🚨 ಬ್ರೇಕಿಂಗ್ ನ್ಯೂಸ್ (Breaking News) 🚨🚨 ಹಾರೂಗೇರಿ ತಾಲೂಕು ಘೋಷಣೆಗೆ ಆಗ್ರಹ – ಇಂದು ಹಾರೂಗೇರಿ ಪಟ್ಟಣ ಸಂಪೂರ್ಣ ಬಂದ್! 🚨
ಹಾರೂಗೇರಿ ಡಿ.19

ಹಾರೂಗೇರಿ, ರಾಯಭಾಗ ತಾಲೂಕು, ಬೆಳಗಾವಿ ಜಿಲ್ಲೆಯ ದಶಕಗಳ ಬೇಡಿಕೆಯಾದ ‘ಹಾರೂಗೇರಿ ತಾಲೂಕು’ ರಚನೆಗಾಗಿ ಬೀದಿಗಿಳಿದ ಜನತೆ.
ಪ್ರಭಾವ:-
ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್, ಸಾರಿಗೆ ಸಂಚಾರ ಸ್ಥಗಿತ.
ಬೆಂಬಲ:-
20ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿಂದ ಹೋರಾಟಕ್ಕೆ ಅಧಿಕೃತ ಬೆಂಬಲ. ಒತ್ತಾಯ:-
ಭೌಗೋಳಿಕವಾಗಿ ಅರ್ಹತೆ ಹೊಂದಿದ್ದರೂ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರಕ್ಕೆ ರಾಯಭಾಗ ತಹಸೀಲ್ದಾರ್ ಮೂಲಕ ಮನವಿ.
ಹಾರೂಗೇರಿ ತಾಲೂಕು ಕೇಂದ್ರವಾಗಲಿ:-
ಬೃಹತ್ ಪ್ರತಿಭಟನೆ, ಪಟ್ಟಣ ಸಂಪೂರ್ಣ ಬಂದ್!
ಬೆಳಗಾವಿ:-
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣವನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಿಸ ಬೇಕೆಂದು ಆಗ್ರಹಿಸಿ ಇಂದು ‘ತಾಲೂಕಾ ಹೋರಾಟ ಸಮಿತಿ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಂದ್ ಅಭೂತಪೂರ್ವ ಯಶಸ್ಸು ಕಂಡಿದೆ. ದಶಕಗಳ ಕಾಲದ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ತಬ್ಧಗೊಂಡ ಜನ ಜೀವನ:-
ಬೆಳ್ಳಂ ಬೆಳಗ್ಗೆಯಿಂದಲೇ ರಸ್ತೆಗಿಳಿದ ಹೋರಾಟಗಾರರು, ಹಾರೂಗೇರಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿದರು. ಹೋಟೆಲ್, ಸಿನೆಮಾ ಮಂದಿರಗಳು, ಸಾರಿಗೆ ವ್ಯವಸ್ಥೆ ಹಾಗೂ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಈ ಬಂದ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿದರು.
ಗ್ರಾಮ ಪಂಚಾಯತಿಗಳ ಬೆಂಬಲ:-
ಈ ಬಾರಿಯ ಹೋರಾಟಕ್ಕೆ ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಠರಾವು ಪಾಸು ಮಾಡುವ ಮೂಲಕ ಬೆಂಬಲ ಸೂಚಿಸಿರುವುದು ವಿಶೇಷ. ಹಾರೂಗೇರಿಯು ಭೌಗೋಳಿಕವಾಗಿ ಎಲ್ಲಾ ಅರ್ಹತೆಗಳನ್ನು ಹೊಂದಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನದಲ್ಲಿದೆ. ಆದರೂ ಸರ್ಕಾರ ಇದನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ವಿಳಂಬ ಮಾಡುತ್ತಿರುವುದು ತಾರತಮ್ಯದ ಪರಮಾವಧಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಸಮಿತಿಯ ಪ್ರಮುಖ ಬೇಡಿಕೆಗಳು:-
ಹಾರೂಗೇರಿ ಪಟ್ಟಣವು ಆರ್ಥಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿದ್ದು, ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಲು ಸೂಕ್ತವಾಗಿದೆ.
ದೂರದ ರಾಯಭಾಗಕ್ಕೆ ತೆರಳಲು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಈ ಕೂಡಲೇ ತಾಲೂಕು ಘೋಷಣೆ ಮಾಡಬೇಕು.
ಹಲವು ದಶಕಗಳಿಂದ ಕೇವಲ ಭರವಸೆಗಳನ್ನು ನೀಡುತ್ತಿರುವ ಸರ್ಕಾರ, ಈ ಬಾರಿ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಯಭಾಗ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹೋರಾಟ ಸಮಿತಿಯು ಮನವಿಯನ್ನು ಸಲ್ಲಿಸಿತು. “ನಮ್ಮ ಬೇಡಿಕೆ ಈಡೇರುವವರೆಗೂ ಈ ಹೋರಾಟ ನಿಲ್ಲದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುವುದು” ಎಂದು ಹೋರಾಟ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ

