಡ ಲಕ್ಷ್ಮೀ.
ಇಜೇರಿ ಡಿ.18


ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಇಜೇರಿ ಗ್ರಾಮ ಘಟಕದ ವತಿಯಿಂದ ಕಲಬುರಗಿ ವಿಭಾಗದ ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಿಂದ ಯಡ್ರಾಮಿ ವರೆಗೆ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿ ನಡೆದಿರುವ ಕಡೆ ಮುಂಜಾಗ್ರತಾ ಕ್ರಮವಾಗಿ ಸೂಚನಾ ಫಲಕವನ್ನು ಅಳವಡಿಸದ ಕಾರಣ ಇಜೇರಿ ಶಾಲೆಯ ಮುಂದೆ ಮುಖ್ಯ ರಸ್ತೆ ಕಡೆ ಲಕ್ಷ್ಮೀ ತಂದೆ ನರಸಿಂಗಪ್ಪ ಸಗರ ೧ ನೇ. ತರಗತಿ ವಿದ್ಯಾರ್ಥಿನಿ ನೀರು ಕುಡಿಯಲು ಬಂದಿದ್ದು, ರಭಸವಾಗಿ ಬಂದ ಗೂಡ್ಸ್ ವಾಹನ ವಿದ್ಯಾರ್ಥಿನಿಗೆ ಕಾಲಿನ ಮೇಲೆ ಹರಿದು ಹೋದ ಪರಿಣಾಮ ಅಪಘಾತದಲ್ಲಿ ವಿದ್ಯಾರ್ಥಿನಿಯ ಕಾಲು ಕಳೆದು ಕೊಂಡಿದ್ದು, ಇದಕ್ಕೆ ಮುಖ್ಯ ಕಾರಣ ಎಂದರೆ ಮುಖ್ಯ ರಸ್ತೆ ಕಾಮಗಾರಿ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ಕಾಮಗಾರಿ ನಡೆದಿರುವ ಬಗ್ಗೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮವಾಗಿ ಸೂಚನಾ ಫಲಕ ಹಾಕಿರುವುದಿಲ್ಲ, ಶಾಲೆಗಳ ಮುಂದೆ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಫಲಕ ಹಾಕದ ಕಾರಣ ಈ ಅಫಘಾತವಾಗಿದ್ದು, ರಸ್ತೆ ನಡೆದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಸೂಚನಾ ಫಲಕಗಳು, ಭದ್ರತಾ ಬ್ಯಾರಿಕೇಡ್ಗಳು, ರಾತ್ರಿಯ ಎಚ್ಚರಿಕೆ ದೀಪಗಳು ಹಾಕಿರುವುದಿಲ್ಲ ಮತ್ತು ವಾಹನ ನಿಯಂತ್ರಣ ವ್ಯವಸ್ಥೆಗಳು ಅಳವಡಿಸಲಾಗಿಲ್ಲ ಇದಕ್ಕೆ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಕೂಡಲೇ ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ, ಅಪಘಾತದಲ್ಲಿ ಕಾಲು ಕಳೆದುಕೊಂಡ ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಲೋಕೋಪಯೋಗಿ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ನೀಡಿದರು. ಕೂಡ ಇಲ್ಲಿಯ ವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ನಡೆ ಖಂಡಿಸಲಾಯಿತು.


