🚨 ಪತ್ರಿಕಾ ವಿಶೇಷ ಸ್ಫೋಟಕ ವರದಿ, ಕರ್ನಾಟಕ ಪೊಲೀಸ್ ಇಲಾಖೆಯ ‘ಮಹಾ ಕರ್ಮಕಾಂಡ’ ಬಯಲು! 🚨”ಬೇಲಿಯೇ ಎದ್ದು ಹೊಲ ಮೇಯ್ದರೆ ನ್ಯಾಯ ಸಿಗುವುದು ಎಲ್ಲಿ?” – ಭ್ರಷ್ಟಾಚಾರದ ಕೂಪದಲ್ಲಿ ತನಿಖಾಧಿಕಾರಿಗಳೇ ಅಂದರ್..!
ಬೆಂಗಳೂರು/ಉಡುಪಿ ಡಿ.19

ಪ್ರಜ್ಞಾವಂತರ ನಾಗರಿಕರ ನಾಡಲ್ಲಿ ಸಾಂಘಿಕ ಹೋರಾಟಕ್ಕೆ ಸಂದ ಜಯ…..
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕಾದ ಲೋಕಾಯುಕ್ತ ಇಲಾಖೆಯೇ ಈಗ ಭ್ರಷ್ಟರ ಅಡ್ಡವಾಗುತ್ತಿದೆಯೇ? ಉಡುಪಿ ಲೋಕಾಯುಕ್ತದ ಮಾಜಿ ಡಿವೈಎಸ್ಪಿ ಮಂಜುನಾಥ್ ಲಂಚದ ಪ್ರಕರಣದಲ್ಲಿ ಸಿಕ್ಕಿಬಿದ್ದು, ಪ್ರಭಾರದಿಂದ ಕಿತ್ತೊಗೆಯಲ್ಪಟ್ಟಿರುವುದು ಇಡೀ ಪೊಲೀಸ್ ವ್ಯವಸ್ಥೆಯ ಅಧಃ ಪತನಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕರ ದೂರಿನ ಬೆನ್ನಲ್ಲೇ ಈ ‘ಖಾಕಿ’ ಭ್ರಷ್ಟನ ಅಸಲಿ ಮುಖವಾಡ ಕಳಚಿ ಬಿದ್ದಿದೆ!
🔥 ಲೋಕಾಯುಕ್ತದ ಹೆಸರಲ್ಲಿ ಲೂಟಿ ದರ್ಬಾರ್!📍
ಡೀಲ್ ಸಂಸ್ಕೃತಿಯೇ ಲೋಕಾಯುಕ್ತದ ಬಂಡವಾಳವೇ..?ನ್ಯಾಯ ಕೊಡಿಸಬೇಕಾದ ಲೋಕಾಯುಕ್ತ ಅಧಿಕಾರಿಗಳೇ ದೂರುದಾರರ ಜೊತೆ ‘ಸೆಟಲ್ಮೆಂಟ್’ ಮತ್ತು ‘ಡೀಲ್’ ಮಾಡಿಕೊಳ್ಳುತ್ತಿರುವುದು ಆಘಾತಕಾರಿ. ಉಡುಪಿ ಡಿವೈಎಸ್ಪಿ ಮಂಜುನಾಥ್ ಅವರ ಲಂಚದ ವಿಚಾರ ಮಾಧ್ಯಮಗಳಲ್ಲಿ ಸ್ಫೋಟಗೊಳ್ಳುತ್ತಿದ್ದಂತೆ ಇಲಾಖೆಯ ಮರ್ಯಾದೆ ಹರಾಜಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಬೇಕಾದವರೇ ಇಂದು ಕಪ್ಪು ಹಣದ ಗುಲಾಮರಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
📍 ಆಸ್ತಿ ವಿವರದ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ಆಗಲಿ..!
ಮಂಜುನಾಥ್ ಸರ್ಕಾರಿ ಸೇವೆಗೆ ಸೇರ್ಪಡೆ ಯಾಗುವಾಗ ಇದ್ದ ಆಸ್ತಿ ಎಷ್ಟು? ಇಂದು ಆತ ಹೊಂದಿರುವ ಐಷಾರಾಮಿ ಆಸ್ತಿಪಾಸ್ತಿಗಳ ಮೂಲ ಯಾವುದು? ಈತನ ಸೇವಾ ಅವಧಿಯ ಸಂಪೂರ್ಣ ಆಸ್ತಿ ವಿವರಗಳ ಬಗ್ಗೆ ಲೋಕಾಯುಕ್ತ ವಿಶೇಷ ತಂಡದಿಂದ ತನಿಖೆಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
🚨 ಬ್ರಹ್ಮಾವರ ಹಲ್ಲೆ ಪ್ರಕರಣ – ಬೆತ್ತಲಾದ ಪೊಲೀಸ್ ಅರಾಜಕತೆ..!
ರಾಜ್ಯಾದ್ಯಂತ ‘ಖಾಕಿ’ ವಿರುದ್ಧ ಮೊಳಗಿದ ಜನಾಕ್ರೋಶ! ಕಾಯಬೇಕಾದವರೇ ಕಳ್ಳರಾದರೆ ಜನಸಾಮಾನ್ಯರಿಗೆ ಎಲ್ಲಿ ಉಳಿಗಾಲ? ಸಂವಿಧಾನಬದ್ಧ ಜವಾಬ್ದಾರಿ ಮರೆತ ಅಧಿಕಾರಿಗಳ ದರ್ಬಾರ್‌ಗೆ ಸರ್ಕಾರದ ಮೌನವೇಕೆ? ಬ್ರಹ್ಮಾವರದ ಅಕ್ಷತಾ ಪೂಜಾರಿ ಪ್ರಕರಣವು ಇಂದು ಇಡೀ ರಾಜ್ಯ ಪೊಲೀಸ್ ಇಲಾಖೆಯ ಅಸಲಿ ಮುಖವನ್ನು ಬಯಲು ಮಾಡಿದೆ!
⛔ ಜನಾಕ್ರೋಶಕ್ಕೆ ಮಣಿದ ಇಲಾಖೆ – ಅಕ್ಷತಾ ಪೂಜಾರಿ ಪರ ಹೋರಾಟಕ್ಕೆ ಸಂದ ಜಯ..!
ಬ್ರಹ್ಮಾವರದಲ್ಲಿ ನಡೆದ ಯುವತಿ ಅಕ್ಷತಾ ಪೂಜಾರಿ ಮೇಲಿನ ಭೀಕರ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು ಹಾಕಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿ.
ಬೃಹತ್ ಪ್ರತಿಭಟನೆ:-
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ಸಾವಿರಾರು ಜನರ ಪ್ರತಿಭಟನೆಗೆ ಇಲಾಖೆ ನಡುಗಿದೆ.
ಎಸ್‌ಪಿ ಹರಿರಾಂ ಶಂಕರ್ ಮಧ್ಯಪ್ರವೇಶ:-
ಜನಾಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಎಸ್‌ಪಿ, ತಕ್ಷಣ FIR ದಾಖಲಿಸಲು ಸಮ್ಮತಿ ನೀಡಿದ್ದಲ್ಲದೆ, ತನಿಖೆಯನ್ನು ಉನ್ನತ ಮಟ್ಟದ ಘಟಕಕ್ಕೆ ವರ್ಗಾಯಿಸಿದ್ದಾರೆ.
💥 ಪೊಲೀಸ್ ಇತಿಹಾಸದ ಕಪ್ಪು ಚುಕ್ಕೆ – PSI ನೇಮಕಾತಿ ಮಹಾ ಹಗರಣ..!
ಕೇವಲ ನೇಮಕಾತಿಯಲ್ಲಿ ಮಾತ್ರವಲ್ಲದೆ, ಸೇವೆಯಲ್ಲಿರುವ ಪಿಎಸ್ಐಗಳು ಮಾಡಿದ ಹಗರಣಗಳು ಇಲಾಖೆಯ ಘನತೆಗೆ ಧಕ್ಕೆ ತಂದಿವೆ.
545 PSI ನೇಮಕಾತಿ ಹಗರಣ (2021-22):-
ಒಎಂಆರ್ (OMR) ಶೀಟ್ ತಿದ್ದಿ, ಒಂದೊಂದು ಹುದ್ದೆಗೆ 70 ಲಕ್ಷದಿಂದ 1 ಕೋಟಿ ರೂ. ವರೆಗೆ ಲಂಚ ಪಡೆಯಲಾಗಿತ್ತು. ಎಡಿಜಿಪಿ ಅಮೃತ್ ಪಾಲ್ ಸೇರಿದಂತೆ ಉನ್ನತ ಅಧಿಕಾರಿಗಳು ಜೈಲು ಪಾಲಾದರು.