ಹಾಗೂ ಸದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕು.ಲಕ್ಷ್ಮೀ ತಂದೆ ನರಸಿಂಗಪ್ಪ ಸಗರ ೧ ನೇ. ತರಗತಿ ವಿದ್ಯಾರ್ಥಿನಿ ಕಾಲು ಕಳೆದು ಕೊಂಡಿದ್ದು, ಇದಕ್ಕೆ ಮುಖ್ಯವಾಗಿ ಶಾಲೆಯ ಶಿಕ್ಷಕರ ನಿರ್ಲಕ್ಷ್ಯ ಕೂಡ ಎದ್ದು ಕಾಣುತ್ತದೆ,೧ ನೇ. ತರಗತಿ ವಿದ್ಯಾರ್ಥಿನಿಗೆ ಶಾಲೆಯ ಮುಂಭಾಗದಲ್ಲಿ ಇರುವ ಮುಖ್ಯ ರಸ್ತೆಗೆ ನೀರು ಕುಡಿಯಲು ಕಳಿಸಿದ್ದು ಯಾಕೇ? ಶಾಲೆಯಲ್ಲಿ ಮೂಲಭೂತ ಸೌಲಭ್ಯ ಕೊರತೆ ತಾಂಡವಾಡುತ್ತಿದೆ ಕೂಡಲೇ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಶಾಲೆಯ ಮುಖ್ಯಸ್ಥ ಜಗನಾಥ ಬಿರಾದಾರ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಹೋರಾಟದಲ್ಲಿ ಆಗ್ರಹಿಸಲಾಯಿತ್ತು.

ದಿನಾಂಕ:೧೮-೧೨-೨೦೨೫ ರಂದು ೨ ತಾಸುಗಳ ಕಾಲ ಜೇವರ್ಗಿ ಮತ್ತು ಯಡ್ರಾಮಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗಿತ್ತು, ಕೂಡಲೇ ಒಂದು ವಾರದ ಒಳಗಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಕಾಲು ಕಳೆದುಕೊಂಡು ವಿದ್ಯಾರ್ಥಿನಿಗೆ ರಾಜ್ಯ ಸರ್ಕಾರದ ೨ ಕೋಟಿ ರೂಪಾಯಿ ಪರಿಹಾರದ ಜೊತೆಗೆ ಮಾನವೀಯತೆಯ ದೃಷ್ಟಿಯಿಂದ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ, ರೈತ ಹೋರಾಟಗಾರ ಅಲ್ಲಾಪಟೇಲ್ ಮಾಲಿಬಿರಾದಾರ, ಇಜೇರಿ ಗ್ರಾಮ ಘಟಕ ಅಧ್ಯಕ್ಷ ನಿಂಗಣ್ಣ ಎಂ ಚಿಗರಹಳ್ಳಿ, ಜೇವರ್ಗಿ ತಾಲ್ಲೂಕು ಘಟಕ ಅಧ್ಯಕ್ಷ ಸಿದ್ದು ಕವಲ್ದಾರ, ಯಡ್ರಾಮಿ ತಾಲ್ಲೂಕು ಘಟಕ ಅಧ್ಯಕ್ಷ ಪರಶುರಾಮ ಟಣಕೇದಾರ, ಭೀಮು ಖಾದ್ಯಾಪೂರ, ವೆಂಕಟೇಶ ಗುತ್ತೇದಾರ, ಸೈದಪ್ಪ ಹೊಸಮನಿ, ಯಲ್ಲಪ್ಪ ದೊರೆ, ರಮೇಶ ಮೇಲಗಿರಿ, ಪರಶುರಾಮ ಕಿಲೆದಮನಿ, ದೌಲತರಾಯ ನೀರಲಕೋಡ, ಹಣಮಂತ ತೆಗಿನಕೇರಿ, ಭೀಮು ಕಿಲೆದಮನಿ, ಮಲ್ಲಪ್ಪ ಪೂಜಾರಿ, ಗುಂಡೇಶ ಕೆ, ಮೊಹ್ಮದ್ ಸಿಪಾಯಿ, ಸುರೇಶ ಹಡಪದ, ನಿಂಗಪ್ಪ ಚಿಗರಹಳ್ಳಿ, ಈರಪ್ಪ ಕೋಳ್ಯಾಳ, ದೇವು ಮುತ್ತಕೋಡ, ಗೋಲು ಯಂಕಂಚಿ, ಇಲಿಯಾಸ್ ಪಟೇಲ್, ಕಳೆಪ್ಪ ಭೋವಿ ಹಾಗೂ ನೂರಾರು ಜನರು ಪ್ರತಿಭಟನೆಯಲ್ಲಿ ಇದ್ದರು.