ಸೇವೆಯಲ್ಲಿರುವವರ ಅಕ್ರಮಗಳು:-
ಹಫ್ತಾ ವಸೂಲಿ:-
ಸಿವಿಲ್ ಸೆಟಲ್ಮೆಂಟ್ ಮತ್ತು ವರ್ಗಾವಣೆ ದಂಧೆ.
ಬೆಟ್ಟಿಂಗ್ ರಕ್ಷಣೆ:-
ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟದ ಅಡ್ಡೆಗಳಿಂದ ಮಾಸಿಕ ಲಂಚ.
ಬಿಟ್ ಕಾಯಿನ್ ಮತ್ತು ಗಾಂಜಾ ದಂಧೆ:-
ಹ್ಯಾಕರ್ ಶ್ರೀಕಿ ಪ್ರಕರಣದ ನಂಟು ಮತ್ತು ವಶ ಪಡಿಸಿ ಕೊಂಡ ಗಾಂಜಾವನ್ನು ಪುನಃ ಮಾರಾಟ ಮಾಡುವ ಕೃತ್ಯ.
🔥 ಪೊಲೀಸ್ ಇಲಾಖೆಯ ಬೆತ್ತಲೆ ಜಗತ್ತು:-
ಜೀಪ್ ಡ್ರೈವರ್‌ಗಳೂ ಕೋಟ್ಯಧಿಪತಿಗಳು!
📍 ಅಕ್ರಮ ಸಂಪತ್ತಿನ ಅರಮನೆಗಳು:-
ಕಾನ್ಸ್ಟೇಬಲ್ ಮತ್ತು ಜೀಪ್ ಡ್ರೈವರ್‌ಗಳ ಐಷಾರಾಮಿ ಜೀವನ ಕಂಡು ಜನರೇ ಬೆಚ್ಚಿಬಿದ್ದಿದ್ದಾರೆ. ಇವರ ಮನೆಯ ಮುಂದೆ ನಿಲ್ಲುವ ಲಕ್ಷಾಂತರ ಮೌಲ್ಯದ ಕಾರುಗಳು, ನಗರದ ಮಧ್ಯಭಾಗದಲ್ಲಿರುವ ಬೆಲೆಬಾಳುವ ಆಸ್ತಿಗಳು ಇವರ ಸಂಬಳದಿಂದ ಬಂದವೇ? ಅಥವಾ ಸಾರ್ವಜನಿಕರ ರಕ್ತ ಹೀರಿ ಗಳಿಸಿದವೇ?
⚠️ ಸರ್ಕಾರಕ್ಕೆ ಮತ್ತು ಗೃಹ ಸಚಿವರಿಗೆ ನೇರ ಪ್ರಶ್ನೆಗಳು:-
ಅಮಾನತು ಸಾಲದು, ಜೈಲಿಗಟ್ಟಿ: ಮಂಜುನಾಥ್‌ರಂತಹ ಭ್ರಷ್ಟರನ್ನು ಕೇವಲ ಪ್ರಭಾರದಿಂದ ಮುಕ್ತಗೊಳಿಸಿದರೆ ಸಾಲದು, ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ಮೌನವೇಕೆ..?:-
ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಿಮ್ಮ ಕಣ್ಣೆದುರೇ ಕಾನೂನು ಭಕ್ಷಕರಾಗುತ್ತಿದ್ದರೂ ನೀವು ಮೌನವಾಗಿದ್ದೇಕೆ? ಭ್ರಷ್ಟಾಚಾರದ ಕೂಪವಾಗಿರುವ ಈ ವ್ಯವಸ್ಥೆಗೆ ಕಡಿವಾಣ ಹಾಕುವುದು ಯಾವಾಗ?
💥 ಸಂವಿಧಾನದ ನಾಲ್ಕನೇ ಅಂಗದ ಗುಡುಗು..!”
ವ್ಯವಸ್ಥೆಯನ್ನು ಸರಿಪಡಿಸಬೇಕಾದವರೇ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇದು ಕೇವಲ ಸುದ್ದಿಯಲ್ಲ, ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಎಚ್ಚರಿಕೆ!”
🚩 ಕಾನೂನಾತ್ಮಕ ಬೇಡಿಕೆಗಳು:-
ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳ ಅಘೋಷಿತ ಆಸ್ತಿ ವಿವರ ಬಹಿರಂಗವಾಗಲಿ. ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳ ಮೇಲೆ FIR ದಾಖಲಾಗಲಿ.ಇಲಾಖೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ನಿಯಮಗಳ ಪಾಲನೆಯಾಗಲಿ.
ವರದಿ:ಆರತಿ.ಗಿಳಿಯಾರು.ಉಡುಪಿ

